ಆರೋಗ್ಯ-ಜೀವನಶೈಲಿ

ದಿ ವೀಕ್

ಒಮ್ಮೊಮ್ಮೆ ಹೀಗೂ ಆಗಿಬಿಡಬಹುದು. ದೇಹದ ಪ್ರತಿರಕ್ಷಿತ ವ್ಯವಸ್ಥೆಯೇ ತಪ್ಪಾಗಿ ತನ್ನ ಸ್ವಂತ ತೇವಾಂಶ ಉತ್ಪಾದಕ ಗ್ರಂಥಿಗಳ ಮೇಲೆ ಆಕ್ರಮಣ ಮಾಡುತ್ತದೆ. ಅದೇ ಸೊಗ್ರೇನ್ ಸಿಂಡ್ರೋಮ್. ಈ ರೋಗಕ್ಕೆ ತುತ್ತಾಗುವವರಲ್ಲಿ ಶೇ.90ರಷ್ಟು ಮಹಿಳೆಯರು.

ಆಧುನಿಕ ಜೀವನದ ಹಾಗೂ ವಂಶಪಾರಂಪರ್ಯದ ಬಳುವಳಿ ಸೊಗ್ರೆನ್ ಸಿಂಡ್ರೋಮ್ (ಎಸ್‌ಎಸ್).
ತುಂಬಾ ಬಳಲಿಕೆಯಾಗುತ್ತಿದ್ದು, ಜತೆಗೆ ಚರ್ಮದ ಅಲರ್ಜಿ, ಕೀಲುಗಳಲ್ಲಿ ನೋವು ಕಂಡಬಂದಲ್ಲಿ ತಜ್ಞರನ್ನು ತಕ್ಷಣವೇ ಭೇಟಿಯಾಗೋದು ಒಳ್ಳೆಯದು. ಇದೇನು ಮಹಾ ದೊಡ್ಡ ಕಾಯಿಲೆ ಎಂದು ನಿರ್ಲಕ್ಷ್ಯ ಮಾಡಿದರೆ, ಎಸ್‌ಎಸ್ ನಿಮ್ಮನ್ನು ಎಡಬಿಡದೇ ಕಾಡಬಹುದು.
'ಬೇಲಿಯೇ ಎದ್ದು ಹೊಲ ಮೇಯ್ದಂತೆ' ದೇಹದ ಪ್ರತಿರಕ್ಷಿತ ವ್ಯವಸ್ಥೆಯೇ ತಪ್ಪಾಗಿ ತನ್ನ ಸ್ವಂತ ತೇವಾಂಶ ಉತ್ಪಾದಕ ಗ್ರಂಥಿಗಳ ಮೇಲೆ ಆಕ್ರಮಣ ಮಾಡುವ ರೋಗವಿದು.
ಈ ವ್ಯಾಧಿಗೆ ನಿಖರ ಕಾರಣಗಳು ತಿಳಿಯದಿದ್ದರೂ, ಅನುವಂಶಿಕ ಮತ್ತು ಸುತ್ತಮುತ್ತಲಿನ ಪರಿಸರದ ಅಂಶಗಳು ಕಾರಣ ಎನ್ನಲಾಗುತ್ತಿದೆ. ಟೈಪ್-1 ಸಕ್ಕರೆ ಖಾಯಿಲೆ ಮತ್ತು ಸ್ವಯಂಪ್ರತಿರಕ್ಷಕ ಕಾಯಿಲೆಯಾದ ಹೈಪೊಥೈರಾಯ್ಡ್‌ನಂಥ ಇತಿಹಾಸವಿರುವವರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ದೈಹಿಕ ಮತ್ತು ಮಾನಸಿಕ ಒತ್ತಡಗಳು ಹೆಚ್ಚಾದಾಗ ರಕ್ತದಲ್ಲಿನ ಕೆಳ ಮಟ್ಟಗಳ ಪ್ರತಿಜೀವಿಗಳು ಸುಲಭವಾಗಿ ಈ ರೋಗಲಕ್ಷಣಗಳನ್ನು ಸಕ್ರಿಯಗೊಳಿಸುತ್ತವೆ. ಮಾಲಿನ್ಯವೂ ಕಾರಣವಾಗಬಲ್ಲದು. ನಿಧಾನಗತಿಯಲ್ಲಿ ವೃದ್ಧಿಯಾಗುವ ಈ ರೋಗ ಪತ್ತೆ ಹಚ್ಚಲು 5-6 ವರ್ಷಗಳು ತೆಗೆದುಕೊಳ್ಳುತ್ತದೆ. ಈ ರೋಗಕ್ಕೆ ತುತ್ತಾಗುವವರಲ್ಲಿ ಶೇ.90ರಷ್ಟು ಮಹಿಳೆಯರು.
ಆಂತರಿಕ ವೈಫಲ್ಯ
ಎಸ್‌ಎಸ್‌ನಿಂದ ಬಳಲುವ ರೋಗಿಗಳು ನ್ಯೂಮೋನಿಯಾ, ಯಕೃತ್ತು ವೈಫಲ್ಯ ಮತ್ತು ಇತರೆ ಆಂತರಿಕ ಅವಯವಗಳ ನಷ್ಟಕ್ಕೆ ಹೆಚ್ಚು ಗುರಿಯಾಗುವ ಸಾಧ್ಯತೆಯಿದೆ. ಸಣ್ಣ ಪ್ರಮಾಣದ ರೋಗಿಗಳು ಲಿಂಫ್ ಗ್ರಂಥಿಗಳ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಇಂಡಿಯನ್ ರುಮ್ಯಾಟಾಲಜಿ ಅಸೋಷಿಯೇಷನ್ ಮತ್ತು ಸಂಜಯ್ ಗಾಂಧಿ ಪೋಸ್ಟ್ ಗ್ರಾಜ್ಯುಯೇಟ್ ಇನ್ಸ್‌ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಸಹಾಯಕ ಪ್ರಾಧ್ಯಾಪಕ ಡಾ.ಅಮಿತ್ ಅಗರ್ವಾಲ್.
ಪ್ರಾಥಮಿಕ ಎಸ್‌ಎಸ್‌ನಲ್ಲಿ ಕಣ್ಣೀರು ಮತ್ತು ಲಾಲಾರಸ ಗ್ರಂಥಿಗಳು ಬಾಧಿತವಾಗಿ, ಕಣ್ಣು ಮತ್ತು ಬಾಯಿ ತೇವಾಂಶ ಕಳೆದುಕೊಂಡು ಒಣಗುತ್ತವೆ. ಮಾಧ್ಯಮಿಕ ಸಿಂಡ್ರೋಮ್‌ನಲ್ಲಿ ರುಮ್ಯಾಟಿಕ್ ಆರ್ಥರೈಟಿಸ್, ಲ್ಯೂಪಸ್ ಅಥವಾ ಸ್ಕ್ಲೆರೊಡರ್ಮಾ ಉಂಟಾಗುತ್ತದೆ.
ಹೈಪೊಕ್ಯಾಲಮಿಕ್ ಮರುಕಳಿಸುವ ಪಾರ್ಶ್ವವಾಯು ಎಸ್‌ಎಸ್‌ನ ಅಸ್ವಸ್ಥತೆಗಳಲ್ಲಿ ಒಂದಾಗಿದ್ದು ಇಲ್ಲಿ ದೇಹದ ಅತಿಯಾದ ನಿರ್ಜಲೀಕರಣವು ರಕ್ತದಲ್ಲಿ ಪೊಟ್ಯಾಶಿಯಂ ಕಡಿಮೆಯಾಗುವಂತೆ ಮಾಡುತ್ತದೆ. ಇದು ಪಾರ್ಶ್ವವಾಯು ಮತ್ತು ರೀನೆಲ್‌ಟ್ಯುಹುಸಕ್ ಆಸಿಡೋಸ್‌ಗೆ ದಾರಿ ಮಾಡಿಕೊಡಲಿದ್ದು, ಇಲ್ಲಿ ಮೂತ್ರಪಿಂಡಗಳು ಮೂತ್ರದಲ್ಲಿ ಆಮ್ಲಗಳನ್ನು ವಿಸರ್ಜಿಸಲು ವಿಫಲವಾಗುತ್ತವೆ. ಕೆಲವೊಮ್ಮೆ ಕಿವಿ ಸಮೀಪ ಊದಿ ಕೊಳ್ಳುವುದು, ಬಾಯಿಯಲ್ಲಿ ದೊಡ್ಡ ಲಾಲಾರಸ ಗ್ರಂಥಿ ಉರಿಯೂತ ಕೂಡ ಸಂಭವಿಸಬಹುದು.
ಈ ವ್ಯಾಧಿಗೆ ಜನೆಟಿಕ್ ಅಂದರೆ ವಂಶವಾಹಿ ಅಂಶಗಳು ಕಾರಣವಿರಬಹುದು ಎನ್ನುವುದು ವೈಜ್ಞಾನಿಕ ಬೆಳೆವಣಿಗೆಗಳಿಂದ ಕಂಡುಕೊಳ್ಳುತ್ತಿರುವ ಸಂಗತಿ.
ಜಾಗರೂಕವಾಗಿರೋದೇ ಚಿಕಿತ್ಸೆ
ರಾತ್ರಿ ಹೊತ್ತು ಕಣ್ಣಿನ ಲ್ಯೂಬ್ರಿಕೆಂಟ್ ಮುಲಾಮುಗಳ ಬಳಸಿ. ಹೇರ್ ಡೈಯರ್ ಬಳ ಕೆ ಕಡಿಮೆ ಮಾಡುವುದೊಳಿತು. ಕಣ್ಣಿನ ಒಣಗುವಿಕೆ ತುಂಬಾ ಹೆಚ್ಚಾದಾಗ ತಜ್ಞರು ಕಣ್ಣೀರ ನಾಳವನ್ನು ಬಿರಡೆ ಹಾಕಿ ಮುಚ್ಚಿ ಬಿಡುತ್ತಾರೆ. ಇದರಿಂದ ಕಣ್ಣಿನಲ್ಲಿ ನೀರು ದೀರ್ಘಕಾಲದವರೆಗೆ ಉಳಿಯುತ್ತದೆ.
ಯಥೇಚ್ಛವಾಗಿ ದ್ರವ ಪದಾರ್ಥ, ತೇವಾಂಶಭರಿತ ಗಾಳಿ ಸೇವನೆ, ದಂತ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ,  ಗ್ಲಿಸರಿನ್ ಹತ್ತಿ ತುಂಡು, ಸಕ್ಕರೆ ರಹಿತ ನಿಂಬೆ ಹನಿಗಳನ್ನು ಚೀಪುವುದರಿಂದಲೂ ಲಾಲಾರಸ ಗ್ರಂಥಿ ಪ್ರಚೋದನೆಗೊಳ್ಳುತ್ತದೆ.
ವಿಟಮಿನ್ ಇ ಎಣ್ಣೆಯನ್ನು ಕೂಡ ಬಳಸಲಾಗುತ್ತದೆ. ಪ್ಯಾರೊಟಿಡ್ ಗ್ರಂಥಿಗಳ ನೋವು ಮತ್ತು ಊದಿ ಕೊಳ್ಳುವಿಕೆಯನ್ನು ತಡೆಯಲು ಆ ಗ್ರಂಥಿಗೆ ತೇವ, ಬೆಚ್ಚಗಿನ ಕಂಪ್ರೆಸ್‌ಗಳನ್ನು ಮಸಾಜ್ ಮಾಡಬಹುದು.
ಮೂಗಿನ ದ್ವಾರದ ಒಣಗುವಿಕೆಗೆ ಉಪ್ಪುನೀರು (ಸಲೈನ್ ಮೂಗಿನ ಸ್ಪ್ರೇಗಳನ್ನು ಬಳಸಬಹುದು. ಯೋನಿಯ ಒಣಗುವಿಕೆಗೆ ಲ್ಯುಬ್ರಿಕೆಂಟ್ ಬಳಸಬಹುದು. ಎಸ್‌ಎಸ್ ಗಂಭೀರಗೊಳಿಸುವ ಸೋಂಕುಗಳಿಗೆ ಆ್ಯಂಟಿಬಯಾಟಿಕ್ ಚಿಕಿತ್ಸೆ ಹಾಗೂ ಅಪರೂಪಕ್ಕೆ ಈ ಎಸ್‌ಎಸ್‌ನಿಂದ ಬರಬಹುದಾದ ಲಿಂಫೋಮಾ ಕ್ಯಾನ್ಸರ್‌ಗೆ ಸ್ವತಂತ್ರವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ.
-ಭಾಗ್ಯ.ಎಂ.ಟಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?