ಸಂಗ್ರಹ ಚಿತ್ರ 
ಅಡುಗೆ

ಚಿಕನ್ ಸೂಪ್ | Chicken Soup Recipe in Kannada

ರುಚಿಕರವಾದ ಚಿಕನ್ ಸೂಪ್ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

  • ಚಿಕನ್- 200-300 ಗ್ರಾಂ

  • ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ

  • ಹಸಿಮೆಣಸಿನಕಾಯಿ- 3-4

  • ಕಾಳುಮೆಣಸು- ಸ್ವಲ್ಪ

  • ಚಕ್ಕೆ- ಸಣ್ಣ ಪೀಸ್

  • ಅರಿಶಿನ-ಸ್ವಲ್ಪ

  • ಉಪ್ಪು - ರುಚಿಗೆ ತಕ್ಕಷ್ಟು

  • ಕೊತ್ತಂಬರಿ ಸೊಪ್ಪು- ಸ್ವಲ್ಪ

  • ಎಣ್ಣೆ- ಅಗತ್ಯಕ್ಕನುಗುಣವಾಗಿ

ಮಾಡುವ ವಿಧಾನ...

  • ಒಲೆಯ ಮೇಲೆ ಕುಕ್ಕರ್ ಇಟ್ಟು, ಎಣ್ಣೆ ಹಾಕಿ. ಬಿಸಿ ಮಾಡಿ, ಇದಕ್ಕೆ ಬೆಳ್ಳುಳ್ಳಿ-ಈರುಳ್ಳಿ-ಶುಂಠಿ ಹಾಗೂ ಹಸಿ ಮೆಣಸಿನಕಾಯಿ, ಕಾಳು ಮೆಣಸು, ದಾಲ್ಚಿನ್ನಿ, ಚಿಕನ್ ಎಲ್ಲವನ್ನೂ ಹಾಕಿ ಕೆಲವು ನಿಮಿಷಗಳವರೆಗೆ ಕೈಯಾಡಿಸಿ ಚಿಕನ್ ಬಣ್ಣ ಬದಲಾದ ಮೇಲೆ ಅದಕ್ಕೆ ಉಪ್ಪು, ಅರಿಶಿಣ ಹಾಕಿ ತಿರುವಿ.

  • ಈಗ ಬೇಕಾದಷ್ಟು ನೀರು ಸೇರಿಸಿ 3-4 ಸೀಟಿ ಬರುವವರೆಗೆ ಬೇಯಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನಿಂಬೆ ರಸ ಸೇರಿಸಿದರೆ ರುಚಿಕರವಾದ ಚಿಕನ್ ಸೂಪ್ ಸವಿಯಲು ಸಿದ್ಧ.

ಟಿಪ್ಸ್:

  • ಇನ್ನೂ ಖಾರ ಬೇಕಂದ್ರೆ ಕಾಳು ಮೆಣಸಿನ ಪುಡಿ ಮೇಲೆ ಉದುರಿಸಿ.

  • ಗಟ್ಟಿ ಸೂಪ್ ಬೇಕಾದರೆ 1 ಟೀ ಚಮಚ ಕಾರ್ನ್ ಫ್ಲೋರ್ ಅನ್ನು ನೀರಲ್ಲಿ ಕಲಸಿ ಕೊನೆಯಲ್ಲಿ ಸೇರಿಸಿ ಕುದಿಸಿ.

  • ತರಕಾರಿ ಬೇಕೆಂದರೆ ಕ್ಯಾರೆಟ್, ಬೀನ್ಸ್ ಸಣ್ಣಗೆ ಹೆಚ್ಚಿ ಚಿಕನ್ ಜೊತೆ ಹಾಕಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಬ್ಬನ್‌ ಪಾರ್ಕ್‌ ನಿಲ್ದಾಣದಲ್ಲಿ ಕೆಟ್ಟುನಿಂತ ಮೆಟ್ರೋ ರೈಲು; ಇಂದಿರಾನಗರ - ಮೆಜೆಸ್ಟಿಕ್ ನಡುವೆ ಸಂಚಾರ ಸ್ಥಗಿತ!

ಅಮೆರಿಕ- ಇರಾನ್ ಶಾಂತಿ ಒಪ್ಪಂದ: ಜೂನ್ 17 ರಿಂದ ಹಾರ್ಮುಜ್ ಜಲಸಂಧಿ ದಾಟಿದ ಭಾರತದ 11 ಹಡಗುಗಳು! ಇನ್ನೂ ಎಷ್ಟಿವೆ ಗೊತ್ತಾ?

ಬೆಂಗಳೂರು ಮೂಲದ CRED ನಲ್ಲಿ Meta ಹೂಡಿಕೆ: ವಾಟ್ಸಾಪ್ ನ ಜಾಗತಿಕ ಮುಖ್ಯಸ್ಥರಾಗಿ ಶಾ ನೇಮಕಕ್ಕೆ ಕಾರಣಗಳೇನು?PhonePe, GooglePayಗೆ ಬೀಳುತ್ತಾ ಹೊಡೆತ?

ಮುಖ್ಯಮಂತ್ರಿ ಸಿ. ವಿಜಯ್ ಹುಟ್ಟುಹಬ್ಬ: ಎಲ್ಲಾ ವದಂತಿಗಳಿಗೆ ತೆರೆ ಎಳೆದ ಆಪ್ತ ಗೆಳತಿ ತ್ರಿಶಾ ಕೃಷ್ಣನ್!

ಉದ್ಧವ್ ಸೇನೆ ತೊರೆದು ಶಿಂಧೆ ಸೇನೆ ಸೇರಿದ ಬಂಡಾಯ ಸಂಸದರಿಗೆ ಬಂಪರ್ ಗಿಫ್ಟ್; ಅಭಿವೃದ್ಧಿ ಹಣ ಬಿಡುಗಡೆ