ಕರ್ನಾಟಕದಲ್ಲಿರುವ ವಿವಿಧ ಗಣೇಶ ದೇವಾಲಯಗಳ ಪರಿಚಯ ಇಲ್ಲಿದೆ.
ಇಡಗುಂಜಿ ಗಣಪತಿ
ಉತ್ತರ ಕರ್ನಾಟಕದ ಹೊನ್ನಾವರ ತಾಲೂಕಿನಲ್ಲಿರುವ ಇಡಗುಂಜಿ ಗಣಪತಿ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲೊಂದಾಗಿದೆ. ಒಂದು ಕೈಯಲ್ಲಿ ಮೋದಕ ಮತ್ತು ಇನ್ನೊಂದು ಕೈಯಲ್ಲಿ ಕಮಲವನ್ನು ಹಿಡಿದಿರುವ ಇಲ್ಲಿನ ಗಣೇಶನ್ನು ನೋಡಲು ವರ್ಷಕ್ಕೆ 1 ಮಿಲಿಯನ್ ಗಿಂತಲೂ ಹೆಚ್ಚು ಜನರು ಬರುತ್ತಾರೆ. ಮುನಿಗಳು ವಾಸಿಸುತ್ತಿದ್ದ ಕುಂಜಾರಣ್ಯ ಎಂಬ ಪ್ರದೇಶವೇ ಆಮೇಲೆ ಇಡಗುಂಜಿ ಆಯಿತೆಂಬುದು ಇಲ್ಲಿನ ಐತಿಹ್ಯ.
ಆನೆ ಗುಡ್ಡೆ ಗಣೇಶ, ಕುಂಬಾಶಿ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನೆಗುಡ್ಡೆ ಗ್ರಾಮದಲ್ಲಿ ಈ ದೇವಾಲಯವಿದೆ. ಕುಂಭಾಶಿ ಎಂದೂ ಈ ಗ್ರಾಮವನ್ನು ಕರೆಯುತ್ತಿದ್ದು, ಇಲ್ಲಿನ ಗಣಪತಿಗೆ ಸಿದ್ಧಿ ವಿನಾಯಕ ಮತ್ತು ಸರ್ವ ಸಿದ್ಧಿ ಪ್ರದಾಯಕ ಎಂಬ ಹೆಸರೂ ಇದೆ. ಕರಾವಳಿ ಕರ್ನಾಟಕ (ಪರಶುರಾಮ ಕ್ಷೇತ್ರ) ದಲ್ಲಿನ ಏಳು ಮುಕ್ತಿ ಸ್ಥಳಗಳಲ್ಲಿ ಒಂದಾಗಿದೆ ಆನೆ ಗುಡ್ಡೆ.
ಸಾಸಿವೆಕಾಲು ಗಣೇಶ
ಹಂಪಿಯ ಹೇಮಕುಂಟ ಗುಡ್ಡೆಯಲ್ಲಿ ನೆಲೆಸಿರುವ ಈ ಗಣೇಶ ದೇವಾಲಯದಲ್ಲಿ ಗಣೇಶನ ವಿಗ್ರಹವು 2.4 ಮೀಟರ್ ನಷ್ಟು ಎತ್ತರವಿದೆ.
ಕಡಲೆ ಕಾಳು ಗಣೇಶ ಹಂಪಿ
ಹಂಪಿಯ ಹೇಮಕುಂಟ ಗುಡ್ಡದಲ್ಲಿರುವ 4.5 ಮೀಟರ್ ಎತ್ತರವಿರುವ ಗಣೇಶನ ಮೂರ್ತಿ ಇದಾಗಿದೆ
ಗಣೇಶ , ಗೊನ್ನಾಗರ್
ರಾಮದುರ್ಗದ ಗೊನ್ನಗರ್ನಲ್ಲಿ ಈ ದೇವಾಲಯವಿದೆ.
ಬೆಂಗಳೂರಿನ ದೊಡ್ಡ ಗಣೇಶ
ಬೆಂಗಳೂರಿನ ಬಸವನಗುಡಿಯಲ್ಲಿದೆ ದೊಡ್ಡ ಗಣೇಶನ ದೇವಾಲಯ