ಫಿಂಗರ್ ಚಿಪ್ಸ್ ಅಥವಾ ಫ್ರೆಂಚ್ ಫ್ರೈಸ್ ಬೇಕಾಗುವ ಸಾಮಾಗ್ರಿ
- ಆಲೂಗಡ್ಡೆ – 2ದೊಡ್ಡದು
- ಪುಡಿ ಉಪ್ಪು
- ಅಚ್ಚ ಮೆಣಸಿನಕಾಯಿ ಪುಡಿ- 1/2 ಚಮಚ
- ಕಾಳುಮೆಣಸಿನ ಪುಡಿ – 1/4 ಚಮಚ
ಫಿಂಗರ್ ಚಿಪ್ಸ್ ಅಥವಾ ಫ್ರೆಂಚ್ ಫ್ರೈಸ್ ಮಾಡುವ ವಿಧಾನ
- ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ತೆಗೆದು ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ.
- ಇದನ್ನು ಫ್ರಿಜ್ ನೀರಿನಲ್ಲಿ 20 ನಿಮಿಷ ನೆನೆಸಿಡಿ.
- ನಂತರ ನೀರು ಬಸಿದು ಉಪ್ಪು ಹಾಕಿ. ಬಿಸಿ ನೀರಿನಲ್ಲಿ ಹಾಕಿ 10 ನಿಮಿಷ ಬೇಯಿಸಿ.
- ನಂತರ ನೀರನ್ನು ಬಸಿದುಕೊಂಡು, ಆಲೂ ಪೀಸ್ ಗಳನ್ನು ತೆಗೆದು ಕಾಟನ್ ಬಟ್ಟೆಗೆ ಹಕಿ ಚೆನ್ನಾಗಿ ಒತ್ತಿ
- ಮೀಡಿಯಂ ಉರಿಯಲ್ಲಿ ಇಟ್ಟು ಎಣ್ಣೆಯಲ್ಲಿ ಕರಿಯಿರಿ. ಒಂದು ಪಾತ್ರೆಗೆ ಸ್ವಲ್ಪ ಉಪ್ಪು, ಅಚ್ಚಖಾರದ ಪುಡಿ ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ಕಲಸಿಟ್ಟುಕೊಳ್ಳಿ.
- ಈ ಪುಡಿಯನ್ನು ಕರಿದ ಫಿಂಗರ್ ಚಿಪ್ಸ್ಗಳ ಮೇಲೆ ಉದುರಿಸಿ. ರುಚಿಕರ ಫಿಂಗರ್ಸ್ ಚಿಪ್ಸ್ ಸವಿಸಲು ಸಿದ್ದ.