ಬೇಳೆ ಹೋಳಿಗೆ 
ಅಡುಗೆ

ಬೇಳೆ ಹೋಳಿಗೆ | Bele Holige Recipe in Kannada

ರುಚಿಕರವಾದ ಬೇಳೆ ಹೋಳಿಗೆ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

  • ಹಿಟ್ಟು ತಯಾರಿಸಲು ಬೇಕಾಗುವ ಪದಾರ್ಥಗಳು...

  • ಮೈದಾ ಹಿಟ್ಟು – 2 ಬಟ್ಟಲು

  • ಅರಿಶಿನ – ಚಿಟಿಕೆ

  • ಉಪ್ಪು – ಚಿಟಿಕೆ

  • ಎಣ್ಣೆ – 2 ಚಮಚ

  • ಹೂರಣಕ್ಕೆ ಬೇಕಾಗುವ ಪದಾರ್ಥಗಳು.

  • ತೊಗರಿ ಬೇಳೆ– 2 ಬಟ್ಟಲು

  • ಬೆಲ್ಲ – 2 ಕಪ್ (ತುರಿದು)

  • ಏಲಕ್ಕಿ ಪುಡಿ – ½ ಟೀ ಸ್ಪೂನ್

  • ಕೊಬ್ಬರಿ ಪುಡಿ- 1 ಬಟ್ಟಲು

ಮಾಡುವ ವಿಧಾನ...

  • ಹಿಟ್ಟು ತಯಾರಿಸಲು ಮೊದಲಿಗೆ ಒಂದು ಪಾತ್ರೆಗೆ ಮೈದಾ ಹಿಟ್ಟು, ಉಪ್ಪು, ಅರಿಶಿನ ಸೇರಿಸಿ ಮಿಶ್ರಣ ಮಾಡಿ. ನಂತರ ಸ್ವಲ್ಪ-ಸ್ವಲ್ಪವೇ ನೀರು ಸೇರಿಸಿ ಮೃದುವಾಗಿ ಕಲಸಿ.

  • ಎಣ್ಣೆ ಸೇರಿಸಿ ಕನಿಷ್ಠ 1 ಗಂಟೆ ಮುಚ್ಚಿಡಿ.

  • ಹೂರಣಕ್ಕೆ ಒಲೆಯ ಮೇಲೆ ಒಂದು ಪಾತ್ರೆ ಇಟ್ಟು, ಚೆನ್ನಾಗಿ ತೊಳೆದ ಬೇಳೆ, 1 ಚಮಚ ಎಣ್ಣೆ, ಅರಿಶಿಣದ ಪುಡಿ ಹಾಗೂ ನೀರು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.

  • ನಂತರ ನೀರು ಬಸಿದು ಬೇಳೆಯನ್ನು ಮಾತ್ರ ಮತ್ತೊಂದು ಪಾತ್ರೆಗೆ ಹಾಕಿ. ಬೆಲ್ಲವನ್ನು ಸೇರಿಸಿ ಮಿಶ್ರಣ ಗಟ್ಟಿಯಾಗಿರುವವರೆ ಬೇಯಿಸಿ. ಇದಕ್ಕೆ ಏಲಕ್ಕಿ ಪುಡಿ ಹಾಗೂ ಕೊಬ್ಬರಿ ಸೇರಿಸಿ. ಒಲೆಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ.

  • ನಂತರ ಮಿಕ್ಸಿ ಜಾರ್'ಗೆ ಹಾಕಿ ನೀರು ಹಾಕದಂತೆ ಸ್ವಲ್ಪ ಸ್ವಲ್ಪವೇ ರುಬ್ಬಿಕೊಳ್ಳಿ. ಇದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ.

  • ಇದೀಗ ಈಗಾಗಲೇ ಕಲಸಿಟ್ಟ ಮೈದಾ ಹಿಟ್ಟನ್ನು ತೆಗೆದುಕೊಂಡು ಉಂಡೆಗಳನ್ನಾಗಿ ಮಾಡಿ, ಸ್ವಲ್ಪ ತಟ್ಟಿ ಮಧ್ಯೆ ಹೂರಣವನ್ನು ಇಟ್ಟು, ಹಿಟ್ಟಿನಿಂದ ಎಲ್ಲಾ ಬದಿಯನ್ನು ಮುಚ್ಚಿ, ಉಂಡೆ ಆಕಾರದಲ್ಲಿ ತಯಾರಿಸಿಕೊಳ್ಳಿ. ಇದೀಗ ನಿಮಗೆಷ್ಟು ತೆಳ್ಳಗೆ ಬೇಕೋ ಅಷ್ಟು ತಟ್ಟಿ, ತವಾದಲ್ಲಿ ಎರಡೂ ಬದಿಯಲ್ಲಿ ಎರಡೂ ಕಡೆ ಬೇಯಿಸಿದರೆ ರುಚಿಕರವಾದ ಬೇಳೆ ಒಬ್ಬಟ್ಟು ಅಥವಾ ಬೇಳೆ ಹೋಳಿಗೆ ಸವಿಯಲು ಸಿದ್ಧ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಜ್ರಿವಾಲ್, AAP ನಾಯಕರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭ: ಹೈಕೋರ್ಟ್ ನ್ಯಾಯಮೂರ್ತಿ ಹೇಳಿದ್ದೇನು?

IPL 2026: ಬುಮ್ರಾ ನಾಯಕನಾಗುತ್ತಿದ್ದಂತೆ ಬದಲಾಯ್ತು ಮುಂಬೈ ಇಂಡಿಯನ್ಸ್ ಹಣೆಬರಹ; ಪಂಜಾಬ್ ವಿರುದ್ಧ 6 ವಿಕೆಟ್ ಜಯ!

ಓಯ್ ಅಂಧೇರೇ, ಸನ್‌ಸ್ಕ್ರೀನ್ ಹಚ್ಚಿದ್ಯಾ: ತಿಲಕ್ ವರ್ಮಾ ವಿರುದ್ಧದ ಅರ್ಷದೀಪ್ ಸಿಂಗ್ ಹೇಳಿಕೆಗೆ ಕ್ರಿಕೆಟ್ ಫ್ಯಾನ್ಸ್ ಗರಂ, Video!

ಉಕ್ರೇನ್ ಮತ್ತು ಪಶ್ಚಿಮ ಏಷ್ಯಾ ಯುದ್ಧ ಸೇರಿದಂತೆ ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್ ಜೊತೆ ಪ್ರಧಾನಿ ಮೋದಿ ಚರ್ಚೆ!

ಸನಾತನವನ್ನು ನಾಶ ಮಾಡೋಕೆ ಬಂದಿರೋದು: ಸಿಎಂ ವಿಜಯ್'ರ TVK ಶಾಸಕ ಮುಸ್ತಫಾ ಹೇಳಿಕೆ ವಿವಾದ, Video!

SCROLL FOR NEXT