ಪನ್ನೀರ್ ಕಟ್ಲೆಟ್ 
ಅಡುಗೆ

ಪನ್ನೀರ್ ಕಟ್ಲೆಟ್ - Paneer cutlet recipe in Kannada

ರುಚಿಕರವಾದ ಪನ್ನೀರ್ ಕಟ್ಲೆಟ್ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

  • ಪನ್ನೀರ್- 400 ಗ್ರಾಂ

  • ಈರುಳ್ಳಿ- 1 ಚಿಕ್ಕದಾಗಿ ಹೆಚ್ಚಿದ್ದು

  • ಕ್ಯಾರೆಟ್- 1 ತುರಿದದ್ದು

  • ಎಲೆಕೋಸು- 1 ಬಟ್ಟಳು ಚಿಕ್ಕದಾಗಿ ಹೆಚ್ಚಿದ್ದು

  • ಕ್ಯಾಪ್ಸಿಕಂ - 1/2 ಚಿಕ್ಕದಾಗಿ ಹೆಚ್ಚಿದ್ದು

  • ಆಲೂಗೆಡ್ಡೆ-2 ಬೇಯಿಸಿ ನುಣ್ಣಗೆ ಪುಡಿ ಮಾಡಿದ್ದು

  • ಹಸಿಮೆಣಸಿನಕಾಯಿ - 2 ಚಿಕ್ಕದಾಗಿ ಕತ್ತರಿಸಿದ್ದು

  • ಕೊತ್ತಂಬರಿ ಸೊಪ್ಪು -ಸ್ವಲ್ಪ

  • ಶುಂಠಿಬೆಳ್ಳುಳ್ಳಿ ಪೇಸ್ಟ್ -1 ಚಮಚ

  • ಚಾಟ್ ಮಸಾಲ -1 ಚಮಚ

  • ಗರಂಮಸಾಲ- ಅರ್ಧ ಚಮಚ

  • ಜೀರಿಗೆಪುಡಿ - ಅರ್ಧ ಚಮಚ

  • ಅಚ್ಚಖಾರದಪುಡಿ- 1 ಚಮಚ

  • ಆಮ್ ಚೂರ್ ಪುಡಿ- ಅರ್ಧ ಚಮಚ

  • ಉಪ್ಪು- ರುಚಿಗೆ ತಕ್ಕಷ್ಟು

  • ಅರಶಿನ- ಅರ್ಧ ಟೀ ಚಮಚ.

  • ಪೇಸ್ಟ್ ತಯಾರಿಸಿಕೊಳ್ಳಲು...

  • ಕಾರ್ನ್ ಫೋರ್-4 ಟೇಬಲ್ ಚಮಚ

  • ಚಿಲ್ಲಿ ಫ್ಲೆಕ್ಸ್- ಅರ್ಧ ಚಮಚ

  • ಬ್ರೆಡ್ ಕ್ರಮ್ಸ್- ಸ್ವಲ್ಪ

  • ಎಣ್ಣೆ-ಕರಿಯಲು

ಮಾಡುವ ವಿಧಾನ...

  • ಪನ್ನೀರ್‌ ಅನ್ನು ಪುಡಿ ಮಾಡಿಕೊಂಡು ಅದರೊಂದಿಗೆ ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

  • ಬಳಿಕ ತಯಾರಿಸಿಕೊಂಡ ಮಿಶ್ರಣದಿಂದ ದೊಡ್ಡ ದೊಡ್ಡ ಉಂಡೆಗಳನ್ನು ಮಾಡಿಕೊಂಡು ಅದನ್ನು ಸಮತಟ್ಟಾಗಿ ತಟ್ಟಿಕೊಳ್ಳಿ. ಒಂದು ಚಿಕ್ಕ ಬಟ್ಟಲಿಗೆ ಕಾರ್ನ್ ಫ್ಲೋರ್, ಚಿಲ್ಲಿ ಪ್ಲೆಕ್ಸ್ ಮತ್ತು ಸ್ವಲ್ಪ ನೀರನ್ನು ಹಾಕಿ ದೋಸೆ ಹಿಟ್ಟಿನ ಹದದಲ್ಲಿ ಕಲಸಿಕೊಳ್ಳಿ.

  • ತಯಾರಿಸಿದ ಪನ್ನೀರ್ ಕಟ್ಲೆಟ್ ಅನ್ನು ಹಿಟ್ಟಿನಲ್ಲಿ ಅದ್ದಿ ನಂತರ ಬ್ರೆಡ್ ಕ್ರಮ್ಸ್‌ ಅದರ ಮೇಲೆ ಮತ್ತು ಸುತ್ತಲೂ ಹರಡಿ. ಎಲ್ಲವನ್ನು ಹೀಗೆ ಮಾಡಿ ತಟ್ಟೆಯಲ್ಲಿಟ್ಟುಕೊಳ್ಳಿ.

  • ನಂತರ ಎಣ್ಣೆಯನ್ನು ಬಿಸಿ ಮಾಡಿಕೊಂಡು ತಯಾರಿಸಿಕೊಂಡ ಕಟ್ಲೆಟ್‌ನ್ನು ಹಾಕಿ. ಮಧ್ಯಮ ಉರಿಯಲ್ಲಿ ಎರಡೂ ಬದಿಯನ್ನು ಕೆಂಬಣ್ಣಕ್ಕೆ ಬರುವರೆಗೆ ಬೇಯಿಸಿ ಎಣ್ಣೆಯಿಂದ ತೆಗೆಯಿರಿ. ಇದೀಗ ರುಚಿಕರವಾದ ಪನ್ನೀರ್ ಕಟ್ಲೆಟ್ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ