ಬೀಟ್ರೂಟ್ ಹಲ್ವಾ
ರುಚಿಯಾದ ಬೀಟ್ರೂಟ್ ಹಲ್ವಾ ಮಾಡುವ ಪಾಕವಿಧಾನ.
ಬೇಕಾಗುವ ಪದಾರ್ಥಗಳು
- ಬೀಟ್ರೂಟ್: 2, ಮಧ್ಯಮ ಗಾತ್ರದ್ದು
- ಹಾಲು: 1 ಕಪ್
- ಸಕ್ಕರೆ: 1/2 ಕಪ್
- ತುಪ್ಪ: 2 ಚಮಚ
- ಖೋಯಾ: 100 ಗ್ರಾಂ
- ಹಸಿರು ಏಲಕ್ಕಿ: 1 ಚಮಚ
- ಗೋಡಂಬಿ: 6, ಒಡೆದದ್ದು
- ಒಣದ್ರಾಕ್ಷಿ: 8
- ತುಪ್ಪ: 2 ಚಮಚ
ಮಾಡುವ ವಿಧಾನ
- ಬೀಟ್ರೂಟ್ ತುರಿ ಮತ್ತು ಗೋಡಂಬಿ / ಬಾದಾಮ್ ಮತ್ತು ಒಣದ್ರಾಕ್ಷಿಗಳನ್ನು ತುಪ್ಪದಲ್ಲಿ ಫ್ರೈ ಮಾಡಿ.
- ಅದೇ ಪ್ಯಾನ್ ನಲ್ಲಿ ತುರಿದ ಬೀಟ್ರೂಟ್ ಸೇರಿಸಿ ಮತ್ತು ಸುಮಾರು ಐದು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಹುರಿಯಿರಿ.
- ಈಗ ಅದಕ್ಕೆ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಾಣಲೆಯನ್ನು ಮುಚ್ಚಿ ಮತ್ತು ಸುಮಾರು 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಲು ಬಿಡಿ.
- ನಡುನಡುವೆ ಪ್ಯಾನ್ ನಲ್ಲಿ ಮಿಶ್ರಣವನ್ನು ಕದಡುತ್ತಿರಿ.
- ಬೀಟ್ರೂಟ್ ತುರಿ ಬಹುತೇಕ ಹಾಲಿನಲ್ಲಿ ನೆನೆಸಿದ ನಂತರ, ಅದಕ್ಕೆ ಸಕ್ಕರೆ ಸೇರಿಸಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.
- ಇದಕ್ಕೆ ಖೋಯಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಏಲಕ್ಕಿ ಪುಡಿಯನ್ನು ಸೇರಿಸಿ, ಮಿಶ್ರಣ ಮಾಡಿ ಮತ್ತು ಸ್ಟವ್ ನಿಂದ ಕೆಳಗಿಳಿಸಿ.
ಈಗ ರುಚಿಯಾದ ಬೀಟ್ರೂಟ್ ಹಲ್ವಾ ತಿನ್ನಲು ಸಿದ್ಧವಾಗಿದೆ.
- ಪ್ರಿಯಾ ಶಿವ, ಚೆನ್ನೈ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.