ಕೂದಲು ಇದ್ದೋರಿಗೆ ಅದರ ಮಹತ್ವ ಗೊತ್ತಾಗಲ್ಲ. ಆದರೆ, ತಲೆ ಬಾಣಲೆ ಆದವರಿಗೆ ಕೂದಲಿನ ಮಹತ್ವ ಕೇಳಿನೋಡಿ. ಅಯ್ಯೋ ಕೂದಲು ಇಲ್ಲದೇ ಹೋದರೆ ಜೀವನವೇ ಮುಗೀತು ಅನ್ನೋ ಲೆಕ್ಕಕ್ಕೆ ಮಾತನಾಡುತ್ತಾರೆ. ವಿಶೇಷವಾಗಿ ಮಹಿಳೆಯರಿಗೆ ಕೂದಲು ಸೌಂದರ್ಯದ ಸಂಕೇತ. ಕೂದಲು ರಕ್ಷಣೆ, ಎಲ್ಲರಿಗೂ ಸಮಸ್ಯೆಯೇ. ಆದರೆ, ಗುಂಡು ಹೊಡೆಯುವ ಗಂಡುಗಳಿಗೆ ಒಂದು ವಿಷಯ ಹೇಳಬೇಕೆಂದರೆ, ಕುಡಿಯುವ ಬಿಯರು ಕೂಡಾ ನಿಮ್ಮ ಕೂದಲನ್ನು ರಕ್ಷಿಸುತ್ತದೆ. ಈ ಬಿಯರ್ ಅನ್ನು ಶಾಂಪುವಿನ ರೀತಿಯಲ್ಲಿ ಬಳಸಬಹುದು. ಬಿಯರ್ನಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು. ನಿತ್ಯ ಬಳಸುವ ಶಾಂಪು ಜತೆಗೆ ಬಿಯರ್ ಬೆರೆಸಿ ಬಳಸಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ದೊರೆಯುವ ಶಾಂಪುಗಳಷ್ಟೇ ಬಿಯರ್ ಕೂಡಾ ತಲೆಕೂದಲಿನ ರಕ್ಷಣೆಯಲ್ಲಿ ಸಶಕ್ತವಾಗಿದೆ. ಬಿಯರ್ನಲ್ಲಿರುವ ಕಂಟೆಂಟ್ಗಳು ತಲೆಯನ್ನು ತಂಪಾಗಿಡುವುದಲ್ಲದೇ, ಕೂದಲು ಉದ್ದ ಬೆಳೆಯಲು ಕೂಡಾ ಸಹಕಾರಿ. ಇದಕ್ಕೊಸ್ಕರ ಹೊಸದಾಗಿ ಬಿಯರ್ ಕೊಂಡು ತರಬೇಕಂತಿಲ್ಲ. ಮನೆಯಲ್ಲಿ ಪಾರ್ಟಿ ಮಾಡಿ ಉಳಿದ ಬಿಯರ್ ಅನ್ನೇ ಬಳಸಿಕೊಳ್ಳಬಹುದು. ಬಿಯರ್ ಅನ್ನು ಶಾಂಪು ಜತೆ ಮಿಕ್ಸ್ ಮಾಡಿ ತಲೆಗೆ ಹಚ್ಚಿಕೊಳ್ಳಿ. ಬಳಿಕ ನಯವಾಗಿ ತಲೆಗೆ ಮಸಾಜ್ ಮಾಡಿಕೊಂಡು ತೊಳೆದುಕೊಳ್ಳಿ. ನಂತರ ತಲೆಯನ್ನು ಟವೆಲ್ನಿಂದ ಕಟ್ಟಿಕೊಂಡು ಮತ್ತೆ ಶಾಂಪು ಬಳಸಿ, ತಲೆ ತೊಳೆದುಕೊಳ್ಳಬೇಕು. ಆಗ ಬಿಯರ್ ವಾಸನೆ ದೂರವಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ತಲೆಕೂದಲಿಗೆ ಹೊಳಪು ಬರುತ್ತದೆ ಅಷ್ಟೇ ಅಲ್ಲದೆ, ತಲೆಕೂದಲು ಉದುರುವುದು ಕೂಡಾ ತಡೆಯುತ್ತದೆ.
- ಶಶಿಧರ್ ಕೆ.