ಆರೋಗ್ಯ-ಜೀವನಶೈಲಿ

ಬೆನ್ನು ಬೆಂಡು

ವಯಸ್ಸಾದ ನಂತರ ಬೆನ್ನು ಬಾಗಿದರೆ ಓಕೆ. ಆದರೆ ಚಿಕ್ಕಂದಿನಲ್ಲಿಯೇ ಬೆನ್ನು ಬಾಗಿದರೆ ಜೋಕೆ. ಬೆನ್ನು ಬಾಗಿದ ಎಂಬ ಕಾರಣಕ್ಕಾಗಿ ಯುವಕ, ಯುವತಿಯರಿಗೆ ಮದುವೆಯಾಗುವುದೂ ಕಷ್ಟ. ಕೆಲವರು ಅತ್ಯಾಧುನಿಕ ಚಿಕಿತ್ಸೆಯ ಸೌಲಭ್ಯ ಪಡೆದು, ಸೊಟ್ಟ ಬೆನ್ನನ್ನು ನೆಟ್ಟಗೆ ಮಾಡಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ಈ ಚಿಕಿತ್ಸೆ ಲಭ್ಯ.

ಬೆನ್ನುಮೂಳೆಯು ಪಕ್ಕಕ್ಕೆ ಅಥವಾ ಮುಂಭಾಗಕ್ಕೆ ಬಾಗಿಕೊಂಡಿರುವ ರೋಗಕ್ಕೆ ಕೈಫೋಸ್ಕೋಲಿಯೋಸಿಸ್ (kyphoscoliosis) ಎಂದು ಕರೆಯುತ್ತಾರೆ. ಹಲವರಿಗೆ ಹುಟ್ಟಿನಿಂದಲೇ ಬೆನ್ನುಹುರಿ ನರದ ಸಮಸ್ಯೆಯಿಂದ ಸರಿಯಾಗಿ ಮೂಳೆಯ ಬೆಳವಣಿಗೆಯಾಗಿರುವುದಿಲ್ಲ. ಇದು ತಕ್ಷಣಕ್ಕೆ ಗೊತ್ತಾಗದೇ ಹೋದರೂ, 6, 9, 10ನೇ ವರ್ಷಗಳಿಗೆ ಗೋಚರವಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಗೊತ್ತಾದಲ್ಲಿ ಬ್ರಾಸ್ ಬೆಲ್ಟ್ ಹಾಕಿ ಸರಿಪಡಿಸಬಹುದು. ಒಂದನೇ ಹಂತ ಮೀರಿದರೆ ಶಸ್ತ್ರಚಿಕಿತ್ಸೆ ಅನಿವಾರ್ಯ. 40 ಡಿಗ್ರಿಗಿಂತ ಹೆಚ್ಚಾಗಿ ಬೆನ್ನು ಬಾಗಿದ್ದರೆ ವ್ಯಕ್ತಿಯ ದೇಹದ ನೋಟವೇ ವಿಕಾರವಾಗುತ್ತದೆ. ಕ್ರಮೇಣ ಬೆನ್ನುಹುರಿಗೂ ಇದು ತೊಂದರೆ ಕೊಡುತ್ತದೆ. ಶ್ವಾಸಕೋಶದ ಬೆಳಣಿಗೆ ಕುಂಠಿತವಾಗಿ, ಮುಂದೆ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡು, ಹೃದ್ರೋಗಕ್ಕೂ ಎಡೆ ಮಾಡಿಕೊಡುವ ಸಾಧ್ಯತೆಗಳಿರುತ್ತವೆ.

ಸ್ಕ್ರೂಅಳವಡಿಕೆ
ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ಬೆನ್ನನ್ನು ನೆಟ್ಟಗೆ ಮಾಡಬಹುದು. ಶಸ್ತ್ರಚಿಕಿತ್ಸೆಯ ಯಶಸ್ಸಿನ ಪರಿಣಾಮ ಶೇ.60 ರಿಂದ 80 ರಷ್ಟಿರುತ್ತದೆ. ಬೆನ್ನುಹುರಿಗೆ ತೊಂದರೆಯಾಗದಂತೆ ಸ್ಕ್ರೂ ಅಳವಡಿಸಲಾಗುತ್ತದೆ ಎನ್ನುತ್ತಾರೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯ ಬೆನ್ನುಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ.ಸಿ.ಕೆ. ಶ್ರೀಹರ್ಷ.
ಇವರು ಇತ್ತೀಚೆಗೆ ಹೊಳೆನರಸೀಪುರದ ಯೋಗೇಶ್ ನಾಯಕ್ (24) ಎಂಬವರಿಗೆ ಸತತ 11 ಗಂಟೆ ಶಸ್ತ್ರ್ರಚಿಕಿತ್ಸೆ ನಡೆಸಿ, ದೇಹಕ್ಕೆ 21 ಸ್ಕ್ರೂ ಅಳವಡಿಸಿ ನಂತರ ಡೈರೆಕ್ಟ್ ವರ್ಟೆಬ್ರಲ್ ಕಾಲಂ ರೊಟೇಷನ್ ಎಂಬ ವಿಧಾನದಿಂದ ಬೆನ್ನುಮೂಳೆಯನ್ನು ನೇರ ಮಾಡಿದ್ದಾರೆ. ಮತ್ತೊಬ್ಬ ಯುವಕನಿಗೆ 8 ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿ 19 ಸ್ಕ್ರೂ ಅಳವಡಿಸಿ ಬೆನ್ನುಮೂಳೆ ಸರಿಪಡಿಸಿದ್ದಾರೆ. ಸಾಮಾನ್ಯವಾಗಿ 16 ವರ್ಷದೊಳಗೆ ಈ ಶಸ್ತ್ರ ಚಿಕಿತ್ಸೆ ಮಾಡುವುದರಿಂದ ಮೂಳೆ ಸುಲಭವಾಗಿ ಬಾಗಿಸಬಹುದು. ಮೂಳೆ ಬಲಿತರೆ ಸಮಸ್ಯೆ ಹೆಚ್ಚು. 24 ಮತ್ತು 21ನೇ ವಯಸ್ಸಿನ ಯುವಕರಿಗೆ ಈ ಶಸ್ತ್ರಚಿಕಿತ್ಸೆ ಮಾಡಿರುವುದು ಮೈಸೂರಿನಲ್ಲಿ ಮೊದಲು. ಈ ಚಿಕಿತ್ಸೆಗೆ 2-2.5 ಲಕ್ಷ ವೆಚ್ಚವಾಗುತ್ತದೆ. ಉತ್ಕೃಷ್ಟ ದರ್ಜೆಯ ಸ್ಕ್ರೂ ಅಳವಡಿಸಿದರೆ ವೆಚ್ಚ 4 ಲಕ್ಷರವರೆಗೂ ತಲುಪಬಹುದು.  ಯೋಗೇಶ್ ನಾಯಕ್ ಖಾಸಗಿ ಕಂಪನಿಯೊಂದರಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದು, 7ನೇ ತರಗತಿ ಓದುವಾಗ ಬೆನ್ನು ಬಾಗಲು ಆರಂಭವಾಯಿತು. ಬಳಿಕ ಅದು ಹೆಚ್ಚಾದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾದರು ಇಎಸ್‌ಐ ಸೌಲಭ್ಯ ಇದ್ದರಿಂದ ಅವರಿಗೆ ಕೇವಲ 10 ಸಾವಿರ ವೆಚ್ಚ ತಗುಲಿದೆ.

ಬೇಗ ಗುಣಮುಖ

ಶಸ್ತ್ರಚಿಕಿತ್ಸೆಯ ಬಳಿಕ ಒಂದು ವಾರದಲ್ಲಿ ಓಡಾಡಬಹುದು. ಮೂರು ತಿಂಗಳ ವಿಶ್ರಾಂತಿ ಅಗತ್ಯ. ನಂತರ ಎಂದಿನಂತೆ ಜೀವನ ಸಾಗಿಸಬಹುದು.  ವಿವರಗಳಿಗೆ ಡಾ.ಸಿ.ಕೆ. ಶ್ರೀಹರ್ಷ, ಮೊ.99001 73040.

ಬಹುತೇಕ ಮಂದಿ ಶಸ್ತ್ರಚಿಕಿತ್ಸೆಯ ಹೆದರಿಕೆಯಿಂದಲೇ ವೈದ್ಯರ ಬಳಿ ಬರುವುದಿಲ್ಲ. ಮದುವೆಗೆ ವರ ಅಥವಾ ವಧು ನೋಡಲು ಶುರು ಮಾಡಿದಾಗ ಬೆನ್ನು ಬಾಗಿದೆ ಎಂಬ ಕಾರಣಕ್ಕಾಗಿ ನಿರಾಕರಣೆಗೆ ಒಳಗಾದಾಗ ಬರುತ್ತಾರೆ. ಮೂಳೆ ಬಲಿತ ನಂತರ ಶಸ್ತ್ರಚಿಕಿತ್ಸೆ ಕ್ಲಿಷ್ಟಕರ. ಆದ್ದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮಾಡಿಸುವುದು ಉತ್ತಮ. ರಾಡ್, ವೈರ್ ಮತ್ತು ಸ್ಕ್ರೂ ಹಾಕಿ ಬೆನ್ನಮೂಳೆ ಸರಿಪಡಿಸಲಾಗುತ್ತದೆ.
- ಡಾ. ಸಿ.ಕೆ. ಶ್ರೀಹರ್ಷ

- ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ