ಮೆಂತ್ಯ ಸೊಪ್ಪಿನ ಬಾತ್ | Methi rice bath Recipe in Kannada
ರುಚಿಕರವಾದ ಮೆಂತ್ಯ ಸೊಪ್ಪಿನ ಬಾತ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
ತೆಂಗಿನ ತುರಿ- 1 ಬಟ್ಟಲು
ಬೆಳ್ಳುಳ್ಳಿ- 8-9
ಹಸಿಮೆಣಸಿನ ಕಾಯಿ- 3-4
ಶುಂಠಿ- ಸ್ವಲ್ಪ
ಕರಿಬೇವು-ಸ್ವಲ್ಪ
ಎಣ್ಣೆ- ಸ್ವಲ್ಪ
ಪಲಾವ್'ಗೆ ಬೇಕಾಗುವ ಸಾಮಾಗ್ರಿ- ಸ್ವಲ್ಪ
ಈರುಳ್ಳಿ- 1
ಬಟಾಣಿ- 1 ಬಟ್ಟಲು
ಟೊಮೆಟೋ- 1
ಮೆಂತ್ಯೆ ಸೊಪ್ಪು- 1 ಬಟ್ಟಲು
ಕೊತ್ತಂಬರಿ ಸೊಪ್ಪ- ಅರ್ಧ ಬಟ್ಟಲು
ಉಪ್ಪು ರುಚಿಗೆ ತಕ್ಕಷ್ಟು
ಅಕ್ಕಿ- 1 ಬಟ್ಟಲು
ಮಾಡುವ ವಿಧಾನ...
ಮೊದಲಿಗೆ ಮಿಕ್ಸಿ ಜಾರ್'ಗೆ ತೆಂಗಿನ ತುರಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಶುಂಠಿ ಹಾಗೂ ಕರಿಬೇವು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಇದಕ್ಕೆ ಪಲಾವ್ ಸಾಮಾಗ್ರಿಗಳು, ಈರುಳ್ಳಿ, ಟೊಮೆಯೋ ಹಾಕಿ ಕೆಂಪಗೆ ಹುರಿದುಕೊಳ್ಳಿ.
ಬಳಿಕ ಬಟಾಣಿ, ಸಣ್ಣಗೆ ಕತ್ತರಿಸಿದ ಮೆಂತ್ಯೆ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 2-3 ನಿಮಿಷ ಕೈಯಾಡಿಸಿ,
ನಂತರ ಅಕ್ಕಿಯನ್ನು ಅಳತೆ ಮಾಡಿಕೊಂಡ ಬಟ್ಟಲಿನಲ್ಲೇ ಒಂದು ಬಟ್ಟಲು ಅಕ್ಕಿಗೆ 2 ಬಟ್ಟಲು ನೀರು ಹಾಕಿ, ನೀರು ಕುದಿಯಲು ಬಿಡಿ. ನಂತರ ಅಕ್ಕಿಯನ್ನು ಹಾಕಿ ಮುಚ್ಚಳ ಮುಚ್ಚಿ, 2 ಕೂಗು ಕೂಗಿಸಿಕೊಂಡರೆ, ರುಚಿಕರವಾದ ಮೆಂತ್ಯೆ ಸೊಪ್ಪಿನ ಬಾತ್ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.