ತಂತ್ರಜ್ಞಾನ ಬೆಳೆದಂತೆಲ್ಲ ಬದುಕು ಯಂತ್ರವಾಗಿದೆ. ಒತ್ತಡದ ಜೀವನಕ್ಕೆ ಮುಕ್ತಿಯೇ ಇಲ್ಲ ಎಂಬಂಥ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಪೂರಕವಾಗಿ ಕಾಯಿಲೆಗಳೂ ಬೆನ್ನೇರಿ ಬರುತ್ತಿವೆ. ತರಹೇವಾರಿ ರೋಗಗಳಿಗೆ ತತ್‌ಕ್ಷಣದ ಮುಕ್ತಿಗಾಗಿ ಜನತೆಯ ಜಪವೊಂದೇ, 'ಇಂಗ್ಲಿಷ್ ಮದ್ದು'. ಇದು ಆ ಕ್ಷಣಕ್ಕೆ ಸ್ವಲ್ಪ ಆರಾಮದಾಯಕ ಅಷ್ಟೇ. ಆದರೆ, ಮುಂದಿನ ದಿನಗಳಲ್ಲಿ ಮರುಕಳಿಸುತ್ತದೆ ಎಂಬುದು ಹಳೆಯ ಸತ್ಯ. ಅಲ್ಲದೆ, ಇದರಿಂದ ದೈಹಿಕವಾಗಿಯೂ ದುಷ್ಪರಿಣಾಮಗಳೇ ಜಾಸ್ತಿ. ಹೀಗಾಗಿ ಜನರು ಬದಲಾಗುತ್ತಿದ್ದಾರೆ. ಅನಾದಿ ಕಾಲದಿಂದಲೂ ಗಿಡಮೂಲಿಕೆಗಳಿಂದಲೇ ಮದ್ದು ಕಂಡುಕೊಂಡಿದ್ದ ಆಯುರ್ವೇದಿಕ್ ಚಿಕಿತ್ಸೆಯತ್ತ ವಾಲುತ್ತಿದ್ದಾರೆ!
ಆಶ್ಚರ್ಯವಾದರೂ ಇದು ದಿಟ. ದಿನಗಟ್ಟಲೇ ಕಂಪ್ಯೂಟರ್ ಮುಂದೆ ಕೂತು ಬೆನ್ನು, ಮೊಣಕೈ, ಮೊಣಕಾಲು, ಬೆರಳು ಸೇರಿದಂತೆ ಇನ್ನಿತರೆ ಅಂಗಗಳ ನೋವಿಗೆ ಸಾಫ್ಟ್‌ವೇರ್ ಜನತೆ ಈಗ ಆಯುರ್ವೇದಿಕ್ ಚಿಕಿತ್ಸೆಯ ಬಾಲ ಹಿಡಿದಿದ್ದಾರೆ. ಇಂಗ್ಲಿಷ್ ಮದ್ದು ಬಿಟ್ಟು, ತಡವಾದರೂ ಪರ್ವಾಗಿಲ್ಲ ಶಾಶ್ವತ ಪರಿಹಾರ ಹಾಗೂ ದೈಹಿಕವಾಗಿ ಯಾವುದೇ ದುಷ್ಪರಿಣಾಮಗಳಿಲ್ಲದ ಆಯುರ್ವೇದಿಕ್ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ. ಇದಕ್ಕೆ ಸ್ಫೂರ್ತಿಯಾಗಿ ನಿಂತಿದ್ದು ಬೆಂಗಳೂರಿನ ಇಂದಿರಾ ನಗರದಲ್ಲಿರುವ 'ಅರ್ಥ' ಆಯುರ್ವೇದಿಕ್ ಆರೋಗ್ಯ ಕೇಂದ್ರ.
ಏನೇನು ಚಿಕಿತ್ಸೆ?
ಗಿಡಮೂಲಿಕೆಗಳಿಂದಲೇ ತಯಾರಿಸಿರುವ ವಿವಿಧ ತೈಲದಿಂದ ವಾತ, ಪಿತ್ತ, ಬೆನ್ನುನೋವು, ಮೊಣಕೈ, ಮಂಡಿ, ಕತ್ತು ಹಾಗೂ ಭುಜದ ನೋವುಗಳನ್ನು ಇಲ್ಲಿ ಮಸಾಜ್ ಮೂಲಕ ಓಡಿಸಲಾಗುತ್ತದೆ. ಒಂದೂವರೆ ಗಂಟೆಯ ತೈಲದ ಮಸಾಜ್‌ನ ಬಳಿಕ 'ಸ್ಟೀಮ್' ಚಿಕಿತ್ಸೆ ನೀಡಲಾಗುತ್ತದೆ. ಇದೇನು ದುಬಾರಿಯೇನಲ್ಲ. ಕೈಗೆಟಕುವ ದರದಲ್ಲೇ ಲಭ್ಯ. ಅಲ್ಲದೆ, ಇದಕ್ಕಾಗಿ ಪದೇ ಪದೇ ಬರಬೇಕಿಲ್ಲ. ಒಂದೆರಡು ಬಾರಿ ಮಸಾಜ್ ಮಾಡಿಸಿಕೊಂಡರೆ ಸಾಕು ಎಲ್ಲ ನೋವುಗಳಿಗೂ ಮುಕ್ತಿ ಸಿಗುತ್ತದೆ. ಅಲ್ಲದೇ ಮಾನಸಿಕವಾಗಿಯೂ ಆರಾಮದಾಯಕ.
ಸಕ್ಕರೆ ಕಾಯಿಲೆಗೂ ಮದ್ದು
ಕೇವಲ ನೋವುಗಳಿಗೆ ಮಾತ್ರವಲ್ಲ ನೆಗಡಿ, ಕೆಮ್ಮು, ನಿದ್ರಾಹೀನತೆ, ಬಂಜೆತನ, ಗ್ಯಾಸ್ಟ್ರಿಕ್, ಚರ್ಮರೋಗ, ಹಲ್ಲು ನೋವು, ಹಾರ್ಮೋನು ಸಮಸ್ಯೆ, ಲೈಂಗಿಕ ಸಮಸ್ಯೆ, ಸಕ್ಕರೆ ಕಾಯಿಲೆ, ತೂಕ ಹೆಚ್ಚಳ ಹಾಗೂ ಕಡಿಮೆ ಮಾಡಿಕೊಳ್ಳುವ ಕುರಿತು ಆಯುರ್ವೇದಿಕ್ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೆ, ಗರ್ಭಿಣಿಯರಿಗೆ ಇಂಗ್ಲಿಷ್ ಮದ್ದಿನ ಬದಲು ಆಯುರ್ವೇದದ ಮೂಲಕವೇ ಆರೋಗ್ಯಕರ ಮಗುವಿನ ಜನನಕ್ಕೆ ಚಿಕಿತ್ಸೆ ನೀಡಲಾಗುತ್ತದೆ.
ಆಚಾರ್ಯ ರೂವಾರಿ
ಬೆಂಗಳೂರಿನ ಇಂದಿರಾನಗರದಲ್ಲಿರುವ ಅರ್ಥ ಆಯುರ್ವೇದ್ ಚಿಕಿತ್ಸಾ ಕೇಂದ್ರದ ರೂವಾರಿ, ಡಾ. ಪ್ರಸನ್ನ ಎಸ್. ಆಚಾರ್ಯ. 16 ವರ್ಷಗಳ ಹಿಂದೆ ಆಯುರ್ವೇದಿಕ್ ಬಗ್ಗೆ ಮೂಗು ಮುರಿಯುತ್ತಿದ್ದ ಜನತೆ ಈಗ ತೈಲ ಮಸಾಜ್ ಮಾಡಿಸಿಕೊಂಡು ನೆಮ್ಮದಿಯ ನಗೆ ಬೀರುತ್ತಿದ್ದಾರೆ. ಸುಮಾರು 20 ಜನರ ತಂಡ ಸುಸಜ್ಜಿತವಾದ ಕಟ್ಟಡದಲ್ಲಿ ಜನರ ಆರೋಗ್ಯಕ್ಕೆ ತಣ್ಣಗೆ ದುಡಿಯುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಹಿರಿ, ಕಿರಿಯ ರಾಜಕಾರಣಿಗಳು, ಅಧಿಕಾರಿಗಳು ಇಲ್ಲಿ ಚಿಕಿತ್ಸೆ ಪಡೆದಿರುವುದು ಇವರ ಕೈಗುಣದ ಪ್ರಸಿದ್ಧಿಗೆ ಸಾಕ್ಷಿ.
ಕಾಲೇಜು ಉಂಟು
ಡಾ. ಪ್ರಸನ್ನ ಆಚಾರ್ಯ ಕೇವಲ ಚಿಕಿತ್ಸೆಗೆ ಮಾತ್ರ ಸೀಮಿತವಾಗಿಲ್ಲ. ಮುಂದಿನ ಪೀಳಿಗೆಗಾಗಿ ಹೊಸ ವೈದ್ಯರನ್ನು ಸೃಷ್ಟಿ ಮಾಡಲು ದೊಡ್ಡಬಳ್ಳಾಪುರದಲ್ಲಿ ಆಯುರ್ವೇದಿಕ್ ಕಾಲೇಜನ್ನೂ ಆರಂಭಿಸಿದ್ದಾರೆ. ನೂರಾರು ವಿದ್ಯಾರ್ಥಿಗಳು ಆಯುರ್ವೇದಿಕ್ ಚಿಕಿತ್ಸೆಯ ಪರಂಪರೆ ಮುಂದುವರಿಸಲು ಸಜ್ಜಾಗುತ್ತಿದ್ದಾರೆ. ಕಿರು ಅವಧಿಯ ಹಾಗೂ ದೀರ್ಘಾವಧಿಯ ಕೋರ್ಸ್‌ಗಳಿಗೆ ಪ್ರತ್ಯೇಕ ಶುಲ್ಕ.
ನಗರದ ಜನತೆಯೇ ಜಾಸ್ತಿ
ಸಾಮಾನ್ಯವಾಗಿ ಗ್ರಾಮೀಣರು ಹಿತ್ತಲ ಗಿಡವೇ ಮದ್ದು ಎಂದು ಆಸ್ಪತ್ರೆಯತ್ತ ಬರುವುದಿಲ್ಲ ಎಂಬ ಮಾತಿದೆ. ಆದರೆ, ಆಯುರ್ವೇದ ಚಿಕಿತ್ಸೆ ಪಡೆಯಲು ಗ್ರಾಮೀಣರು ಹಿಂದೇಟು ಹಾಕುತ್ತಿದ್ದಾರೆ. ಸಣ್ಣಪುಟ್ಟ ರೋಗಗಳಿಗೂ ಇಂಜೆಕ್ಷನ್ ಕೊಡಿ ಎಂದು ದುಂಬಾಲು ಬೀಳುತ್ತಾರೆ. ಆಯುರ್ವೇದಿಕ್ ಚಿಕಿತ್ಸಾಫಲ ನಿಧಾನವಾಗಿರುವುದರಿಂದ ಹಿಂದೆಮುಂದೆ ನೋಡುತ್ತಾರೆ. ಆದರೆ, ನಗರದ ಜನತೆಗೆ ಆಯುರ್ವೇದಿಕ್‌ನ ಅರಿವಾಗಿದೆ ಎನ್ನುತ್ತಾರೆ ಡಾ. ಪ್ರಸನ್ನ ಆಚಾರ್ಯ. ಹೆಚ್ಚಿನ ಮಾಹಿತಿಗೆ www.arthworld.com ಅಥವಾ ದೂ. 080-25288630, 25254654ಗೆ ಸಂಪರ್ಕಿಸಬಹುದು. ಹೊರಗಡೆಯಿಂದ ಬರುವವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಇರುತ್ತದೆ.
- ಚೆನ್ನು ಮೂಲಿಮನಿ