ಅನ್ನ Online Text
ಅಡುಗೆ

ಕುಕ್ಕರ್​ನಲ್ಲಿ ಅನ್ನ ಮುದ್ದೆ ಆಗ್ತಿದ್ಯಾ? ಹಾಗಾದ್ರೆ, ಈ ಟ್ರಿಕ್ ಟ್ರೈ ಮಾಡಿ

ಕುಕ್ಕರ್​ನಲ್ಲಿ ಅನ್ನ ಮಾಡಿದಾಗ ಮುದ್ದೆ ಮುದ್ದೆ ಆಗಿ ಬರ್ತಿದೆಯಾ? ಹಾಗಾದ್ರೆ, ನೀವು ಮಾಡ್ತಿರೋ ಒಂದೆರಡು ಸಣ್ಣ ತಪ್ಪುಗಳಿಂದಲೇ ಹೀಗೆ ಆಗ್ತಿರೋದು. ಈ ತಪ್ಪುಗಳನ್ನು ಸರಿಪಡಿಸಿದರೆ ಪ್ರತಿ ಬಾರಿಯೂ ಹದವಾಗಿ, ಅಕ್ಕಿ ಅಕ್ಕಿಯಾಗಿ ಅನ್ನ ಬರುತ್ತೆ.

ಪ್ರತಿ ಮನೆಗಳಲ್ಲಿ ದಿನವೂ ಅನ್ನ ತಯಾರಿಸುವುದು ಒಂದು ಸಾಮಾನ್ಯ ಪ್ರಕ್ರಿಯೆ. ಅದರಂತೆ, ಟೈಮ್ ಸೇವ್ ಮಾಡಲು ನಾವೆಲ್ಲರೂ ಪ್ರೆಶರ್ ಕುಕ್ಕರ್ ಬಳಸುತ್ತೇವೆ. ಆದರೆ ಹಲವು ಬಾರಿ ಕುಕ್ಕರ್‌ನಲ್ಲಿ ಮಾಡಿದ ಅನ್ನ ಉದುರು ಉದುರಾಗಿ ಬರುವ ಬದಲು, ಒಂದಕ್ಕೊಂದು ಅಂಟಿಕೊಂಡು ಮುದ್ದೆಯಾಗಿ ಬಿಡುತ್ತದೆ. ಇಂತಹ ಅನ್ನ ಸಾಂಬಾರ್ ಜೊತೆ ತಿಂದ್ರೆ ಅಷ್ಟಾಗಿ ರುಚಿ ನೀಡುವುದಿಲ್ಲ. ಹಾಗಾದ್ರೆ, ಕುಕ್ಕರ್‌ನಲ್ಲಿ ಅನ್ನ ಮುದ್ದೆಯಾಗದಂತೆ ದಿನನಿತ್ಯ ನಾವು ಮಾಡುವ ಮುಖ್ಯ ತಪ್ಪುಗಳು ಇವೇ! ಹಾಗಾಗಿ, ಈ ತಪ್ಪುಗಳನ್ನು ಸರಿಪಡಿಸಿದರೆ ಪ್ರತಿ ಬಾರಿಯೂ ಹದವಾಗಿ, ಅಕ್ಕಿ ಅಕ್ಕಿಯಾಗಿ ಅನ್ನ ಬರುತ್ತೆ.

ನೀರಿನ ಪ್ರಮಾಣದಲ್ಲಿ ಎಡವಟ್ಟು:

ಅನ್ನ ಮುದ್ದೆ ಆಗೋಕೆ ಪ್ರಮುಖ ಕಾರಣ ತಪ್ಪಾದ ನೀರಿನ ಅಳತೆ. ಹೆಚ್ಚು ನೀರು ಹಾಕಿದರೆ ಅನ್ನ ನೊಂದು ಹೋಗುತ್ತೆ. ಹಾಗಾಗಿ, 1 ಕಪ್ ಅಕ್ಕಿಗೆ 2 ಕಪ್ ನೀರು ಸೂಕ್ತ. ಆದರೆ, ಬಾಸುಮತಿ ಅಕ್ಕಿ ಇದ್ದರೆ 1 ಕಪ್ ಅಕ್ಕಿಗೆ 1.5 ಕಪ್ ನೀರು ಸಾಕು. ಅದ್ರಲ್ಲೂ, ಸುಲಭದ ಟ್ರಿಕ್ ಎಂದರೆ ಅಕ್ಕಿ ಮುಳುಗಿದ ನಂತರ ಒಂದೂವರೆ ಬೆರಳಿನಷ್ಟು ನೀರು ಮೇಲೆ ಇರುವ ಹಾಗೆ ನೋಡಿಕೊಳ್ಳಿ.

ಅಕ್ಕಿಯನ್ನು ನೆನೆಸದೆ ಬೇಯಿಸುವುದು:

ಅನೇಕರು ಅಕ್ಕಿ ತೊಳೆದ ತಕ್ಷಣವೇ ಕುಕ್ಕರ್​ಗೆ ಹಾಕಿ ಬೇಯಿಸುತ್ತಾರೆ.ಅದರ ಬದಲು ಅಕ್ಕಿ ತೊಳೆದ ನಂತರ 15 ರಿಂದ 20 ನಿಮಿಷ ನೆನೆಹಾಕಿ. ಆಮೇಲೆ ನೀರು ಸಂಪೂರ್ಣವಾಗಿ ಬಸಿದು ಕುಕ್ಕರ್​ಗೆ ಹಾಕಿ. ಯಾಕಂದ್ರೆ, ನೆನೆಸುವುದರಿಂದ ಅಕ್ಕಿ ಬೇಗ ಬೆಂದು ಅಕ್ಕಿ ಒಡೆಯುವುದಿಲ್ಲ.

ಕುಕ್ಕರ್ ಆಫ್ ಮಾಡಿದ ತಕ್ಷಣ ಮುಚ್ಚಳ ತೆರೆಯುವುದು:

ಕುಕ್ಕರ್ ಕೊನೆಯ ವಿಷಲ್ ಹೊಡೆದ ತಕ್ಷಣ ಗ್ಯಾಸ್ ಆಫ್ ಮಾಡಿ, ಅದರ ಮೇಲಿರುವ ವೈಟನ್ನು ಬಲವಂತವಾಗಿ ಎತ್ತಿ ಪ್ರೆಶರ್ ಹೊರಹಾಕುವುದು ದೊಡ್ಡ ತಪ್ಪು. ಹೀಗೆ ಮಾಡುವುದರಿಂದ ಅನ್ನದ ಒಳಗಿರುವ ತೇವಾಂಶವು ಸರಿಯಾಗಿ ಆವಿಯಾಗದೆ ಅನ್ನ ಮುದ್ದೆಯಾಗಿ ಉಳಿಯುತ್ತದೆ. ಹಾಗಾಗಿ, ಗ್ಯಾಸ್ ಆಫ್ ಮಾಡಿದ ನಂತರ ಕುಕ್ಕರ್ ಪ್ರೆಶರ್ ತಾನಾಗಿಯೇ ಇಳಿಯಲು 10 ರಿಂದ 15 ನಿಮಿಷಗಳ ಕಾಲ ಬಿಡಿ. ಈ ಸಮಯದಲ್ಲಿ ಒಳಗಿರುವ ಹಬೆಯಲ್ಲೇ ಅನ್ನದ ಕಾಳುಗಳು ಪರ್ಫೆಕ್ಟ್ ಆಗಿ ಬೇಯುತ್ತವೆ.

ಬೇಯುವಾಗ ಅನ್ನವನ್ನು ಕಲಕುವುದು:

ಉತ್ಸಾಹದಲ್ಲಿ ಅನ್ನ ಬೇಯುತ್ತಿರುವಾಗಲೇ ಮಧ್ಯದಲ್ಲಿ ಮುಚ್ಚಳ ತೆಗೆದು ಚಮಚ ಹಾಕಿ ಕಲಕಿ ನೋಡುತ್ತೇವೆ. ಆದರೆ, ಇದು ನೀವು ಮಾಡುತ್ತಿರುವ ದೊಡ್ಡ ತಪ್ಪು. ಹಾಗಾಗಿ, ಒಮ್ಮೆ ಮುಚ್ಚಳ ಮುಚ್ಚಿದ ನಂತರ ತೆರೆಯಬೇಡಿ. ಅದರಂತೆ, ಅನ್ನ ಸಂಪೂರ್ಣವಾಗಿ ಬೆಂದ ನಂತರ ಮಾತ್ರವೇ ಚಮಚದಿಂದ ಹಗುರವಾಗಿ ಕಲಕಿ. ಹೀಗೆ ಮಾಡುವುದರಿಂದ ಅನ್ನದ ಕಾಳುಗಳು ಒಡೆಯುವುದಿಲ್ಲ.

ಹಾಗಾದ್ರೆ, ಕುಕ್ಕರ್​ನಲ್ಲಿ ಪರ್ಫೆಕ್ಟ್ ಅನ್ನ ಮಾಡುವ ಸಿಂಪಲ್ ವಿಧಾನ ಏನು?

  1. ಅಕ್ಕಿಯನ್ನು 2 ಬಾರಿ ಚೆನ್ನಾಗಿ ತೊಳೆದು 15 ನಿಮಿಷ ನೆನೆಸಿ

  2. ಕುಕ್ಕರ್​ನಲ್ಲಿ 1 ಕಪ್ ಅಕ್ಕಿಗೆ 2 ಕಪ್ ನೀರು ಹಾಕಿ

  3. 1/2 ಚಮಚ ಎಣ್ಣೆ ಮತ್ತು ರುಚಿಗೆ ಉಪ್ಪು ಹಾಕಿ

  4. ಮುಚ್ಚಳ ಮುಚ್ಚಿ ಹೈ ಫ್ಲೇಮ್​ನಲ್ಲಿ 1 ವಿಷಲ್ ಕೂಗಿಸಿ

  5. ಆಮೇಲೆ ಸಿಮ್​ನಲ್ಲಿ 5 ನಿಮಿಷ ಇಟ್ಟು ಗ್ಯಾಸ್ ಆಫ್ ಮಾಡಿ

  6. ಪ್ರೆಷರ್ ಹೋದ ಮೇಲೆ ಮುಚ್ಚಳ ತೆಗೆದು ಚಮಚದಿಂದ ಹಗುರವಾಗಿ ಕಲಕಿ

ಮುಂದುವರೆದು, ನೀವು ಅಕ್ಕಿ ಮತ್ತು ನೀರನ್ನು ಕುಕ್ಕರ್‌ಗೆ ಹಾಕಿದ ಬಳಿಕ, ಅದಕ್ಕೆ ಅರ್ಧ ಚಮಚ ತುಪ್ಪ ಅಥವಾ ಅಡುಗೆ ಎಣ್ಣೆ ಮತ್ತು 4 ರಿಂದ 5 ಹನಿ ನಿಂಬೆ ರಸವನ್ನು ಸೇರಿಸಿ. ಯಾಕಂದ್ರೆ, ಈ ಎಣ್ಣೆ ಅಥವಾ ತುಪ್ಪವು ಅನ್ನದ ಕಾಳುಗಳು ಒಂದಕ್ಕೊಂದು ಅಂಟಿಕೊಳ್ಳದಂತೆ ತಡೆಯುತ್ತದೆ ಹಾಗೂ ನಿಂಬೆ ರಸವು ಅನ್ನ ಮಲ್ಲಿಗೆಯಂತೆ ಬೆಳ್ಳಗೆ ಮೂಡಿಬರಲು ಸಹಾಯ ಮಾಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!