ಆರೋಗ್ಯ-ಜೀವನಶೈಲಿ

ಮೊಸರು ತಿಂದ್ರೆ ಮೋಸ ಇಲ್ಲ!

ದಿನಕ್ಕೆ 250-600 ಗ್ರಾಂ ಮೊಸರು ತಿಂದರೆ ಮನುಷ್ಯ ಜೀವಮಾನ ಪೂರ್ತಿ ಆರೋಗ್ಯವಂತನಾಗಿ, ಉತ್ಸಾಹಭರಿತನಾಗಿರುತ್ತಾನೆ. ಇದು ಮುದುಕಕಾಗುವುದನ್ನೂ...

ದಿನಕ್ಕೆ 250-600 ಗ್ರಾಂ ಮೊಸರು ತಿಂದರೆ ಮನುಷ್ಯ ಜೀವಮಾನ ಪೂರ್ತಿ ಆರೋಗ್ಯವಂತನಾಗಿ, ಉತ್ಸಾಹಭರಿತನಾಗಿರುತ್ತಾನೆ. ಇದು ಮುದುಕಕಾಗುವುದನ್ನೂ ನಿಧಾನಿಸುತ್ತದೆ. ರಕ್ತದ ಕೊಲೆಸ್ಟರಾಲ್ ತಗ್ಗಿಸುವುದು, ಹೃದಯ ಮತ್ತು ರಕ್ತನಾಳ ವ್ಯವಸ್ಥೆಯನ್ನು ದೃಢವಾಗಿಸಬಲ್ಲದು ಎಂದು ಅಧ್ಯಯನಗಳು ಹೇಳುತ್ತವೆ.
ಆಫ್ರಿಕದ ಕೆಲವು ಬುಡಕಟ್ಟು ಜನಾಂಗಗಳಲ್ಲಿ ರಕ್ತಧಮನಿಗೆ ಸಂಬಂಧಿಸಿದ ರೋಗ ಕಡಿಮೆ ಮತ್ತು ರಕ್ತದಲ್ಲಿ ಕೊಲೆಸ್ಟರಾಲ್ ಕಡಿಮೆ ಎಂಬುದನ್ನು ಅಧ್ಯಯನ ತಂಡ ವೊಂದು ಪತ್ತೆ ಮಾಡಿತು. ಇವರು ಆಹಾರದಲ್ಲಿ ಮೊಸರನ್ನು ತಪ್ಪದೇ ಸೇವಿಸುತ್ತಾರೆ. ಆದ್ದರಿಂದ ಈ ಜನರ ಆಯಸ್ಸೂ  ದೀರ್ಘ ಎಂದೂ ತಂಡ ಕಂಡುಕೊಂಡಿತು.

ಪಚನ ಸುಲಭ
ಹಾಲು ಹುಳಿಯಾಗುವಾಗ ಅದರಲ್ಲಿರುವ ಖನಿಜಾಂಶಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಆದರೆ, ಅದರಲ್ಲಿರುವ ಪ್ರೊಟೀನ್‌ಗಳು, ಶರ್ಕರಗಳು, ವಿಟಮಿನ್‌ಗಳಲ್ಲಿ ಬದಲಾವಣೆಗಳುಂಟಾಗಿ ಮನುಷ್ಯನ ದೇಹದ ಮೇಲೆ ವಿಶಿಷ್ಟ ಪರಿಣಾಮ ಬೀರುತ್ತವೆ. ಹಾಲು, ಬ್ಯಾಕ್ಟೀರಿಯಾಗಳು ಬೆಳೆಯಲು ಪುಷ್ಪಿಕರ ಮಾಧ್ಯಮ. ಆದರೆ, ಮೊಸರಿನಲ್ಲಿ ಹಾನಿಕಾರಿಕ ಬ್ಯಾಕ್ಟೀರಿಯಾಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಅಲ್ಲದೆ ಇತರೆ ಜೀವರಾಸಾಯನಿಕ ಬದಲಾವಣೆಗಳಿಂದಾಗಿ ಲ್ಯಾಕ್ಟಿಕ್ ಆಮ್ಲ, ಆಲ್ಕೊಹಾಲ್, ಕಾರ್ಬನ್ ಡೈ ಆಕ್ಸೈಡ್, ಆ್ಯಂಟಿ ಬಯೋಟಿಕ್ ಮತ್ತು ವಿಟಮಿನ್‌ಗಳು ರೂಪುಗೊಂಡು ಮೊಸರು ಮನುಷ್ಯನಿಗೆ ಹೆಚ್ಚು ಪುಷ್ಟಿಕರವಾಗಿ ಮತ್ತು ಸುಲಭವಾಗಿ ಪಚನವಾಗುವ ಪದಾರ್ಥವಾಗಿ ಮಾರ್ಪಾಡುಗೊಳ್ಳುತ್ತದೆ. ಅಗತ್ಯ ಅಮೈನೊ ಆಮ್ಲಗಳ ಪರಿಮಾಣವೂ ಹೆಚ್ಚುತ್ತದೆ. ಜಠರ, ಕರುಳು ಬಾಧೆ, ಪಿತ್ತಕೋಶ ಉರಿಯೂತ, ಅತಿಸಾರ, ಕರುಳಿನ ಉರಿಯೂತ, ರಕ್ತಹೀನತೆ ಮುಂತಾದ ತೊಂದರೆಗಳಿಗೆ ಮೊಸರು ಒಳ್ಳೆಯದು. ದುರ್ಮಾಂಸ ಬೆಳೆಯುವುದನ್ನೂ ಮೊಸರು ತಡೆಯುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

- ಎಚ್.ಶಿವರಾಮ ಭಟ್, ಹತ್ತೊಕ್ಕಲು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!

ನನ್ನ ಕನಸು ನೀವೇ ಸರ್‌; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ