ಆರೋಗ್ಯ-ಜೀವನಶೈಲಿ

ಕೇಶಪ್ರೇಮ

ಚಳಿಗಾಲ ಬಂದರೆ ಮನಸ್ಸು, ಚರ್ಮ ಎರಡೂ ಮುದುರುತ್ತವೆ. ಸೌಂದರ್ಯಪ್ರಿಯರಿಗಂತೂ ನಡುಗುವ ಥಂಡಿಯಲ್ಲೂ ತಲೆಬಿಸಿ. ಚರ್ಮದ ರಕ್ಷಣೆಗೆ ಹಲವು ಕ್ರೀಂಗಳನ್ನು ಹಚ್ಚಿ ಹೆಣಗಾಡುತ್ತಾರೆ. ಹಾಗೋ ಹೀಗೋ ಹತೋಟಿಯಲ್ಲಿಟ್ಟುಕೊಳ್ಳುತ್ತಾರೆ. ಆದರೆ, ಕೂದಲಿನ ರಕ್ಷಣೆಯನ್ನು ನಿರ್ಲಕ್ಷಿಸಿ ತಲೆ ಕೆರೆದುಕೊಳ್ಳುತ್ತಾರೆ!
ಹೌದು. ಚಳಿಗಾಲದಲ್ಲಿ ಚರ್ಮ ಸುಕ್ಕುಗಟ್ಟದಂತೆ, ಮುದುರದಂತೆ ವಹಿಸುವ ಎಚ್ಚರಿಕೆ, ಕಾಳಜಿಯನ್ನು ಕೂದಲಿನ ವಿಚಾರದಲ್ಲೂ ಅನುಸರಿಸಬೇಕು. ಇಲ್ಲದಿದ್ದರೆ ಕೇಶ ರಾಶಿ ಹದಗೆಟ್ಟು ತಲೆ ಕೆರೆದುಕೊಳ್ಳುವ ಪರಿಸ್ಥಿತಿ ಬರುತ್ತದೆ.

ಸಿಕ್ಕಿದ್ದೆಲ್ಲಾ ತಲೆಗೆ ಹಚ್ಚಬೇಡಿ
ಚಳಿಗಾಲದಲ್ಲಿ ಶಾಂಪು ಬಳಸುವುದು, ಮಾಯಿಶ್ಚರೈಸರ್ ಇರುವ ಕಂಡಿಷನರ್ ಬಳಸುವುದು ಉತ್ತಮ. ಕೂದಲು ಸೊಂಟ ಮುರಿದು ಬೀಳುವ ಸಾಧ್ಯತೆಗಳು ಈ ಋತುವಿನಲ್ಲಿ ಹೆಚ್ಚು. ಇದಕ್ಕೆ ಕೂದಲು ಶುಷ್ಕಗೊಳ್ಳುವುದೇ ಕಾರಣ. ಮಾಯಿಶ್ಚರೈಸರ್ ಇರುವ ಉತ್ಪನ್ನ ಬಳಸುವುದರಿಂದ ಕೂದಲು ತುಂಡಾಗುವುದನ್ನು ತಡೆಯಬಹುದು.

ಕರಿದ ತಿಂಡಿ ಬೇಡ
ಚಳಿಗಾಲದಲ್ಲಿ ಕುರುಕಲು ತಿಂಡಿ ಹೆಚ್ಚು ಇಷ್ಟವಾಗುತ್ತದೆ. ನಾಲಗೆ ಚಪಲಕ್ಕೆ ಕಟ್ಟುಬಿದ್ದು ಕರಿದ ತಿಂಡಿ, ಜಂಕ್ ಹಾಗೂ ಫಾಸ್ಟ್ಫುಡ್ ಸೇವನೆ ಮಾಡಬಾರದು. ಸಮತೋಲಿತ ಆಹಾರ ತೆಗೆದುಕೊಳ್ಳಬೇಕು. ಪ್ರೊಟೀನ್ಯುಕ್ತ ಆಹಾರ ಸೇವಿಸಿದರೆ ಕೂದಲ ಹೊಳಪು ಹೆಚ್ಚುತ್ತದೆ. ಮಾಂಸಾಹಾರಿಗಳು ಮೀನು, ಮೊಟ್ಟೆಯನ್ನು ಸೇವಿಸಬಹುದು. ಸಸ್ಯಾಹಾರಿಗಳು ಮೊಳಕೆಯೊಡೆದ ಕಾಳುಗಳು, ತರಕಾರಿಯನ್ನು ಹೇರಳವಾಗಿ ಸೇವಿಸಬೇಕು.

ನೈಸರ್ಗಿಕವಾಗಿರಲಿ...
ಸ್ಟ್ರೇಟ್ನಿಂಗ್ ಹಾಗೂ ಡ್ರೈಯರ್ ಬಳಸುವುದು ಅಪಾಯಕಾರಿ. ಅತಿ ಉಷ್ಣದಿಂದ ಕೂದಲಿಗೆ ಹಾನಿಯಾಗುತ್ತದೆ. ಹೀಗಾಗಿ ಹೇರ್ ಡ್ರೈಯರ್ ಬಳಸುವಾಗ ಎಚ್ಚರವಿರಲಿ. ಬೇಗ ಒಣಗಲಿ ಎಂದು ಜಾಸ್ತಿ ಉಜ್ಜಬೇಡಿ. ಸ್ಟೈಲ್ಗಾಗಿ ಕೂದಲು ಉಂಗುರದಂತೆ ಗುಂಗುರು ಆಗಿಸಿಕೊಳ್ಳುವುದಾಗಲಿ, ಅಲೆ ಕೂದಲನ್ನು ನೇರವಾಗಿಸಿಕೊಳ್ಳುವುದಾಗಲಿ ಮಾಡಿದರೆ ಕೂದಲಿನ ಕೋಮಲತೆ ಹಾಗೂ ತೇವಾಂಶ ಹೀರಿಕೊಳ್ಳುತ್ತವೆ. ಯಾವುದೇ ರೀತಿಯ ಕೃತಕ ಅಲಂಕಾರಗಳ ಬದಲು ನೈಸರ್ಗಿಕವಾಗಿರಲು ಪ್ರಯತ್ನಿಸಿ. ಇಲ್ಲದಿದ್ದರೆ ಕೂದಲು ಸೀಳುವಿಕೆ, ಉದುರುವಿಕೆ ಮತ್ತು ಜೀವಂತಿಕೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಬಿಸಿ ನೀರು ಸ್ನಾನ ಬೇಡ
ಬಿಸಿಬಿಸಿ ನೀರು ಚಳಿಗಾಲದಲ್ಲಿ ಹಿತವೆನಿಸಿದರೂ ಅದು ಕೂದಲಿನ ಪಾಲಿಗೆ ಶತ್ರು. ಚರ್ಮದ ತೇವಾಂಶವನ್ನು ಕಳೆದು, ಶುಷ್ಕವಾಗಿಸುತ್ತದೆ. ಉಗುರು ಬೆಚ್ಚಗಿನ ನೀರು ಅಥವಾ ತಣ್ಣೀರಿನ ಸ್ನಾನವೇ ತಲೆ ಕೂದಲಿಗೆ ಹಿತ.

ಶಾಂತವಾಗಿರಿ...
ಧಾವಂತದ ಜೀವನ, ಬದುಕಿನ ಒಳಬೇಗುದಿಗಳು ಚಳಿಗಾಲದಲ್ಲಿ ಮನಸ್ಸು ಹೆಚ್ಚು ಮುದುಡುವಂತೆ ಮಾಡುತ್ತವೆ. ಇದಕ್ಕೆ ಈ ಋತುಮಾನದಲ್ಲಿ ಹಾರ್ಮೋನ್ನಲ್ಲಿ ಆಗುವ ವ್ಯತ್ಯಾಸವೂ ಕಾರಣವಾಗಿರುತ್ತದೆ. ಅನಗತ್ಯ ಒತ್ತಡ, ಖಿನ್ನತೆಗೆ ಒಳಗಾಗದಂತೆ ಮನಸ್ಸನ್ನು ನಿಗ್ರಹಿಸುವುದು ರೂಢಿಸಿಕೊಳ್ಳುಬೇಕು.

ಎಣ್ಣೆ ಮಸಾಜ್ ಉತ್ತಮ
ಎಣ್ಣೆ ಮಸಾಜ್ ಮಾಡಿಕೊಳ್ಳುವುದು ಉತ್ತಮ. ಆಲಿವ್ ಆಯಿಲ್ ಇಲ್ಲವೇ ತೆಂಗಿನೆಣ್ಣೆಯನ್ನು ಉಗುರು ಬಿಸಿ ಮಾಡಿಕೊಂಡು ನೆತ್ತಿಗೆ ಎಣ್ಣೆಯುಣ್ಣಿಸಬೇಕು. ಹೊಟ್ಟು ಸಹ ನಿವಾರಣೆಯಾಗುತ್ತದೆ. ತಲೆಬುರುಡೆಯೂ ಶುಷ್ಕವಾಗದು.

- ಚನ್ನು ಮೂಲಿಮನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್