ಸಿಹಿ ಕುಂಬಳಕಾಯಿ ಸೂಪ್
ಸಿಹಿ ಕುಂಬಳಕಾಯಿ ಸೂಪ್ ಮಾಡುವ ವಿಧಾನ.
ಸಿಹಿ ಕುಂಬಳಕಾಯಿ ಸೂಪ್
ಬೇಕಾಗುವ ಪದಾರ್ಥಗಳು
ಸಿಹಿ ಕುಂಬಳಕಾಯಿ -250 ಗ್ರಾಂ
ತೆಂಗಿನ ಕಾಯಿ ಹಾಲು - 1/2 ಕಪ್
ಬೇಯಿಸಿದ ಜೋಳ- 50 ಗ್ರಾಂ
ತೆಳುವಾಗಿ ಕತ್ತರಿಸಿದ ಹಸಿ ಹಸಿರು ಕ್ಯಾಪ್ಸಿಕಂ ಅಲಂಕಾರಕ್ಕೆ-50 ಗ್ರಾಂ
ಮಾಡುವ ವಿಧಾನ
1 ಕಪ್ ನೀರು ಸೇರಿಸಿ ಸಿಹಿ ಕುಂಬಳಕಾಯಿಯನ್ನು ಚೆನ್ನಾಗಿ ಬೇಯಿಸಿ, ಸಿಪ್ಪೆ ತೆಗೆಯುವ ಅಗತ್ಯವಿಲ್ಲ. ನಂತರ ಸಿಹಿ ಕುಂಬಳಕಾಯಿಯನ್ನು ಹೊರತೆಗೆದು ತಣ್ಣಗಾಗಲು ಬಿಡಿ. ನುಣ್ಣಗೆ ರುಬ್ಬಿಕೊಳ್ಳಿ.
ಬಾಣಲೆಯಲ್ಲಿ 1 ಕಪ್ ನೀರು ಹಾಕಿ ಕುದಿಸಿ. ಅದು ಕುದಿಯಲು ಪ್ರಾರಂಭವಾದ ನಂತರ, ಗ್ಯಾಸ್ ಆಫ್ ಮಾಡಿ, ತೆಂಗಿನಕಾಯಿ ಹಾಲು ಸೇರಿಸಿ ಚೆನ್ನಾಗಿ ಬೆರೆಸಿ ಸ್ವಲ್ಪ ಕುದಿಸಿ ಉಪ್ಪು ಹಾಕಿ ಮುಚ್ಚಿಡಿ. ಇದನ್ನು ತೆಳುವಾಗಿ ಕತ್ತರಿಸಿದ ಕ್ಯಾಪ್ಸಿಕಂ ಮತ್ತು ಬೇಯಿಸಿದ ಜೋಳದಿಂದ ಅಲಂಕರಿಸಿ ಬಿಸಿ ಇರುವಾಗಲೆ ಸೇವಿಸಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.