ಆರೋಗ್ಯ-ಜೀವನಶೈಲಿ

ಹಲ್ಲುಗಾವಲು

ಬಹುತೇಕ ದಂತ ಸಮಸ್ಯೆಗಳಿಗೆ ಪೇಸ್ಟ್, ಬ್ರಶ್‌ಗಳೇ ಕಾರಣ ಎಂದು ಜನರು ಭಾವಿಸುತ್ತಾರೆ. ಆದರೆ, ದಂತ ಸಮಸ್ಯೆಗಳಿಗೆ ಪೇಸ್ಟ್ ಅಥವಾ ಬ್ರಶ್ ಕಾರಣವಲ್ಲ.

ಬಹುತೇಕ ದಂತ ಸಮಸ್ಯೆಗಳಿಗೆ ಪೇಸ್ಟ್, ಬ್ರಶ್‌ಗಳೇ ಕಾರಣ ಎಂದು ಜನರು ಭಾವಿಸುತ್ತಾರೆ. ಆದರೆ, ದಂತ ಸಮಸ್ಯೆಗಳಿಗೆ ಪೇಸ್ಟ್ ಅಥವಾ ಬ್ರಶ್ ಕಾರಣವಲ್ಲ. ಒಂದು ಹಂತಕ್ಕೆ ಇವುಗಳಿಂದ ಸಮಸ್ಯೆಗಳನ್ನು ತಡೆಗಟ್ಟಬಹುದಷ್ಟೇ.
ಆದರೆ, ನಾವು ಬಳಸುವ ಬ್ರಶ್‌ನ ನಿರ್ವಹಣೆ ಬಹಳ ಮುಖ್ಯ. ಹಾರ್ಡ್ ಬ್ರಶ್ ಬಳಸುವುದಕ್ಕಿಂತ ಹಲ್ಲು ಹಾಗೂ ವಸಡಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡ ಬ್ರಶ್‌ಗಳನ್ನು ಬಳಸಬೇಕು. ಅತಿ ಮೃದು ಬ್ರಶ್‌ನಿಂದ ಕೊಳೆ ಸರಿಯಾಗಿ ಸ್ವಚ್ಛವಾಗದೆ ಹಲ್ಲುಗಳು ಹಳದಿಯಾಗಿ ಗೋಚರಿಸುತ್ತವೆ. ಆದ್ದರಿಂದ ಮಧ್ಯಮ ಮೃದು  ಬ್ರಶ್ ಬಳಕೆ ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು.
ವೈದ್ಯರ ಸಲಹೆ ಮುಖ್ಯ
ಹಲ್ಲಿನ ಆಕಾರ, ರಚನೆ ವಿಭಿನ್ನವಾಗಿರುತ್ತವೆ. ಆ ಕಾರಣದಿಂದ ವೈದ್ಯರ ಸಲಹೆ ಪಡೆದು ನಮ್ಮ ಹಲ್ಲಿಗೆ ತಕ್ಕಂತೆ ಬ್ರಶ್ ಬಳಸೋದು ಒಳಿತು. ಮಕ್ಕಳಿಗೆ ಬೇಬಿ ಬ್ರಶ್ ಬಳಕೆ ಉತ್ತಮ. ಬ್ರಶ್‌ಗಳನ್ನು 3- 4 ತಿಂಗಳಿಗೆ ಬದಲಿಸಬೇಕು. ಒತ್ತಾಗಿರುವ, ಮೊಂಡಾದ, ಮೃದುತ್ವ ಕಳೆದಿರುವ, ಗುಂಜುಗಟ್ಟಿರುವ, ಬಾಗಿರುವ ಬ್ರಿಸಲ್‌ನ ಬ್ರಶ್‌ನಿಂದ ಹಲ್ಲಿಗೆ ಹಾನಿಯೇ ಹೆಚ್ಚು. ಟಿವಿ, ಪೇಪರ್‌ನಲ್ಲಿ ಬರುವ ಜಾಹೀರಾತುಗಳಲ್ಲಿ ತೋರಿಸುವಂತೆ, ವೈದ್ಯರ ಶಿಫಾರಸಿಲ್ಲದೆ ಯಾವುದೇ ಬ್ರಶ್ ಬಳಕೆಯೂ ಬೇಡ. ಜತೆಗೆ ಹಲ್ಲಿಗೆ ಕ್ಲಿಪ್ ಹಾಕಿಸಿದ್ದಾಗ ಅದರದ್ದೇ ಆದ ಬೇರೆ ಆಕೃತಿಯ ಬ್ರಶ್ ಬಳಸಿ.
ಪೇಸ್ಟ್ ಸೆಲೆಕ್ಷನ್ ಹೇಗೆ?
ದಂತ ವೈದ್ಯ ಪರಿಷತ್‌ನ ಸಲಹೆಯಂತೆ ಎಲ್ಲ ವಯೋವಾನದವರ ಹಲ್ಲುಗಳಿಗೂ ಪೇಸ್ಟ್ ಬಳಕೆ ಟೂತ್ ಪೌಡರ್‌ಗಿಂತ ಸೂಕ್ತ. ಏಕೆಂದರೆ ಪೌಡರ್‌ನಲ್ಲಿ ಹಲ್ಲು ಸ್ವಚ್ಛತೆಗೆ ಬಳಸುವ ಅಬ್ರೇಸಿವ್ ಹೆಚ್ಚಿನ ಪ್ರಮಾಣದಲ್ಲಿದ್ದು, ದೀರ್ಘ ಬಳಕೆಯಿಂದ ಹಲ್ಲಿನ ಮೇಲ್ಮೈ ಎನಾಮೆಲ್ ಸವೆಯುತ್ತದೆ. ಆದರೆ, ಪೇಸ್ಟ್‌ನಲ್ಲಿ ಈ ರೀತಿ ಆಗುವುದಿಲ್ಲ. ಪೇಸ್ಟ್‌ನ ವಾಸನೆ ಆಗದವರಿಗೆ ಪೌಡರ್ ಬಳಕೆ ಓಕೆ. ಪೇಸ್ಟ್ ಬಳಕೆ ಅರ್ಧ ಬಟಾಣಿ ಕಾಳಿನಷ್ಟು ಇದ್ದರೆ ಸಾಕು. ಬಳಸುವ ಮುನ್ನ ಬಾಯಿಗೆ ನೀರು ಹಾಕಿಕೊಂಡು ನೆನೆಸಿಕೊಂಡರೆ ಹೆಚ್ಚು ನೊರೆ ಬಂದು ಚೆನ್ನಾಗಿ ಸ್ವಚ್ಛವಾಗುತ್ತದೆ. ದೇಶೀಯ ಪೇಸ್ಟ್‌ನಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಿರದ ಕಾರಣ ಸಾಧ್ಯವಾದಷ್ಟೂ ಅವನ್ನೇ ಬಳಸಿ. ಎಂಥ ಪೇಸ್ಟ್ ಸೂಕ್ತ ಎಂಬುದನ್ನು ದಂತ ವೈದ್ಯರಿಂದ ಸಲಹೆ ಪಡೆಯಬಹುದು.
ಉಪ್ಪು ಒಪ್ಪೋಲ್ಲ!
ಹಲ್ಲಿನ ಸಾಂದ್ರತೆ, ವಯಸ್ಸು, ಎನಾಮೆಲ್‌ನ ಗಣನೆ... ಎಲ್ಲವನ್ನೂ ಪೇಸ್ಟ್ ಆರಿಸಿಕೊಳ್ಳುವಾಗ ಗಮನದಲ್ಲಿಡಬೇಕು. ಪೇಸ್ಟ್‌ಗೆ ಉಪ್ಪು ಸೇರಿಸಿ ಹಲ್ಲು ಉಜ್ಜೋದು ಒಂದು ರೀತಿಯಲ್ಲಿ ಅಪಾಯ. ಸೋಡಿಯಂ ಅಂಶ ರಾಸಾಯನಿಕ ಕ್ರಿಯೆಗೆ ಒಳಪಟ್ಟು ಎನಾಮೆಲ್ (ಹೊರಭಾಗ) ಸವೆಯುವಂತೆ ಮಾಡುತ್ತದೆ. ಉಪ್ಪು ೤ ನೀರು ಬೆರೆಸಿ ತಿಕ್ಕಬಹುದು ಅಥವಾ ಮುಕ್ಕಳಿಸಬಹುದು. ಉಪ್ಪನ್ನಾಗಲಿ, ಉಪ್ಪು೤ ನಿಂಬೆರಸ ಬೆರೆಸಿ ತಿಕ್ಕುವುದಾಗಲೀ ಮಾಡಬಾರದು. ಏಕೆಂದರೆ ರಾಸಾಯನಿಕ ಆಮ್ಲ ಉತ್ಪಾದನೆಯಿಂದ ಹಲ್ಲಿನ ಹೊರಪದರ ಕ್ಷಣ ಮಾತ್ರದಲ್ಲಿ ಸವೆದು ಅತಿ ಬೇಗ ಹುಳುಕು ಹಿಡಿಯುವ ಸಾಧ್ಯತೆ ಇರುತ್ತದೆ.
ಹೊರಮೈ ಕಣಗಳ ಭೈಜಿಕ ಕ್ರಿಯೆಯಿಂದ ಸಾಂದ್ರತೆ ಕುಸಿಯುತ್ತದೆ. ಗಡಸುತನ ಕಳೆದುಕೊಳ್ಳುತ್ತದೆ. ಆಮ್ಲೀಯ ಗುಣಲಕ್ಷಣದ ಯಾವುದೇ ಪದಾರ್ಥವಾಗಲೀ ಆಮ್ಲೀಯ ಗುಣಸ್ವಭಾವ, ಕ್ರಿಯೆಯ ಯಾವುದೇ ಘಟನೆಗಳಿಂದಾಗಲೀ ಹಲ್ಲಿನ ಹೊರಮೈ ಸಂಪರ್ಕಕ್ಕೆ ಬರಬಾರದು. ಉದಾ: ಕೋಲಾ- ಪೆಪ್ಸಿ, ಆಮ್ಲೀಯ ಪಾನೀಯಗಳು, ನಿಂಬೆರಸ, ಹುಳಿ ಮಾವಿನಕಾಯಿ... ಮುಂತಾದವು.
ಪೇಸ್ಟ್‌ನ ಆಯ್ಕೆ ವೈದ್ಯರಿಂದ ಶಿಫಾರಸು ಮಾಡಿದ್ದಾಗಿರಲಿ. ಪ್ರತಿ ವಯೋವಾನದವರಿಗೂ ಅವರದ್ದೇ ಆದ ಪೇಸ್ಟ್ ಸೂಕ್ತವಾಗಿರುತ್ತದೆ.
(ವೈದ್ಯರ ಸಂಪರ್ಕ ಸಂಖ್ಯೆ-9342 466936)

ಸ್ವಚ್ಛತೆ ಹೇಗೆ?
    ಉಪ್ಪನ್ನು ಪೇಸ್ಟ್‌ನೊಡನೆ ಸೇರಿಸಿ ಹಲ್ಲು ತಿಕ್ಕಬೇಡಿ.
    ಉಪ್ಪು ಬೆರೆತ ಪೇಸ್ಟ್ (ಕಂಪನಿಯೇ ತಯಾರಿಸಿದ್ದು) ಬಳಸಬಹುದು.
    ಮಕ್ಕಳಿಗೆ ಅವರದ್ದೇ ಪೇಸ್ಟ್ ಬಳಕೆ ಉತ್ತಮ.
    ದೇಶೀಯ ಪೇಸ್ಟ್ ಬಳಕೆ ಸೂಕ್ತ.
    ಅಬ್ರೆಸಿವ್ ಇಲ್ಲದ ಪೇಸ್ಟ್ ಬಳಕೆಯಿಂದ ಹಲ್ಲಿನ ಸ್ವಚ್ಛತೆ ಸಾಧ್ಯವಿಲ್ಲ.
    ಇದ್ದಿಲುಪುಡಿ, ಇಟ್ಟಿಗೆ ಪುಡಿಗಳಿಂದ ಹಲ್ಲು ಹಾನಿಯಾಗುತ್ತದೆ.
    ಪೇಸ್ಟ್‌ನ ರುಚಿಗೆ ಮಾರುಹೋಗಿ ನುಂಗುವ ಮಕ್ಕಳ ಬಗ್ಗೆ ಗಮನವಿರಲಿ.
    ನಿಂಬೆರಸ, ಬೇವಿನೆಣ್ಣೆಗಳಿಂದ ಹಲ್ಲಿನ ಸ್ವಚ್ಛತೆ ಸಾಧ್ಯವಿಲ್ಲ.
    ಹಲ್ಲು ಸೆಟ್‌ಗಳ ಸ್ವಚ್ಛತೆಗೆ ಸೋಪ್ ನೀರು ಬಳಸಿ. ಪೇಸ್ಟ್ ಓಕೆ.
    ಸೆನ್ಸಿಟೀವ್ (ಸೂಕ್ಷ್ಮ ಸಂವೇದಿ) ಪೇಸ್ಟ್ ಬಳಕೆ ಎಲ್ಲರೂ ಬಳಸಕೂಡದು. ಹಲ್ಲು ಸವೆದವರಲ್ಲಿ ಮಾತ್ರ ವೈದ್ಯರ ಸಲಹೆ ಮೇರೆಗೆ ಇದನ್ನು ಬಳಸಬೇಕು. ಇದರಲ್ಲಿ ಅಬ್ರೆಸಿವ್ ಅಂಶ ಬಹಳ ಕಮ್ಮಿ ಇದ್ದು, ಲವಣಗಳ ಅಂಶ (ಸೋಡಿಯಂ, ಪೊಟ್ಯಾಷಿಯಂ) ಹೆಚ್ಚಾಗಿರುತ್ತದೆ. ಹಲ್ಲು ಹಳದಿಯಾಗುವ ಸಾಧ್ಯತೆ ಇರುತ್ತದೆ.
    ಫ್ಲೋರೈಡ್‌ಪೀಡಿತ ಗ್ರಾಮಗಳು, ತಾಲೂಕುಗಳಲ್ಲಿನ ಜನರು ಫ್ಲೋರೈಡ್‌ಯುಕ್ತ ಪೇಸ್ಟ್ ಬಳಸಬಾರದು. ಇದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತದೆ.
    ವಸಡಿನ ರಕ್ತಸ್ರಾವವಾಗುತ್ತಿದ್ದಲ್ಲಿ ವೈದ್ಯರನ್ನು ಭೇಟಿಯಾಗಿ.
    ವಯಸ್ಕರ ಕಾಯಂ ಹಲ್ಲುಗಳು ಅತಿಯಾಗಿ ಸವೆದಿದ್ದರೆ ಪೇಸ್ಟ್ ಬಳಕೆಗಿಂತ ಕಾಯಂ ಕ್ಯಾಪ್ ಚಿಕಿತ್ಸೆ ಅನುಕೂಲಕಾರಿ.
    ಹುಳುಕಾದ ಹಲ್ಲುಗಳಿಗೆ ಚಿಕಿತ್ಸೆ ಪಡೆಯಬೇಕೇ ಹೊರತು ಯಾವುದೇ ಔಷಧೀಯ ಗುಣಲಕ್ಷಣದ ಪೇಸ್ಟ್‌ನಿಂದ ಪರಿಹಾರ ಸಾಧ್ಯವಿಲ್ಲ.
    ಪೇಸ್ಟ್‌ನ ವಾಸನೆ ಆಗದವರು ಬೆಳಗ್ಗೆ ಎದ್ದು 15-20 ನಿಮಿಷದ ನಂತರ ಹಲ್ಲುಜ್ಜಬಹುದು.
    ಯಾವುದೇ ಪೇಸ್ಟ್ ವಸಡನ್ನು ಗಟ್ಟಿ ಮಾಡಲಾರದು. ಇದರಿಂದ ಹಲ್ಲು ತಿಕ್ಕಿದ ನಂತರ 2 ನಿಮಿಷ ಬೆರಳಿನಿಂದ ವಸಡನ್ನು ಮಸಾಜ್ ಮಾಡಿಕೊಳ್ಳಿ.
    ಬಾಯಿ ದುರ್ವಾಸನೆಗೂ ಬಳಸುವ ಪೇಸ್ಟ್‌ಗೂ ಯಾವುದೇ ಸಂಬಂಧವಿಲ್ಲ. ಇದಕ್ಕಾಗಿ ಬ್ರಶ್ ಮಾಡುವ ವಿಧಾನ ವೈದ್ಯರಿಂದ ತಿಳಿದುಕೊಳ್ಳಿರಿ.

- ಡಾ.ಕೆ.ವಿ. ಸಂತೋಷ್ ಹೊಳಲ್ಕೆರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!