ಅಡುಗೆ

ಎಳ್ಳು ಚಿಕ್ಕಿ

Manjula VN

ಬೇಕಾಗುವ ಪದಾರ್ಥಗಳು...

  • ಬಿಳಿ ಎಳ್ಳು – 1 ಬಟ್ಟಲು
  • ಪುಡಿ ಮಾಡಿದ ಬೆಲ್ಲ – 1 ಬಟ್ಟಲು
  • ನೀರು- ಸ್ವಲ್ಪ
  • ತುಪ್ಪ – ಸ್ವಲ್ಪ
  • ಏಲಕ್ಕಿ ಪುಡಿ – ಕಾಲು ಚಮಚ
  • ಅಡುಗೆ ಸೋಡಾ – ಕಾಲು ಚಮಚ

ಮಾಡುವ ವಿಧಾನ...

  • ಮೊದಲಿಗೆ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಎಳ್ಳನ್ನು ಹಾಕಿಕೊಂಡು 2 ನಿಮಿಷಗಳವರೆಗೆ ಫ್ರೈ ಮಾಡಿಕೊಂಡು ಪಕ್ಕಕ್ಕಿಡಿ.
  • ಬಳಿಕ ಅದೇ ಪ್ಯಾನ್‌ಗೆ ಬೆಲ್ಲ ಹಾಕಿ, 2 ಚಮಚ ನೀರನ್ನು ಸೇರಿಸಿಕೊಳ್ಳಿ. ಮೀಡಿಯಮ್ ಉರಿಯಲ್ಲಿ ಬೆಲ್ಲವನ್ನು ಕರಗಿಸಿಕೊಳ್ಳಿ.ಕರಗಿಸಿದ ಬೆಲ್ಲಕ್ಕೆ ಒಂದು ಚಮಚ ತುಪ್ಪ, ಏಲಕ್ಕಿ ಪುಡಿಯನ್ನು ಸೇರಿಸಿಕೊಂಡು ಬೆಲ್ಲದ ಪಾಕ ಕಂದು ಬಣ್ಣ ಆಗುವವರೆಗೆ ತಿರುವಿಕೊಳ್ಳಿ.
  • ನಂತರ ಆ ಮಿಶ್ರಣಕ್ಕೆ ಕಾಲು ಚಮಚ ಅಡುಗೆ ಸೋಡಾವನ್ನು ಹಾಕಿ ಸ್ವಲ್ಪ ಫ್ರೈ ಮಾಡಿ, ಬಳಿಕ ಎಳ್ಳನ್ನು ಸೇರಿಸಿಕೊಳ್ಳಿ.
  • ಸಣ್ಣ ಉರಿಯಲ್ಲಿ 2 ರಿಂದ 3 ನಿಮಿಷ ಈ ಮಿಶ್ರಣವನ್ನು ತಿರುವಿಕೊಳ್ಳಬೇಕು. ಈಗ ಒಂದು ಪ್ಲೇಟ್‌ಗೆ ತುಪ್ಪ ಸವರಿ ಬೆಲ್ಲ ಮತ್ತು ಎಳ್ಳಿನ ಮಿಶ್ರಣವನ್ನು ಅದಕ್ಕೆ ವರ್ಗಾಯಿಸಿಕೊಳ್ಳಿ.ನಂತರ ಸಮತಟ್ಟಾಗಿ ಪ್ಲೇಟ್‌ಗೆ ಹರಡಿಕೊಂಡು ಬಿಸಿಯಿರುವಾಗಲೇ ಚೌಕಾಕಾರದಲ್ಲಿ ಚಾಕುವಿನಿಂದ ತುಂಡರಿಸಿಕೊಳ್ಳಿ. ಅರ್ಧ ಗಂಟೆಗಳ ಕಾಲ ಹಾಗೆಯೇ ಬಿಡಿ. ಇದೀಗ ಎಳ್ಳು ಚಿಕ್ಕಿ ಸವಿಯಲು ಸಿದ್ಧ.
SCROLL FOR NEXT