ಶಿಶು ಆರೈಕೆ
ಕುಟುಂಬಕ್ಕೆ ಶಿಶುವಿನ ಆಗಮನವಾದಾಗ ನೂತನ ಪೋಷಕರ ಬಳಿ ಸೂಕ್ತ ಮಾಹಿತಿ ಇರುವುದಿಲ್ಲ. ಹಾಗಾಗಿ ಅವರು ಹಿರಿಯರನ್ನು ಅವಲಂಬಿಸುತ್ತಾರೆ. ಸಿಗುವ ಎಲ್ಲ ಸಲಹೆಗಳು ನಿಜ ಅಥವಾ ಲಾಭದಾಯಕವಾಗಿರುತ್ತವೆ ಎಂದೇನಿಲ್ಲ. ಶಿಶು ಆರೈಕೆ ಕುರಿತಂತೆ ಕೆಲವು ಸಾಮಾನ್ಯ ತಪ್ಪು ತಿಳಿವಳಿಕೆಗಳು ಇಲ್ಲಿವೆ...
- ಶಿಶು ಜನಿಸಿ ಕೆಲವೇ ಗಂಟೆಗಳ ಒಳಗೆ ಮಗುವನ್ನು ಎತ್ತಿಕೊಳ್ಳದಿದ್ದರೆ ತಾಯಿಗೆ ಅದರೊಂದಿಗೆ ಸೂಕ್ತ ಸಂಬಂಧ ಸಾಧ್ಯವಾಗದು.
- ಹಲ್ಲು ಹುಟ್ಟುವಾಗ ಜ್ವರ, ಭೇದಿ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂದು ಕೆಲವರು ನಂಬುತ್ತಾರೆ. ಆದರೆ, ಹಲ್ಲು ಹುಟ್ಟುವ ಪ್ರಕ್ರಿಯೆ ಅತ್ಯಂತ ಸದ್ದಿಲ್ಲದೆ ನಡೆಯುವಂಥದ್ದಾಗಿದೆ.
- ಶಿಶುವಿಗೆ ಆಹಾರವನ್ನು ಮೂರು ತಿಂಗಳಿಂದ ನೀಡಬೇಕು ಎಂದು ಕೆಲವರು ಹೇಳುತ್ತಾರೆ. ಆದರೆ, 4ರಿಂದ 6 ತಿಂಗಳ ನಂತರವೇ ಆಹಾರ ನೀಡಬೇಕು. ಅದರಲ್ಲೂ 6 ತಿಂಗಳ ನಂತರ ನೀಡುವುದು ಒಳಿತು.
- ತಾಯಂದಿರು ವೃತ್ತಿಜೀವನ ಕಟ್ಟುವಲ್ಲಿ ನಿರತರಾಗಿದ್ದು, ಮಕ್ಕಳಿಗೆ ಬಾಟಲ್ ಹಾಲನ್ನು ಶೀಘ್ರವಾಗಿ ಆರಂಭಿಸಲು ಇಚ್ಛಿಸುತ್ತಾರೆ. ಇದು ಅತ್ಯಂತ ಅಸುರಕ್ಷಿತವಾಗಿದ್ದು ಸೋಂಕು ಮತ್ತು ಅಸ್ವಸ್ಥತೆಗೆ ಆಹ್ವಾನ ನೀಡುತ್ತದೆ.
- ಎದೆ ಹಾಲನ್ನು ತಕ್ಷಣ ಮಗುವಿಗೆ ಕುಡಿಸಬೇಕೆಂಬ ತಪ್ಪುಕಲ್ಪನೆ ಜನರಲ್ಲಿದೆ. ಆದರೆ, ಸಾಮಾನ್ಯ ಕೋಣೆಯ ತಾಪಮಾನದಲ್ಲಿ ಈ ಹಾಲನ್ನು 4ರಿಂದ 6 ಗಂಟೆವರೆಗೆ ಸುರಕ್ಷಿತವಾಗಿಡಬಹುದು.
- ಅಳುವ ಮಕ್ಕಳಿಗೆ ಘನಂ, ಗುಟ್ಟಿ, ಗ್ರೇಪ್ವಾಟರ್ ನೀಡುವುದು ಅತ್ಯಂತ ಅಪಾಯಕಾರಿ. ಇದನ್ನು ಯಾವುದೇ ಸಮಯದಲ್ಲೂ ಅಭ್ಯಾಸವಾಗಿಸಬಾರದು.
- ಪೋಷಕರು ಮಕ್ಕಳನ್ನು ಸಾಕಲು ಸುಲಭ ಮಾರ್ಗಗಳನ್ನು ಹುಡುಕಲಾರಂಭಿಸಿದ್ದಾರೆ. ಇದಕ್ಕಾಗಿ ನ್ಯಾಪಿ ಪ್ಯಾಡ್ಗಳಂಥ ಆಯ್ಕೆಗಳೂ ಬಂದಿವೆ. ಇವುಗಳನ್ನು ಆದಷ್ಟು ತಪ್ಪಿಸುವುದು ಒಳಿತು.
- ರಬ್ಬರ್ ನಿಪ್ಪಲ್ ಮುಂತಾದವುಗಳನ್ನು ಮಕ್ಕಳ ಬಾಯಿಗೆ ನೀಡುವುದೂ ಅಸುರಕ್ಷಿತ. ಇವುಗಳಿಂದ ಸೋಂಕು ಮತ್ತು ಮೊಲೆ ತೊಟ್ಟಿನ ಗೊಂದಲ ಉಂಟಾಗುವ ಸಾಧ್ಯತೆ ಇರುತ್ತದೆ.
- ಶಿಶುವಿನ ಆರೈಕೆಯಲ್ಲಿ ಸರಿಯಾದ ಮಾರ್ಗಗಳನ್ನು ಕುರಿತು ಮಕ್ಕಳ ತಜ್ಞರ ಸಲಹೆ ಪಡೆಯುವುದು ಅವಶ್ಯ.
- ಡಾ. ಪಿ.ಎಸ್. ರಾಘವನ್,
ಮಕ್ಕಳ ತಜ್ಞರು, ಅಪೋಲೊ ಹಾಸ್ಪಿಟಲ್ಸ್, ಬೆಂಗಳೂರು.
ಮಕ್ಕಳ ತಜ್ಞರು, ಅಪೋಲೊ ಹಾಸ್ಪಿಟಲ್ಸ್, ಬೆಂಗಳೂರು.