ಆಲೂ ಪೋಹಾ ಬೋಂಡಾ - Aloo Poha Bonda Recipe in Kannada
ರುಚಿಕರವಾದ ಆಲೂ ಪೋಹಾ ಬೋಂಡಾ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
ಬೇಯಿಸಿದ ಆಲೂಗಡ್ಡೆ-ಮಧ್ಯಮ ಗಾತ್ರ 1
ಕಡಲೆಹಿಟ್ಟು-ಸ್ವಲ್ಲ
ಅಕ್ಕಿಹಿಟ್ಟು- 1 ಚಮಚ
ಪೇಪರ್ ಅವಲಕ್ಕಿ- 1/2 ಬಟ್ಟಲು
ಅಚ್ಚ ಖಾರದ ಪುಡಿ- ಅರ್ಧ ಚಮಚ
ಅರಿಶಿನದ ಪುಡಿ- ಅರ್ಧ ಚಮಚ
ಬಿಳಿ ಎಳ್ಳು 1 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಅಗತ್ಯವಿರುವಷ್ಟು
ಮಾಡುವ ವಿಧಾನ...
ಬೇಯಿಸಿದ ಆಲೂಗಡ್ಡೆಯನ್ನು ಗಂಟಿಲ್ಲದೆ ಪುಡಿಮಾಡಿಕೊಳ್ಳಿ. ಪೇಪರ್ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು,ಬಸಿದು ಆಲೂ ಪುಡಿಯೊಂದಿಗೆ ಸೇರಿಸಿ, ಎಳ್ಳು, ಉಪ್ಪು ಹಾಕಿ ಮಿಶ್ರಣ ಮಾಡಿ, ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ.
ಇದೀಗ ಒಂದು ಪಾತ್ರೆಗೆ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಅಚ್ಚ ಖಾರದ ಪುಡಿ ಹಾಗೂ ಅರಿಶಿನ, ಉಪ್ಪು ಹಾಗೂ ಸ್ವಲ್ಪ ನೀರು ಗಟ್ಟಿಯಾಗಿ ಮಿಶ್ರಣ ಮಾಡಿಕೊಳ್ಳಿ. ಒಲೆಯ ಮೇಲೆ ಎಣ್ಣೆ ಇಟ್ಟು ಬಿಸಿ ಮಾಡಿ.
ಗಟ್ಟಿಯಾಗಿ ಕಲೆಸಿದ ಹಿಟ್ಟಿಗೆ ಉಂಡೆಗಳನ್ನು ಅದ್ದಿ, ಕಾದ ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಆಲೂ ಪೋಹಾ ಬೋಂಡಾ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.