ಬೇಕಾಗುವ ಪದಾರ್ಥಗಳು...
ಕ್ಯಾರೆಟ್- 2
ಕೊಬ್ಬರಿ ತುರಿ- 1.2 ಬಟ್ಟಲು
ದನಿಯಾ ಪುಡಿ- 1 ಚಮಚ
ಗರಂ ಮಸಾಲ- ಅರ್ಧ ಚಮಚ
ಎಣ್ಣೆ- 4 ಚಮಚ
ಸಾಸಿವೆ- ಅರ್ಧ ಚಮಚ
ಉದ್ದಿನ ಬೇಳೆ- ಅರ್ಧ ಚಮಚ
ಕಡಲೆ ಬೇಳೆ- ಅರ್ಧ ಚಮಚ
ಖಾರದಪುಡಿ- ಅರ್ಧ ಚಮಚ
ಕರಿಬೇವು- ಸ್ವಲ್ಪ ಟ
ಅರಿಶಿನ ಪುಡಿ- ಅರ್ಧ ಚಮಚ
ಮಾಡುವ ವಿಧಾನ...
ಮೊದಲಿಗೆ ಕ್ಯಾರೆಟ್ ತುರಿದಿಟ್ಟುಕೊಳ್ಳಿ. ನಂತರ ಸ್ಟೌ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ
ಕಡಲೆ ಬೇಳೆ , ಉದ್ದಿನ ಬೇಳೆ , ಸಾಸಿವೆ ,ಹಸಿಮೆಣಸು ಕರಿಬೇವು , ಅರಿಶಿನ ಪುಡಿ ಹಾಕಿ , ಸಾಸಿವೆ ಹಾಕಿ ಕೆಂಪಗೆ ಹುರಿದುಕೊಳ್ಳಿ.
ಇದೀಗ ತುರಿದ ಕ್ಯಾರೆಟ್ ಹಾಕಿ ಫ್ರೈ ಮಾಡಿ. ಈಗ ಖಾರಪುಡಿ, ದನಿಯಾ ಪುಡಿ, ಗರಂಮಸಾಲ ಪುಡಿ ಹಾಕಿ ಮಿಶ್ರಣ ಮಾಡಿ. ಕೊನೆಯಲ್ಲಿ ಕೊಬ್ಬರಿ ತುರಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಇದೀಗ ರುಚಿಕರವಾದ ಕ್ಯಾರೆಟ್ ಫ್ರೈ ಸವಿಯಲು ಸಿದ್ಧ.