ಮೊದಲು ಒಂದು ಪಾತ್ರೆಯಲ್ಲಿ ನೀರು ಮತ್ತು ಸಕ್ಕರೆಯನ್ನು ಹಾಕಿ. ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಬೇಕು.
ಸಕ್ಕರೆ ಪಾಕದಂತೆ ಸಿದ್ಧವಾಗುತ್ತಿದ್ದಂತೆ ಪಾತ್ರೆಯನ್ನು ಕೆಳಗಿಳಿಸಿ ಇದಕ್ಕೆ ಹಾಲಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ನಂತರ ಕೋಕೋ ಪೌಡರ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದಕ್ಕೆ ಬೆಣ್ಣೆಯನ್ನು ಸೇರಿಸಬೇಕು.
ಚಾಕೋಲೇಟ್ ಸುಗಂಧಕ್ಕಾಗಿ ವೆನಿಲ್ಲಾ ಎಸೆನ್ಸ್ ಹಾಕಬೇಕು. ನಂತರ ಇದ್ದಕ್ಕೆ ಸಣ್ಣದಾಗಿ ಕತ್ತರಿಸಿಕೊಂಡ ಬಾದಾಮಿ ಚೂರುಗಳನ್ನು ಹಾಕಿ ಮಿಶ್ರಣ ಮಾಡಬೇಕು.
ಈಗ ಚಾಕೋಲೇಟ್ ಮಿಶ್ರಣ ತಯಾರಾಗುತ್ತದೆ. ಈ ಮಿಶ್ರಿಣವನ್ನು ಚಾಕಲೇಟ್ ಮೌಲ್ಡ್ಸ್ ಗಳಿಗೆ ಹಾಕಿ ಸುಮಾರು 45 ನಿಮಿಷಗಳವರೆಗೆ ಫ್ರಿಡ್ಜ್ ನಲ್ಲಿಡಬೇಕು. ಈಗ ರುಚಿಕರವಾಗ ಬಾದಾಮಿ ಚಾಕೋಲೇಟ್ ತಿನ್ನಲು ಸಿದ್ಧ.