ಗೋರಿಕಾಯಿ ಶೇಂಗಾ ಪಲ್ಯ 
ಅಡುಗೆ

ಗೋರಿಕಾಯಿ ಶೇಂಗಾ ಪಲ್ಯ ಹೀಗೆ ಮಾಡಿ; ಊಟದ ರುಚಿಯೇ ಡಬಲ್..!

ಸರಳ ಪದಾರ್ಥಗಳಲ್ಲೇ ಸುಲಭವಾಗಿ ತಯಾರಿಸಬಹುದಾದ ಗೋರಿಕಾಯಿ ಶೇಂಗಾ ಪಲ್ಯ ಅನ್ನ, ರೊಟ್ಟಿ ಹಾಗೂ ಚಪಾತಿ ಜೊತೆ ಸವಿಯಲು ಉತ್ತಮ ಆಯ್ಕೆಯಾಗಿದೆ.

ಗೋರಿಕಾಯಿ ಬಳಸಿ ಹಲವು ಬಗೆಯ ಪಲ್ಯ ಮಾಡಬಹುದು. ಅದಕ್ಕೆ ಹುರಿದ ಶೇಂಗಾ ಪುಡಿ ಸೇರಿಸಿದರೆ ಪಲ್ಯದ ರುಚಿ ಮತ್ತಷ್ಟು ಹೆಚ್ಚುತ್ತದೆ. ಸರಳ ಪದಾರ್ಥಗಳಲ್ಲೇ ಸುಲಭವಾಗಿ ತಯಾರಿಸಬಹುದಾದ ಗೋರಿಕಾಯಿ ಶೇಂಗಾ ಪಲ್ಯ ಅನ್ನ, ರೊಟ್ಟಿ ಹಾಗೂ ಚಪಾತಿ ಜೊತೆ ಸವಿಯಲು ಉತ್ತಮ ಆಯ್ಕೆಯಾಗಿದೆ.

ಬೇಕಾಗುವ ಪದಾರ್ಥಗಳು...

  • ಗೋರಿಕಾಯಿ – ½ ಕೆ.ಜಿ

  • ಶೇಂಗಾ – ½ ಬಟ್ಟಲು

  • ಈರುಳ್ಳಿ – 1

  • ಹಸಿಮೆಣಸಿನಕಾಯಿ – 2

  • ಸಾಸಿವೆ – ½ ಚಮಚ

  • ಉದ್ದಿನಬೇಳೆ – ½ ಚಮಚ

  • ಜೀರಿಗೆ – ½ ಚಮಚ

  • ಅರಿಶಿನ – ¼ ಚಮಚ

  • ಅಚ್ಚ ಖಾರದ ಪುಡಿ – ½ ಚಮಚ

  • ತೆಂಗಿನ ತುರಿ – 2 ಚಮಚ

  • ಕರಿಬೇವು – ಸ್ವಲ್ಪ

  • ಎಣ್ಣೆ – 2 ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಮೊದಲು ಗೋರಿಕಾಯಿಯನ್ನು ಚೆನ್ನಾಗಿ ತೊಳೆದು, ಎರಡೂ ಬದಿಯ ತುದಿಗಳನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಶೇಂಗಾವನ್ನು ಬಾಣಲೆಯಲ್ಲಿ ಹುರಿದು, ತಣ್ಣಗಾದ ಬಳಿಕ ಸ್ವಲ್ಪ ಪುಡಿ ಮಾಡಿಕೊಳ್ಳಿ.

  • ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ. ನಂತರ ಕರಿಬೇವು, ಸೀಳಿದ ಹಸಿಮೆಣಸಿನಕಾಯಿ ಹಾಗೂ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಹುರಿಯಿರಿ.

  • ಈರುಳ್ಳಿ ಸ್ವಲ್ಪ ಮೃದುವಾದ ಬಳಿಕ ಗೋರಿಕಾಯಿ, ಅರಿಶಿನ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಗೋರಿಕಾಯಿ ಮೃದುವಾಗುವವರೆಗೆ ಬೇಯಿಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಚಿಮುಕಿಸಿ.

  • ಗೋರಿಕಾಯಿ ಬೇಯಿಸಿದ ಬಳಿಕ ಅಚ್ಚ ಖಾರದ ಪುಡಿ ಹಾಗೂ ಹುರಿದ ಶೇಂಗಾ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ತೆಂಗಿನ ತುರಿ ಹಾಕಿ 2 ನಿಮಿಷ ಸಣ್ಣ ಉರಿಯಲ್ಲಿ ಹುರಿದರೆ ರುಚಿಯಾದ ಗೋರಿಕಾಯಿ ಶೇಂಗಾ ಪಲ್ಯ ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi visit to Bengaluru | ಕರ್ನಾಟಕದಲ್ಲಿ 15,600 ಕೋಟಿ ರೂ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಇಂದು ಚಾಲನೆ

ರಾಷ್ಟ್ರ ರಾಜಧಾನಿಯಲ್ಲಿ ಅಪಾಯದ ಮಟ್ಟ ಮೀರಿದ ವಾಯುಮಾಲಿನ್ಯ: 494ರ ಗಡಿ ತಲುಪಿದ AQI; ದೆಹಲಿಯಲ್ಲಿ ಉಸಿರಾಡುವುದೇ ಕಷ್ಟ..!

ಇತಿಹಾಸದಲ್ಲೇ ಮೊದಲ ಬಾರಿ ಬ್ರಿಟಿಷ್ ಸಂಸತ್ತಿನಲ್ಲಿ ಹನುಮಾನ್ ಚಾಲೀಸಾ ಪಠಣ; ವಿಡಿಯೋ ವೈರಲ್!

ʻಎಲ್ಲೂ ಹೋಗಲ್ಲ ಮೋದಿ ಎಲ್ಲೂ ಹೋಗಲ್ಲ, ಜನರನ್ನು ಬಿಟ್ಟು ಮೋದಿ ಹೋಗಲ್ಲʼ: AI ವಿಡಿಯೋ ಮೂಲಕ ಕಾಂಗ್ರೆಸ್‌ಗೆ BJP ಟಾಂಗ್‌

ಎನ್‌ವಿಡಿಯಾದ ಮಾಜಿ CEO ಜೆನ್ಸನ್ ಹುವಾಂಗ್‌ಗೆ ಮತ್ತೊಬ್ಬ ಮಹಿಳಾ ಉದ್ಯೋಗಿ ಜೊತೆ ಸಂಬಂಧ: ರಾಯಿಟರ್ಸ್ ವರದಿ