ಬೇಕಾಗುವ ಪದಾರ್ಥಗಳು...
ಬೇಬಿ ಕಾರ್ನ್ - 400 ಗ್ರಾಂ
ಮೈದಾ - 1/4 ಬಟ್ಟಲು
ಜೋಳದ ಹಿಟ್ಟು - 1/4 ಬಟ್ಟಲು
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಅಚ್ಛ ಖಾರದ ಪುಡಿ - 1 ಚಮಚ
ಅರಿಶಿನ ಪುಡಿ - 1/4 ಚಮಚ
ದನಿಯಾ ಪುಡಿ - 1/2 ಚಮಚ
ಜೀರಿಗೆ ಪುಡಿ - 1/2 ಚಮಚ
ಗರಂ ಮಸಾಲ - 1/4 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ-ಕರಿಯಲು
ಮಾಡುವ ವಿಧಾನ...
ಮೊದಲಿಗೆ ಬೇಬಿ ಕಾರ್ನ್ ಗಳನ್ನು ಕತ್ತರಿಸಿಕೊಳ್ಳಿ. ಒಲೆಯ ಮೇಲೆ ಪಾತ್ರೆ ಇಟ್ಟು ಅದಕ್ಕೆ ನೀರು ಹಾಗೂ ಸ್ವಲ್ಪ ಉಪ್ಪು ಹಾಕಿ ಕತ್ತರಿಸಿಕೊಂಡ ಬೇಬಿ ಕಾರ್ನ್ ಗಳನ್ನು ಹಾಕಿ 5 ನಿಮಿಷ ಬೇಯಲು ಬಿಡಿ.
ಬಳಿಕ ಒಂದು ಪಾತ್ರೆಗೆ ಮೈದಾ, ಜೋಳದ ಹಿಟ್ಟು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅಚ್ಚ ಖಾರದ ಪುಡಿ, ಅರಿಶಿನ ಪುಡಿ, ದನಿಯಾ ಪುಡಿ, ಜೀರಿಗೆ ಪುಡಿ ಹಾಗೂ ಗರಂ ಮಸಾಲ ಪುಡಿ ಹಾಗೂ ಉಪ್ಪು, ನೀರು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಬೇಯಿಸಿದ ಬೇಬಿ ಕಾರ್ನ್ ಗಳನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 10 ನಿಮಿಷ ನೆನೆಯಲು ಬಿಡಿ.
ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಕಾದ ನಂತರ ಮಸಾಲೆ ಮಿಶ್ರಿತ ಬೇಬಿಕಾರ್ನ್ ಗಳನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಬೇಬಿಕಾರ್ನ್ 65 ಸವಿಯಲು ಸಿದ್ಧ.