ಕಣ್ಣಿನ ತೊಂದರೆಗಳು ಬಾರದಂತೆ ಇಲ್ಲಿವೆ ಕೆಲವು ಸಲಹೆಗಳು....
= ನೇರಳೆ ಕ್ಷಕಿರಣಗಳು ಕಣ್ಣಿನ ಸೂಕ್ಷ್ಮ ವಲಯಗಳ ಮೇಲೆ ಬಿದ್ದರೆ ದೃಷ್ಟಿ ಹಾನಿಗೊಳಗಾಗುವ ಸಂಭವವಿರುತ್ತದೆ. ಹೀಗಾಗಿ ಹೊರ ಹೋಗುವಾಗಲೆಲ್ಲ ಉತ್ತಮ ಗುಣಮಟ್ಟದ ಸನ್ ಗ್ಲಾಸ್ ಧರಿಸಿ.
= ಕಣ್ಣುಗಳು ಒತ್ತಡಕ್ಕೊಳಗಾಗದಂತೆ ಕಾಯ್ದುಕೊಳ್ಳಿ. ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತು ಮಾಡುವ ಕೆಲಸ ನಿಮ್ಮದಾಗಿದ್ದಲ್ಲಿ ಆಗಾಗ ವಿರಾಮ ತೆಗೆದುಕೊಳ್ಳಿ. ಒಂದೇ ಸಮನೆ ಕಂಪ್ಯೂಟರ್ ನೋಡುವುದರಿಂದ ಕಣ್ಣುಗಳು ತೇವವನ್ನು ಕಳೆದುಕೊಳ್ಳುತ್ತವೆ. ಇದರಿಂದ ವಿಪರೀತ ಸುಸ್ತಿನ ಅನುಭವವಾಗುತ್ತದೆ.
= ಕಣ್ಣಿನ ಆರೋಗ್ಯ ಹೆಚ್ಚಿಸುವಂಥ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ. ವಿಟಮಿನ್ ಎ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳು ದೃಷ್ಟಿ ಮಂದವಾಗುವುದು, ಕಣ್ಣಿನಲ್ಲಿರುವ ನರಗಳು ದುರ್ಬಲವಾಗುವುದನ್ನು ತಡೆಯುತ್ತವೆ.
= ಕಣ್ಣಿನ ತೊಂದರೆಗಳು ಅದೆಷ್ಟೇ ಚಿಕ್ಕದಾಗಿದ್ದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಕನ್ನಡಕ ಇಲ್ಲವೇ ಲೆನ್ಸ್ ಬಳಸಲು ವೈದ್ಯರು ಸಲಹೆ ನೀಡಿದ್ದರೆ ನಿರ್ಲಕ್ಷ್ಯ ತೋರದೆ ನಿಯಮಿತವಾಗಿ ಬಳಸಿ.
= ಸರಿಯಾದ ಬೆಳಕಿರುವ ಜಾಗದಲ್ಲೇ ಓದಿ.
= ಪ್ರತಿ ದಿನ ಎರಡು ಬಾರಿ ಕಣ್ಣನ್ನು ತಣ್ಣೀರಿನಲ್ಲಿ 3 ನಿಮಿಷಗಳ ಕಾಲ ಅದ್ದಿ ತೊಳೆಯಿರಿ.
= ಒತ್ತಡದ ಬದುಕು ನಿಮ್ಮದಾಗಿದ್ದರೆ ಸಾಧ್ಯವಾದಷ್ಟು ಹೆಚ್ಚು ಸಮಯ ನಿದ್ದೆ ಮಾಡಿ.
= ಡಯಾಬಿಟಿಕ್ ರೋಗಿ ನೀವಾಗಿದ್ದರೆ ರಕ್ತದಲ್ಲಿ ಸಕ್ಕರೆ ಅಂಶವನ್ನು ಹಿಡಿತದಲ್ಲಿಟ್ಟುಕೊಳ್ಳಿ. ಇಲ್ಲದಿದ್ದರೆ ಇದು ಮಂದ ದೃಷ್ಟಿಗೀಡುಮಾಡುತ್ತದೆ.