- ಬೆಣ್ಣೆ: 10 ಗ್ರಾಂ
- ಉಪ್ಪು: 1 ಚಮಚ
- ಮೆಣಸು: 1 ಚಮಚ
- ಈರುಳ್ಳಿ: 1
- ಮೊಟ್ಟೆ: 1
- ಕ್ಯಾರೆಟ್: 1
- ಬೇಸನ್: 1 ಚಮಚ
- ಪಾರ್ಸ್ಲಿ
- ಒಂದು ದೊಡ್ಡ ಈರುಳ್ಳಿಯನ್ನು ಸ್ಲೈಸ್ ಮಾಡಿ, ಹೊರಗಿನ ಎಳೆಯನ್ನು (ರಿಂಗ್ ಅನ್ನು) ಬೇರ್ಪಡಿಸಿ ಮತ್ತು ಉಳಿದ ಈರುಳ್ಳಿಯನ್ನು ಚೆನ್ನಾಗಿ ಕತ್ತರಿಸಿ. ಕ್ಯಾರೆಟ್ ತುರಿ ಮಾಡಿಕೊಳ್ಳಿ.
- ಒಂದು ಬಟ್ಟಲಿನಲ್ಲಿ, 1 ಇಡೀ ಮೊಟ್ಟೆಯನ್ನು 1 ಚಮಚ ಬೇಸನ್ನೊಂದಿಗೆ ಚೆನ್ನಾಗಿ ಕದಡಿ. ನಂತರ ಉಪ್ಪು, ಮೆಣಸು, ಕತ್ತರಿಸಿದ ಈರುಳ್ಳಿ ಮತ್ತು ಕ್ಯಾರೆಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಬಿಸಿ ಬಾಣಲೆಗೆ ಬೆಣ್ಣೆಯನ್ನು ಹಾಕಿ ಮತ್ತು ಅದು ಕರಗಿದ ನಂತರ ಕತ್ತರಿಸಿದ ಈರುಳ್ಳಿ ರಿಂಗ್ ಗಳನ್ನು ಅದರ ಮೇಲೆ ಇರಿಸಿ.
- ಮೊಟ್ಟೆಯ ಮಿಶ್ರಣವನ್ನು ಈರುಳ್ಳಿ ರಿಂಗ್ ಗಳ ಒಳಗೆ ಸುರಿಯಿರಿ ಮತ್ತು ಅದು ತುಸು ಕಂದು ಬಣ್ಣ ಬರುವವರೆಗೆ ಎರಡೂ ಬದಿಗಳನ್ನು ಫ್ರೈ ಮಾಡಿ.
ಈರುಳ್ಳಿಯ ಹೊರಗಿನ ಎಳೆಗಳು (ರಿಂಗ್ ಗಳು)ಈಗ ರುಚಿಯಾದ ಎಗ್ ರಿಂಗ್ಸ್ ತಿನ್ನಲು ಸಿದ್ಧವಾಗಿದೆ.
- ಸಿಸಿ ಜಾಕ್ವಿಲಿನ್, ಬೆಂಗಳೂರು