ಟೊಮೆಟೊ ಗೊಡ್ಡುಖಾರ 
ಅಡುಗೆ

ಖಾರಪ್ರಿಯರಿಗಿದು ಫೇವರಿಟ್; ಟೊಮೆಟೊ ಗೊಡ್ಡುಖಾರ ಒಮ್ಮೆ ಹೀಗೆ ಮಾಡಿ ನೋಡಿ; ಅನ್ನ, ರೊಟ್ಟಿಗೆ ಬೆಸ್ಟ್ ಕಾಂಬಿನೇಷನ್!

ಪ್ರತಿದಿನದ ಅಡುಗೆಯಲ್ಲಿ ಒಂದೇ ರೀತಿಯ ಸಾರು, ಪಲ್ಯ ತಿಂದು ಬೇಸರವಾಗಿದೆಯೇ? ಹಾಗಾದರೆ ಈ ಬಾರಿ ವಿಭಿನ್ನ ರುಚಿಯ ಟೊಮೆಟೊ ಗೊಡ್ಡುಖಾರ ತಯಾರಿಸಿ ನೋಡಿ. ಟೊಮೆಟೊ ಹಣ್ಣಿನ ಹುಳಿ, ಬ್ಯಾಡಗಿ ಮೆಣಸಿನಕಾಯಿಯ ಬಣ್ಣ ಹಾಗೂ ಬೆಳ್ಳುಳ್ಳಿಯ ಘಮ ಒಟ್ಟಾಗಿ ಸೇರಿ ಈ ಖಾರಕ್ಕೆ ವಿಶೇಷ ರುಚಿ ನೀಡುತ್ತವೆ.

ಪ್ರತಿದಿನದ ಅಡುಗೆಯಲ್ಲಿ ಒಂದೇ ರೀತಿಯ ಸಾರು, ಪಲ್ಯ ತಿಂದು ಬೇಸರವಾಗಿದೆಯೇ? ಹಾಗಾದರೆ ಈ ಬಾರಿ ವಿಭಿನ್ನ ರುಚಿಯ ಟೊಮೆಟೊ ಗೊಡ್ಡುಖಾರ ತಯಾರಿಸಿ ನೋಡಿ. ಟೊಮೆಟೊ ಹಣ್ಣಿನ ಹುಳಿ, ಬ್ಯಾಡಗಿ ಮೆಣಸಿನಕಾಯಿಯ ಬಣ್ಣ ಹಾಗೂ ಬೆಳ್ಳುಳ್ಳಿಯ ಘಮ ಒಟ್ಟಾಗಿ ಸೇರಿ ಈ ಖಾರಕ್ಕೆ ವಿಶೇಷ ರುಚಿ ನೀಡುತ್ತವೆ.

ಬಿಸಿ ಬಿಸಿ ಅನ್ನದ ಜೊತೆ ಮಾತ್ರವಲ್ಲದೆ ಚಪಾತಿ ಮತ್ತು ರೊಟ್ಟಿಯೊಂದಿಗೂ ಇದನ್ನು ಸವಿಯಬಹುದು. ಹಾಗಾದರೆ, ಮನೆಯಲ್ಲಿರುವ ಸರಳ ಪದಾರ್ಥಗಳನ್ನು ಬಳಸಿ ರುಚಿಕರವಾದ ಟೊಮೆಟೊ ಗೊಡ್ಡುಖಾರ ಮಾಡುವ ವಿಧಾನ ಇಲ್ಲಿದೆ...

ಬೇಕಾಗುವ ಪದಾರ್ಥಗಳು...

  • ಬ್ಯಾಡಗಿ ಮೆಣಸಿನ ಕಾಯಿ- 5

  • ಹುಣಸೆಹಣ್ಣು- ನಿಂಬೆಹಣ್ಣು ಗಾತ್ರದಷ್ಟು

  • ಒಣಗಿದ ಮೆಣಸಿನಕಾಯಿ- 6-7

  • ಬೆಳ್ಳುಳ್ಳಿ- ಅರ್ಧ ಹಿಡಿಯಷ್ಟು

  • ಜೀರಿಗೆ-ಸ್ವಲ್ಪ

  • ಕಾಳು ಮೆಣಸು-ಸ್ವಲ್ಪ

  • ಕೊತ್ತಂಬರಿ ಸೊಪ್ಪು-ಸ್ವಲ್ಪ

  • ಟೊಮೆಟೊ- 2

  • ಸಾಸಿವೆ-ಸ್ವಲ್ಪ

  • ಕರಿಬೇವು-ಸ್ವಲ್ಪ

  • ಎಣ್ಣೆ-ಸ್ವಲ್ಪ

  • ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಮಿಕ್ಸಿ ಜಾರ್'ಗೆ ಬ್ಯಾಡಗಿ ಮೆಣಸಿನಕಾಯಿ, ಹುಣಸೆಹಣ್ಣು, ಒಣಗಿದ ಮೆಣಸಿನಕಾಯಿ, ಬೆಳ್ಳುಳ್ಳಿ, ಜೀರಿಗೆ, ಮೆಣಸು, ಕೊತ್ತಂಬರಿ ಸೊಪ್ಪು ಹಾಗೂ ಟೊಮೆಟೊ ಹಾಕಿ ನೀರು ಹಾಕದಂತೆ ಪೇಸ್ಟ್ ರೀತಿ ತಯಾರಿಸಿಕೊಳ್ಳಿ.

  • ಬಳಿಕ ಒಲೆಯ ಮೇಲೆ ಒಂದು ಬಾಣಲೆ ಇಟ್ಟು, ಅದಕ್ಕೆ ಎಣ್ಣೆ ಹಾಕಿ. ಕಾದ ನಂತರ ಅದಕ್ಕೆ ಸಾಸಿವೆ ಹಾಗೂ ಕರಿಬೇಕು, ಜಜ್ಜಿದ ಸ್ವಲ್ಪ ಬೆಳ್ಳುಳ್ಳಿ ಹಾಕಿ.

  • ನಂತರ ರುಬ್ಬಿಕೊಂಡ ಮಿಶ್ರಣ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ಮಸಾಲೆ ಎಣ್ಣೆ ಬಿಡುವವರೆಗೆ ಕೈಯಾಡಿಸುತ್ತಿರಿ. ಇದೀಗ ರುಚಿಕರವಾದ ಟೊಮೆಟೊ ಗೊಡ್ಡುಖಾರ ಸವಿಯಲು ಸಿದ್ಧ. ಇದನ್ನು ಅನ್ನ ಹಾಗೂ ಚಪಾತಿ, ರೊಟ್ಟಿ ಜೊತೆಗೆ ಸವಿಯಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚುನಾವಣಾ ಆಯೋಗದೊಳಗೆ ತೀವ್ರ ಮುಸುಕಿನ ಗುದ್ದಾಟ: ಉಪ ಚುನಾವಣಾ ಆಯುಕ್ತರ ವಿರುದ್ಧ ಕ್ಯಾಬಿನೆಟ್ ಕಾರ್ಯದರ್ಶಿಗೆ ದೂರು ನೀಡಿದ ಆಯುಕ್ತರು, ಕೇಂದ್ರ ಹೇಳಿದ್ದೇನು?

ವಿಧಾನ ಪರಿಷತ್ ಚುನಾವಣೆಗೆ ಮತದಾನ ಆರಂಭ: ಅಕ್ಟೋಬರ್ 27 ರಂದು ಫಲಿತಾಂಶ ಪ್ರಕಟ

ಕಾರ್ಗಿಲ್‌ನಲ್ಲಿ ಮಡಿದ ಸೈನಿಕರ ಶವಗಳನ್ನೇ ತಿರಸ್ಕರಿಸಿದ್ದು ನೀವು: ಪಾಕ್ ಯೋಧರಿಗೆ ಸಂಪ್ರದಾಯಬದ್ಧ ಅಂತ್ಯಕ್ರಿಯೆ ಮಾಡಿದ್ದು ನಾವು; ಉಪದೇಶ ಮಾಡುವ ನೈತಿಕತೆಯಿಲ್ಲ!

ಟಿಬೆಟ್‌ನಲ್ಲಿ ಪ್ರಬಲ ಭೂಕಂಪ: ನೂರಾರು ಮನೆಗಳು ಧರಾಶಾಹಿ; ಕನಿಷ್ಟ 16 ಮಂದಿ ಸಾವು, 54ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ..!

ಮೆಟ್ರೋ ನಿಲ್ದಾಣಗಳಿಗೆ ಜಯಲಲಿತಾ, ಕರುಣಾನಿಧಿ, ಎಂ.ಜಿ.ಆರ್. ಹೆಸರು! ಬೆಂಗಳೂರು-ಹೊಸೂರು ಮೆಟ್ರೋಗೆ ಕನ್ನಡ ಸಂಘಟನೆಗಳ ವಿರೋಧ: ಮಿನಿ ತಮಿಳುನಾಡು ಆಗುತ್ತಾ ಸಿಲಿಕಾನ್ ಸಿಟಿ?