ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಆರೋಗ್ಯ-ಜೀವನಶೈಲಿ

ಆಲ್ ದಿ ಬ್ರೆಸ್ಟ್

Mainashree
Updated On : 18 Feb 2013, 12:54 pm

ಸ್ಪೇನ್ ವಿಜ್ಞಾನಿಗಳು ಎದೆಹಾಲಿನ ಮಹತ್ವ ಹೆಚ್ಚಿಸುವಂಥ ಸಂಶೋಧನೆಯೊಂದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ಮಗುವಿನ ಬೆಳವಣಿಗೆಗೆ ಬೇಕಾದ 700 ಬಗೆಯ ಬ್ಯಾಕ್ಟೀರಿಯಾಗಳು ಈ ಹಾಲಿನಲ್ಲಿವೆ ಎನ್ನುತ್ತಾರೆ.
ತಾಯಿಯಿಂದ ಎದೆಹಾಲು ಪಡೆಯುವ ಮಗು ಯಾವ ರೀತಿ ಬೆಳವಣಿಗೆ ಹೊಂದುತ್ತವೆ ಎಂಬುದನ್ನೂ ಈ ಸಂಶೋಧನೆ ಹೇಳಿದೆ. ಮೈಕ್ರೋಬಯೋವ್ ಎಂದು ಕರೆಯಲಾಗುವ ಈ ಬ್ಯಾಕ್ಟೀರಿಯಾಗಳ ಅಧ್ಯಯನಕ್ಕಾಗಿ ಸ್ಪೇನ್‌ನ ಸಂಶೋಧಕರು ಡಿಎನ್‌ಎ ಪರೀಕ್ಷೆ ಮೊರೆ ಹೋಗಿದ್ದಾರೆ.  ಇನ್ನೂ ವಿಶೇಷವೆಂದರೆ ಗರ್ಭಿಣಿ ಹಂತದಲ್ಲಿ ದಪ್ಪಗಾಗಿರುವ ತಾಯಿಯ ಎದೆಹಾಲಿನಲ್ಲಿ ಈ ಬ್ಯಾಕ್ಟೀರಿಯಾಗಳ ಸಂಖ್ಯೆ ಕಡಿಮೆ ಇರುತ್ತದೆ ಎಂದು ಈ ಸಂಶೋಧನೆ ತಿಳಿಸಿದೆ.  ಈ ಸಂಶೋಧನೆಯ ಪ್ರಮುಖ ಉದ್ದೇಶ ಎದೆಹಾಲು ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆಯೋ ಅಥವಾ ಮಗುವಿನ ಬೆಳವಣಿಗೆಗೆ ಸಹಕರಿಸುತ್ತದೆಯೋ ಎಂಬುದನ್ನು ಕಂಡು ಹಿಡಿಯುವುದಾಗಿದೆ. ಈ ಬಗ್ಗೆ ಸಂಪೂರ್ಣವಾಗಿ ಒಂದು ವಿಚಾರಕ್ಕೆ ಅಂಟಿಕೊಂಡರದೇ ಇದ್ದರೂ, ಮಗುವಿನ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಬಹುದು ಎಂದು ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement