ಆರೋಗ್ಯ-ಜೀವನಶೈಲಿ

ಗಂಟಲ್ ಕೇಸ್

ಟ್ರಾನ್ಸಿಲ್ ಎನ್ನುವುದು ಗಂಟಲಿನ ಎರಡು ಭಾಗಗಳಲ್ಲಿರುವ ಚಿಕ್ಕ ಗ್ರಂಥಿಗಳು. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕರಿಸುವಂಥದ್ದು.
ಟಾನ್ಸಿಲೈಟಿಸ್ ಎನ್ನುವುದು ಶೀತಕಾಲ ಅಥವಾ ಮಳೆಗಾಲದಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ತೊಂದರೆ. ಟಾನ್ಸಿಲ್ ಗ್ರಂಥಿಗಳು ಊದಿಕೊಂಡು ಗಂಟಲು ನೋವು, ಜ್ವರ, ಕೆಮ್ಮು ಇನ್ನಿತರ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುವ ಸೋಂಕಿಗೆ ಟಾನ್ಸಿಲೈಟಿಸ್ ಎನ್ನುವರು.
ಇದರಲ್ಲಿ ತೀವ್ರವಾದ ಟಾನ್ಸಿಲೈಟಿಸ್ ಹಾಗೂ ದೀರ್ಘಕಾಲೀನ ಟಾನ್ಸಿಲೈಟಿಸ್‌ಗಳಿವೆ. ಕೆಲವು ಸಮಸ್ಯೆ ಅಲ್ಪಾವಧಿ ಇದ್ದರೆ, ಮತ್ತೆ ಕೆಲವು ತುಂಬಾ ದಿನಗಳಿಂದ ಇದ್ದು, ಆಗಾಗ ಕಾಣಿಸಿಕೊಂಡು ರೋಗಿಯನ್ನು ತೊಂದರೆಗೀಡು ಮಾಡುತ್ತವೆ. ಗಂಟಲು ನೋವು, ಕೆಮ್ಮು, ದುರ್ವಾಸನೆ, ಜ್ವರ ಇತ್ಯಾದಿ ಲಕ್ಷಣಗಳು ಇದರಿಂದ ಹೆಚ್ಚುತ್ತದೆ.

ಸೋಂಕಿಗೆ ಕಾರಣಗಳೇನು?

  •     ಎಲ್ಲ ವಯೋವಾನದವರಲ್ಲೂ ಕಂಡುಬರಬಹುದಾದರೂ ಹೆಚ್ಚಾಗಿ 15 ವರ್ಷದೊಳಗಿನವರಲ್ಲಿ ಜಾಸ್ತಿ.
  •     ರೋಗ ನಿರೋಧಕ ಶಕ್ತಿ ಕಡಿಮೆಯಿದ್ದಾಗ ಕೆಮ್ಮು, ಶೀತ ಅಥವಾ ಉಸಿರಾಟದ ಸೋಂಕು ಕಾಣಿಸಿಕೊಳ್ಳುತ್ತದೆ
  •     ಅತಿ ತಂಪು ಪಾನೀಯ ಅಥವಾ ಆಹಾರ ಸೇವನೆಯಿಂದ ರಕ್ತ ನಾಳಗಳು ಸಂಕುಚಿತವಾಗಿ ಸೋಂಕಿಗೆ ಕಾರಣವಾಗುತ್ತವೆ.
  •     ಅತಿ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯೊಂದಿಗಿನ ಒಡನಾಟ.
  •     ಸೈನೋಸೈಟಿಸ್ ತೊಂದರೆಯಿರುವವರು ಪದೇ ಪದೇ ಟಾನ್ಸಿಲೈಟಿಸ್ ಸಮಸ್ಯೆಗೆ ತುತ್ತಾಗುತ್ತಾರೆ.
  •     ಸ್ಟ್ರೆಪ್ಟೊಕೋಕನ್, ಸೈಪಿಲೋಕೋಕಸ್, ನ್ಯೂಮೋಕೋಕಸ್ ಮತ್ತು ಡಿಪ್ತಿರೈಪ್ ಸೂಕ್ಷ್ಮ ಜೀವಿಗಳಿಂದಲೂ ಸೋಂಕು ಹರಡುತ್ತದೆ.

ಗಂಟಲಲ್ಲಿ ಕಿಚ್ ಕಿಚ್ಚಾ?

  •     ಗಂಟಲಿನಲ್ಲಿ ಕಿರಿ ಕಿರಿ ಅನುಭವ.
  •     ತೀವ್ರ ಗಂಟಲು ನೋವು (ಮಾತನಾಡುವಾಗ, ಆಹಾರ ಸೇವಿಸುವಾಗ, ನೀರು ಕುಡಿಯುವಾಗಲೂ ನೋವು).
  •     ಧ್ವನಿಯಲ್ಲಿ ವ್ಯತ್ಯಾಸ.
  •     ಮಕ್ಕಳಲ್ಲಿದ್ದರೆ, ಆಹಾರ ಸೇವಿಸಲು ನಿರಾಕರಣೆ.
  •     ಗಂಟಲಿನ ಹೊರ ಭಾಗವನ್ನು ಸ್ಪರ್ಶಿಸಿದಾಗ ಊತವಾಗಿರುವ ವೃತ್ತಾಕಾರದ ಟಾನ್ಸಿಲ್ಸ್‌ಗಳು ಸಿಗುತ್ತವೆ.
  •     ಬಾಯಿಯಲ್ಲಿ ದುರ್ಗಂಧ.
  •     ಆಯಾಸ, ಜ್ವರ, ತಲೆನೋವು, ಕೆಮ್ಮು, ಶೀತ, ಹೃದಯ ಬಡಿತದಲ್ಲಿ ಹೆಚ್ಚಳ.
  •     ತೀವ್ರತರವಾದ ಟಾನ್ಸಿಲೈಟಿಸ್ ಸುಮಾರು 4 ರಿಂದ 6 ದಿನಗಳವರೆಗೆ ರೋಗಿಯನ್ನು ಬಾಧಿಸುತ್ತದೆ.
ಧ್ವನಿಪೆಟ್ಟಿಗೆ ಊದುತ್ತದೆ!

ಪರಿಹಾರ ಏನು?
  •     ಆರೋಗ್ಯಕರ ಜೀವನ ಶೈಲಿ.
  •     ಉತ್ತಮ ಪೋಷಕಾಂಶಯುಕ್ತ ಸಮತೋಲನ ಆಹಾರ ಸೇವನೆ.
  •     ಪ್ರಾಣಾಯಾಮ ಇನ್ನಿತರ ಉಸಿರಾಟದ ಅಭ್ಯಾಸಗಳು.
  •     ವಿಟಮಿನ್ 'ಸಿ' ಇರುವ ಹಣ್ಣುಗಳ ಸೇವನೆ (ಉದಾಹರಣೆಗೆ ಬೆಟ್ಟದ ನೆಲ್ಲಿಕಾಯಿ).
  •     ನಿತ್ಯ ಬೆಳಗ್ಗೆ ಮತ್ತು ರಾತ್ರಿ ಬಿಸಿನೀರಿನಲ್ಲಿ ಬಾಯಿ ಮುಕ್ಕಳಿಸುವುದು.
  •     ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು.
  •     ಟಾನ್ಸಿಲೈಟಿಸ್ ಕಾಣಿಸಿಕೊಂಡಾಗ ವಿಶ್ರಾಂತಿ, ಬಿಸಿನೀರು ಸೇವನೆ, ದ್ರವಯುಕ್ತ ಆಹಾರ ಸೇವನೆ, ಬೆಚ್ಚಗಿನ ವಾತಾವರಣ ಸೃಷ್ಟಿಸಿಕೊಳ್ಳಬೇಕು.
  •     ಬಿಸಿ ನೀರಿನಲ್ಲಿ ಚಿಟಿಕೆ ಉಪ್ಪು, ಅರಿಶಿನ ಬೆರೆಸಿ ದಿನಕ್ಕೆ ನಾಲ್ಕುಬಾರಿ ಗಂಟಲು ಮುಕ್ಕಳಿಸಬೇಕು.
  •     ಲಕ್ಷಣಗಳು ತೀವ್ರತರವಾಗಿದ್ದರೆ (ಜ್ವರ, ಕೆಮ್ಮು, ತೀವ್ರ ಗಂಟಲು ನೋವು, ಆಯಾಸ) ಹತ್ತಿರದ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು.
- ಡಾ. ಸಿದ್ದಲಿಂಗಸ್ವಾಮಿ ಜಿ.ಸಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್: ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'; Video ವೈರಲ್!