ಕೆಲವರು ತೆಳ್ಳಗಾಗಲು ಏನೇನೋ ಮಾಡ್ತಾರೆ. ಒಂದೆರಡು ಹೊತ್ತು ತಿನ್ನುವುದನ್ನೂ ಬಿಡ್ತಾರೆ. ಆದರೆ, ಊಟ ಬಿಡುವುದರಿಂದ ಯಾರೂ ಸ್ಲಿಮ್ ಆಗುವುದಿಲ್ಲ. ಬದಲಿಗೆ ನಿಶ್ಯಕ್ತಿ ಕಾಡುತ್ತದೆ.
ಅದಕ್ಕಾಗಿಯೇ ಬೆಳಗ್ಗೆಯ ತಿಂಡಿಯಲ್ಲಿ ವೈವಿಧ್ಯ, ರುಚಿ ಮತ್ತು ಶಕ್ತಿ ಎಲ್ಲವೂ ಇರಬೇಕು. ಮೊಟ್ಟೆಯೂ ಅಗತ್ಯ. ಇದನ್ನು ಫುಲ್ಫಿಲ್ ಮಾಡೋದ್ರಲ್ಲಿ ಪ್ರತಿ ಗೃಹಿಣಿಯೂ ಸುಸ್ತಾಗುವುದು ಸುಳ್ಳಲ್ಲ. ತಜ್ಞರೂ ಪ್ರೊಟೀನ್, ಖನಿಜಗಳು ಹಾಗೂ ಅಗತ್ಯ ವಿಟಮಿನ್ಗಳನ್ನು ಹೊಂದಿರುವ ಪೌಷ್ಟಿಕಾಂಶಯುತ ಬ್ರೇಕ್ಫಾಸ್ಟ್ ಸೇವಿಸಿ ಎಂದೇ ಸಲಹೆ ನೀಡುತ್ತಾರೆ.
ದೇಹದ ಎಂಜಿನ್ ಗೆ ಇಂಧನ
ಕಡೇ ಬಾರಿಗೆ ಆಹಾರ ತಿಂದ 8-12 ಗಂಟೆಗಳೊಳಗೆ ದೇಹದ ಎಂಜಿನ್ ಸುಸೂತ್ರವಾಗಿ ಓಡಲು ಇಂಧನ ತುಂಬಿಸುವುದು ಅತ್ಯಗತ್ಯ. ಆದರೆ ಬೆಳಗಿನ ಒತ್ತಡಗಳು, ಸರಿಯಾಗಿ ಹಸಿವು ಆಗದಿರುವುದು ಮತ್ತು ಬೆಳಗಿನ ಮೂಡ್ ಸರಿಯಿಲ್ಲದಿರುವುದು ಇತ್ಯಾದಿಗಳಿಂದ ಬೇಕಾಬಿಟ್ಟಿ ಬ್ರೇಕ್ಫಾಸ್ಟ್ ಸೇವಿಸುವವರೇ ಹೆಚ್ಚು. ಉಪಾಹಾರದಿಂದ ವಿಶೇಷವಾಗಿ ಮಕ್ಕಳಲ್ಲಿ ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ಇದು ತೂಕ ನಿರ್ವಹಣೆಗೆ ಅತ್ಯಂತ ಸಹಕಾರಿ. ಮನಸ್ಸು ಸಮಾಧಾನವಾಗಿರುತ್ತದೆ ಮತ್ತು ಸೂಕ್ತ ಉಪಾಹಾರ ಸೇವಿಸುವವರನ್ನು ಹೃದ್ರೋಗ ಕಾಡುವುದು ಕಡಿಮೆ.
ಏನಿರಬೇಕು ಉಪಾಹಾರದಲ್ಲಿ?
ಉಪಾಹಾರ ಅಗತ್ಯ ಪ್ರೊಟೀನ್, ನಾರು, ವಿಟಮಿನ್ಗಳು ಮತ್ತು ಖನಿಜಗಳೊಂದಿಗೆ ಶಕ್ತಿಯನ್ನೂ ನೀಡುವಂತಿರಬೇಕು. ಸಮತೋಲಿತ ಉಪಾಹಾರದಲ್ಲಿ ಕನಿಷ್ಠ 3 ಅಗತ್ಯ ಆಹಾರ ಗುಂಪುಗಳಾದ ಕಾಳುಗಳು, ಹಾಲಿನ ಉತ್ಪನ್ನಗಳು (ಹಾಲು ಅಥವಾ ಮೊಸರು) ಮತ್ತು ಹಣ್ಣು ಅಥವಾ ತರಕಾರಿಗಳಿರಬೇಕು. ತಿನ್ನಲು ಸಿದ್ಧವಿರುವ ಕಾಳುಗಳು, ಹಾಲು ಮತ್ತು ಹಣ್ಣು ಬೆಳಗಿನ ಉಪಾಹಾರಕ್ಕೆ ಉತ್ತಮ ಆಯ್ಕೆ. ಮೊಟ್ಟೆ ಹಾಗೂ ಇಡೀ ಕಾಳುಗಳ ಟೋಸ್ಟ್, ಹಣ್ಣು, ತರಕಾರಿ ಪರೋಟಾ (ಎಣ್ಣೆ ಹಾಕದೆ) ಮತ್ತು ಮೊಸರು ಅಥವಾ ಮಜ್ಜಿಗೆಯೂ ಸಮತೋಲಿತ ಉಪಾಹಾರವೇ.
ಕಾಳುಗಳು ಏಕೆ ಬೇಕು?