'ನಿತ್ಯ ಸೇಬು ತಿಂದು, ವೈದ್ಯರಿಂದ ದೂರ ಇರಿ' ಎಂಬ ಆರೋಗ್ಯದಾಯಕ ಸಾಲುಗಳ 'ಸೇಬು' ಜಾಗದಲ್ಲಿ ಸ್ಟ್ರಾಬೆರಿಯನ್ನೂ ಸೇರಿಸಬಹುದು. ಹೇರಳವಾದ ಪೌಷ್ಟಿಕಾಂಶ ಹೊಂದಿರುವ ಸ್ಟ್ರಾಬೆರಿಗೆ ಬಹು ಬೇಡಿಕೆ ಇದೆ. ಕಡುಗೆಂಪು ಬಣ್ಣ ಹೊಂದಿದ ರಸವತ್ತಾದ ಸ್ಟ್ರಾಬೆರಿಗೆ ಕನ್ನಡದಲ್ಲಿ 'ನೆಲಮುಳ್ಳಿ ಹಣ್ಣು' ಎಂದೂ ಕರೆಯುತ್ತಾರೆ.
ಬಣ್ಣ, ರುಚಿ, ಶಕ್ತಿ- ಇವೆಲ್ಲವೂ ಸ್ಟ್ರಾಬೆರಿಯ ಖ್ಯಾತಿಯನ್ನು ಹೆಚ್ಚಿಸಿವೆ. ಉತ್ತರ ಅಮೆರಿಕ ಮೂಲದ ಹಣ್ಣಿಗೆ ಪ್ರಪಂಚದಾದ್ಯಂತ ಬೇಡಿಕೆ ಇದೆ. ಅಲ್ಲದೆ ಅಮೆರಿಕ, ಟರ್ಕಿ, ಸ್ಪೇನ್, ಈಜಿಪ್ಟ್, ಜಪಾನ್ ಸೇರಿದಂತೆ ವಿವಿಧ ದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಭಾರತದ ನೀಲಗಿರಿ, ಡಾರ್ಜಿಲಿಂಗ್ ಬೆಟ್ಟಗಳು, ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು-ಕಾಶ್ಮೀರ, ಪಂಜಾಬ್ ಮತ್ತು ಹರಿಯಾಣಗಳಲ್ಲಿ ಬೆಳಯಲಾಗುತ್ತಿದ್ದು, ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಒಂದು ಕಪ್ ಸ್ಟ್ರಾಬೆರಿ ಹಣ್ಣು 45 ಕ್ಯಾಲೊರಿ ಒಳಗೊಂಡಿರುತ್ತದೆ. ವಿಟಮಿನ್ 'ಸಿ' ಹಾಗೂ ಫ್ಯಾಮೋನೈಡ್ಸ್ಗಳನ್ನು ಒದಗಿಸುವ ಅತ್ಯಂತ ಉತ್ತಮ ಮೂಲವಾಗಿದೆ.
ಲಾಭಗಳೇನು?