ಆರೋಗ್ಯ-ಜೀವನಶೈಲಿ

ಐರನ್ ಬಾಡಿ

ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಐರನ್ ಮತ್ತು ಕ್ಯಾಲ್ಸಿಯಂ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಾರೆ. ಕಬ್ಬಿಣ ಅಥವಾ ಕ್ಯಾಲ್ಸಿಯಂ ಕಡಿಮೆಯಾದಲ್ಲಿ, ಸುಸ್ತು, ಜಡತೆ, ಸುಲಭವಾಗಿ ಮುರಿಯುವ ಉಗುರು, ಕೂದಲು ಉದುರುವಿಕೆ ಅಥವಾ ಸೆಳೆತ, ಏಕಾಗ್ರತೆ ಕೊರತೆ ಕಾಡಬಹುದು.

ಯಾವಾಗ ಬೇಕು ಐರನ್!
ಒಬ್ಬ ವ್ಯಕ್ತಿಗೆ ಪ್ರತಿ ದಿನ ಒಂದು ಮಿಲಿಗ್ರಾಂನಷ್ಟು ಹಾಗೂ ಮುಟ್ಟಾಗುವ ಮಹಿಳೆಯರಿಗೆ ಸುಮಾರು 1.5 ಮಿಲಿಗ್ರಾಂ ಐರನ್ ಬೇಕು. ಕೊರತೆಯಾದಲ್ಲಿ ಹಿಮೋಗ್ಲೋಬಿನ್ (ಎಚ್‌ಬಿ) ಕಡಿಮೆಯಾಗಿ ಅನಿಮಿಯಾ ಕಾಡುತ್ತದೆ. ವೈದ್ಯರೊಂದಿಗೆ ಚರ್ಚಿಸಿ ಈ ಪೋಷಕಾಂಶಗಳ ಕೊರೆತೆಗೆ ಸೂಕ್ತ ಔಷಧ ತೆಗೆದುಕೊಳ್ಳಬಹುದು.

ಕ್ಯಾಲ್ಸಿಯಂ ಕಮ್ ಹೇ ಕ್ಯಾ?
ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ಸುಮಾರು 1000 ರಿಂದ 1200 ಮಿಲಿಗ್ರಾಂ ಕ್ಯಾಲ್ಸಿಯಂ ಬೇಕು. ಈ ಮಟ್ಟವನ್ನು ಕಾಯ್ದಿಟ್ಟುಕೊಳ್ಳಲು ಹಾಲು, ಮೊಸರು, ಚೀಸ್, ಹಚ್ಚ ಹಸುರಿನ ತರಕಾರಿಗಳು ಮತ್ತು ಕ್ಯಾಲ್ಸಿಯಂಭರಿತ ಆಹಾರಗಳನ್ನು ಸೇವಿಸಿ. ಅಗತ್ಯ ಕ್ಯಾಲ್ಸಿಯಂನ ದೀರ್ಘ ಕಾಲದ ಕೊರತೆಯಿಂದ ಆಸ್ಟಿಯೊಪೆನಿಯಾ ಮತ್ತು ಆಸ್ಟಿಯೋಪೊರೊಸಿಸ್ ಎಂಬ ಕೀಲು ಮೂಳೆ ದುರ್ಬಲಗೊಳ್ಳುವ ಮತ್ತು ಸುಲಭವಾಗಿ ಮೂಳೆ ಮುರಿದು ಹೋಗಬಹುದು.
ಸ್ನಾಯು ಸೆಳೆತ, ಜಡತೆ, ಜೋಮು ಹಿಡಿಯುವಿಕೆ ಮತ್ತು ಬೆರಳುಗಳಲ್ಲಿ ಜೋಮು ಮತ್ತು ಹೃದಯ ಬಡಿತದಲ್ಲಿ ತೊಂದರೆ ಇವು ಕ್ಯಾಲ್ಸಿಯಂ ಕೊರತೆಯ ಇತರೆ ಲಕ್ಷಣಗಳು. ವಿಟಮಿನ್ 'ಡಿ' ಮಟ್ಟ ಕಡಿಮೆಯಿದ್ದರೆ ಕ್ಯಾಲ್ಸಿಯಂನ ಹೀರುವಿಕೆಯನ್ನು ತಗ್ಗುತ್ತದೆ. ರಕ್ತ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಕ್ಯಾಲ್ಸಿಯಂ ಮತ್ತು ವಿಟಮಿನ್ 'ಡಿ' ಮಟ್ಟವನ್ನು ತಿಳಿಯಬಹುದು.

ಸ್ವಲ್ಪ ಹುಷಾರ್!
ಊಟ ಮಾಡುವುದಕ್ಕೆ ಕನಿಷ್ಠ ಒಂದು ಗಂಟೆ ಮುನ್ನ ಐರನ್ ಮಾತ್ರೆ ತೆಗೆದುಕೊಳ್ಳಬೇಕು. ವಿಟಮಿನ್ 'ಸಿ' ಹೆಚ್ಚಿರುವ ಕಿತ್ತಳೆ, ನಿಂಬೆರಸದೊಂದಿಗೆ ಐರನ್ ಮಾತ್ರೆಗಳನ್ನು ತೆಗೆದುಕೊಂಡರೆ ಕಬ್ಬಿಣಾಂಶ ಚೆನ್ನಾಗಿ ಹೀರಲ್ಪಡುತ್ತದೆ. ಐರನ್ ಮಾತ್ರೆಗಳನ್ನು ತೆಗೆದುಕೊಳ್ಳುವ ಕನಿಷ್ಠ 2 ಗಂಟೆ ಮುಂಚೆ ಹಾಲು, ನಾರು ಸಮೃದ್ಧ ಆಹಾರ, ಕೆಫೀನ್ ಪಾನೀಯಗಳನ್ನು ತೆಗೆದುಕೊಳ್ಳಬೇಡಿ. ಐರನ್ ಪೂರಕ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಮಲಬದ್ಧತೆ ಕಾಡುತ್ತದೆ. ದಿನಕ್ಕೆ 6-8 ದೊಡ್ಡ ಗ್ಲಾಸ್ ನೀರು, ನಾರಿನಂಶವುಳ್ಳ ಆಹಾರ ಸೇವನೆ ಮತ್ತು ಅಗತ್ಯ ಬಿದ್ದರೆ ಸ್ಟೂಲ್ ಸಾಫ್ಟ್‌ನರ್ ಸೇವನೆಯಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು.  ಹೆಚ್ಚಿನ ಕಬ್ಬಿಣಾಂಶ ತೆಗೆದುಕೊಳ್ಳುವುದು ಹೆಮೊಸಿಡೆರೊಸಿಸ್ ಎಂಬ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಈ ಸಮಸ್ಯೆಯಿಂದ ಶ್ವಾಸಕೋಶ, ಹೃದಯ, ಯಕೃತ್ತು, ಮೆದುಳಿನಲ್ಲಿ ಕಬ್ಬಿಣಾಂಶ ಶೇಖರಣೆಗೊಂಡು ಅನಾರೋಗ್ಯ ಕಾಡುತ್ತದೆ.

ಕ್ಯಾಲ್ಸಿಯಂ ಕಿಸ್ಮತ್
ಸಿಟ್ರೇಟ್ ಹಾಗೂ ಕಾರ್ಬೋಹೈಡ್ರೇಟ್ ಎಂಬ ಎರಡು ರೂಪಗಳಲ್ಲಿ ನಾವು ಕ್ಯಾಲ್ಸಿಯಂ ಬಳಸುತ್ತೇವೆ. ಕಾರ್ಬೋನೇಟ್ ಅನ್ನು ಊಟದೊಂದಿಗೆ ತೆಗೆದುಕೊಂಡರೆ ಚೆನ್ನಾಗಿ ಹೀರಿಕೊಳ್ಳುತ್ತದೆ. ಸಿಟ್ರೇಟ್ ಊಟದೊಂದಿಗೆ ಅಥವಾ ಊಟವಿಲ್ಲದೆಯೂ ಚೆನ್ನಾಗಿ ಹೀರಲ್ಪಡುತ್ತದೆ. ಕ್ಯಾಲ್ಸಿಯಂ ಸಿಟ್ರೇಟ್ ಮಾತ್ರೆಗಳ ಪ್ರಮಾಣವನ್ನು ಒಂದು ದಿನಕ್ಕೆ 2-3 ಬಾರಿ ವಿಭಜಿಸಿ ಊಟದೊಂದಿಗೆ ತೆಗೆದುಕೊಳ್ಳುವುದರಿಂದ ಅಡ್ಡ ಪರಿಣಾಮಗಳನ್ನು ತಗ್ಗಿಸಬಹುದು.

(ಲೇಖಕರು ನೇಷನ್‌ವೈಡ್ ಪ್ರೈಮರಿ ಹೆಲ್ತ್ ಕೇರ್ ಸರ್ವಿಸಸ್ ಪ್ರೈ.ಲಿನ ಸಹ ವೈದ್ಯಕೀಯ ನಿರ್ದೇಶಕಿ)
=  ಡಾ. ಅನುಪಮಾ ನಾಗರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ