1 ವರ್ಷದ ಮಗುವಿಗೆ 10 ನಿಮಿಷದಲ್ಲಿ ಮಾಡಬಹುದಾದ ಬೇಬಿ ಫುಡ್
1 ವರ್ಷದ ಮಗುವಿಗೆ ಆಹಾರ ಕೊಡಲು ಹರಸಾಹಸ ಪಡಬೇಕು.ಆರೋಗ್ಯವಾದ, ಸುಲಭವಾಗಿ ಮಾಡಬಹುದು 2 ರೀತಿ ಆಹಾರಗಳು ಇಲ್ಲಿವೆ..
1. ಕ್ಯಾರೆಟ್ ಪೋಟೋಟೋ ರೈಸ್
ಬೇಕಾಗುವ ಸಾಮಾಗ್ರಿಗಳು
- ಅಕ್ಕಿ – 2 ಚಮಚ
- ಕ್ಯಾರೆಟ್ – 1
- ಆಲೂಗೆಡ್ಡೆ – 1
ಮಾಡುವ ವಿಧಾನ:
* ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ.ಸ್ವಲ್ಪ ಹೊತ್ತು ನೆನೆಸಿಡಿ
* ಕ್ಯಾರೆಟ್ ಮತ್ತು ಆಲೂಗಡ್ಡೆಯ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿಕೊಳ್ಳಿ.
* ನಂತರ ಅಕ್ಕಿ, ಆಲೂಗಡ್ಡೆ ಮತ್ತು ಕ್ಯಾರೆಟ್ ತೊಳೆದು ಕುಕ್ಕರಿಗೆ ಹಾಕಿ ನಾಲ್ಕು ವಿಶಲ್ ಬರುವರೆಗೂ ಚೆನ್ನಾಗಿ ಬೇಯಿಸಿರಿ.
* ಬೇಯಿಸಿದ ಬಳಿಕ ಅದನ್ನು ಸ್ಮ್ಯಾಶ್ ಮಾಡಿಕೊಳ್ಳಿ.
* ಸ್ವಲ್ಪ ಉಪ್ಪು, ತುಪ್ಪ ಹಾಕಿ ಮಿಕ್ಸ್ ಮಾಡಿದರೆ ಆರೋಗ್ಯಯುತವಾದ ಕ್ಯಾರೆಟ್ ಪೋಟೋಟೋ ರೈಸ್ ರೆಡಿ.
2. ಸೇಬು ಮತ್ತು ಬಾಳೆಹಣ್ಣು ಮತ್ತು ಅಕ್ಕಿ ಗಂಜಿ
ಬೇಕಾಗುವ ಸಾಮಾಗ್ರಿಗಳು
- ಅಕ್ಕಿ – ಎರಡು ಚಮಚ
- ಸೇಬು -1
- ಬಾಳೆಹಣ್ಣು – 1
ಮಾಡುವ ವಿಧಾನ
* ಮೊದಲಿಗೆ ಅಕ್ಕಿಯನ್ನು ಎರಡು ಬಾರಿ ತೊಳೆದು ಸ್ವಲ್ಪ ಹೊತ್ತು ನೆನೆಸಿಡಿ
* ನಂತರ ಸೇಬಿನ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿ.
* ಅಕ್ಕಿ ಮತ್ತು ಸೇಬನ್ನು ಕುಕ್ಕರಿಗೆ ಹಾಕಿ 2 ವಿಶಲ್ ಬರುವವರೆಗೂ ಬೇಯಿಸಿ.
* ನಂತರ ಅದನ್ನು ಮಿಕ್ಸಿಗೆ ಹಾಕಿ ಅದಕ್ಕೆ ಬಾಳೆಹಣ್ಣನ್ನು ಪೀಸ್ ಪೀಸ್ ಮಾಡಿ ಹಾಕಿ ರುಬ್ಬಿಕೊಳ್ಳಿ.
* ಬಳಿಕ ಒಂದು ಬೌಲ್ ಗೆ ಹಾಕಿ ಮಕ್ಕಳಿಗೆ ತಿನ್ನಿಸಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.