ಆರೋಗ್ಯ-ಜೀವನಶೈಲಿ

ಸ್ಮೈಲ್ ಪ್ಲೀಸ್

ಉತ್ತಮ ಸೆಕ್ಸ್ ಗೆ ಅದನ್ನು ಸೇವಿಸಿ, ಇದನ್ನು ಸೇವಿಸಿ, ಹಾಗೆ ಮಾಡಿ, ಹೀಗೆ ಮಾಡಿ ಎಂಬಿತ್ಯಾದಿ ಐಡಿಯಾಗಳನ್ನು ನಿಮಗೂ ಯಾರಾದರೂ ಕೊಟ್ಟಿರಬಹುದು.

ಉತ್ತಮ ಸೆಕ್ಸ್ ಗೆ ಅದನ್ನು ಸೇವಿಸಿ, ಇದನ್ನು ಸೇವಿಸಿ, ಹಾಗೆ ಮಾಡಿ, ಹೀಗೆ ಮಾಡಿ ಎಂಬಿತ್ಯಾದಿ ತರಲೆ ಐಡಿಯಾಗಳನ್ನು ನಿಮಗೂ ಯಾರಾದರೂ ಕೊಟ್ಟಿರಬಹುದು. ಅಥವಾ ಎಲ್ಲೋ ಜಾಹೀರಾತಿನಲ್ಲಿ ಕೇಳಿರಬಹುದು. ಇಲ್ಲವೇ ವೈಜ್ಞಾನಿಕವಾಗಿಯೂ ತಿಳಿದು ಪ್ರಯೋಗಿಸಿರಲೂಬಹುದು. ಆದರೆ ಕೆಲವರಿಗೆ ಇಂಥ ಮಾರ್ಗಗಳನ್ನು ಅನುಸರಿಸುವುದೆಂದರೆ ಏನೋ ಮುಜುಗರ, ಕಿರಿಕಿರಿ. ಹಾಗಾದರೆ ಅಂಥವರು ಸುಮ್ಮನೆ ಕೂರಲಾದೀತೆ? ಮಾಡುವ ಕೆಲಸವನ್ನು ಮಾಡಲೇ ಬೇಕಲ್ಲವೇ?
ಹಾಗಾದರೆ ನೀವು ಏನು ಮಾಡಬೇಕು. ಸುಮ್ಮನೆ ನಕ್ಕು ಬಿಡಿ. ಅಷ್ಟೇ ನೀವು ಮಾಡಬೇಕಾದ್ದು. ಉಳಿದದ್ದೆಲ್ಲಾ ಅದಾಗೇ ಆಗುತ್ತದೆ!
ಇದು ನಿಮ್ಮ ಸೆಕ್ಸ್ ಜೀವನವನ್ನು ಸಂತೃಪ್ತಿಯಾಗಿಡುವುದಷ್ಟೇ ಅಲ್ಲ, ನಿಮ್ಮ ದೀರ್ಘಾಯುಷ್ಯ ಜೀವನಕ್ಕೂ ಸಹಕಾರಿ ಎಂದು ಸಂಶೋಧನೆಯಿಂದ ದೃಢಪಟ್ಟಿದೆ.ಈ ರೀತಿ ಮುಕ್ತವಾಗಿ ನಗುವುದರಿಂದ ನಿಮ್ಮ ಮೆದುಳು ಹಾಗೂ ದೇಹವನ್ನು ಆರೋಗ್ಯವಾಗಿ ಇಡುತ್ತದೆ.
ನಗುವುದರಿಂದ ದೇಹದಲ್ಲಿ ವಿಶೇಷ ಕೆಮಿಕಲ್ ಉತ್ಪತ್ತಿಯಾಗುತ್ತದೆ. ಇದು ನಮ್ಮನ್ನು ಗುಣಾತ್ಮಕ ಮನೋಭಾವ, ಆರೋಗ್ಯಯುಕ್ತವನ್ನಾಗಿ ಮಾಡುತ್ತದೆ. ಜತೆಗೆ ದೇಹವನ್ನು ಫಿಟ್ ಆಗಿಡುವುದಲ್ಲದೆ, ನಿಮ್ಮ ಅಸಲಿ ವಯಸ್ಸನ್ನು ಮುಚ್ಚಿಡುತ್ತದೆ. ಅಂದರೆ ಚಿಕ್ಕವರಂತೆ ಕಾಣುತ್ತೀರಿ.
ಸಂಶೋಧನೆ ಪ್ರಕಾರ ದಿನಕ್ಕೆ 10ರಿಂದ 15 ನಿಮಿಷ ನೀವು ಚೆನ್ನಾಗಿ ನಕ್ಕರೆ ಅದೇ ಸಾಕು. ನಿಮ್ಮ ತೂಕವನ್ನೂ ಇಳಿಸಲು ನಗುವೇ ಸಾಧನವಾಗುತ್ತದೆ. ಇದಲ್ಲದೇ ದೇಹದೊಳಗಿರುವ ಮಾಂಸಖಂಡಗಳಿಗೂ ಇದು ಅನುಕೂಲಕರ.

ಲೈಂಗಿಕ ಆಸಕ್ತಿ

ಅಮೆರಿಕ ಸಂಶೋಧನಾ ಸಂಸ್ಥೆಯೊಂದರ ಪ್ರಕಾರ, ಜನರು ಹಾಸ್ಯ ಚಲನಚಿತ್ರಗಳನ್ನು ನೋಡುವುದರಿಂದ ಅವರ ಹಾರ್ಮೋನ್ಗಳಲ್ಲಿ ಬದಲಾವಣೆಗಳಾಗುತ್ತದೆ. ಇದು ಲೈಂಗಿಕ ಕ್ರಿಯೆ ಅಪೇಕ್ಷಿಸುವಂತೆ ಮಾಡುತ್ತದೆ.
ನಗು ನಮ್ಮ ಯಾಂತ್ರಿಕ ಜೀವನದಲ್ಲಿ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಅದು ನಮ್ಮ ಆಹಾರ ಆಯ್ಕೆ ಮತ್ತು ಭಾವನೆಗಳ ಮೇಲೆ ತನ್ನ ಪ್ರಭಾವ ಬೀರುತ್ತದೆ.
ಯಾವುದೋ ಒಂದು ಚಾಕೊಲೆಟ್ ಅನ್ನು ತಿನ್ನಬಾರದು ಎಂದು ದೃಢಮನಸ್ಸು ಮಾಡಿದ್ದೀರಾದರೂ ನಿಮ್ಮ ನಗು ನಿರ್ಧಾರವನ್ನು ಚಂಚಲವನ್ನಾಗಿಸುತ್ತದೆ. ಏಕೆಂದರೆ ನಕ್ಕಾಗ ಸೆರೋಟಾನಿನ್ (ವಿಶೇಷ ಕೆಮಿಕಲ್) ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದರಿಂದ ನಿರ್ಧಾರವೂ ಬದಲಾಗುತ್ತದೆ.
ಇದಲ್ಲದೆ ಹೀಗೆ ಉತ್ಪತ್ತಿಯಾದ ಕೆಮಿಕಲ್ ಹೊಟ್ಟೆ ತುಂಬಿರದಿದ್ದರೂ ಹೊಟ್ಟೆ ತುಂಬಿದ ಸಂತೃಪ್ತಿ ಭಾವನೆಗೆ ಕಾರಣ ಆಗುತ್ತೆ. ಇದನ್ನು ಕೇವಲ ಚಾಕೊಲೆಟ್ಗಷ್ಟೇ ಅಲ್ಲದೇ ಸೆಕ್ಸ್ಗೂ ಅನ್ವಯಿಸಬಹುದು.

ಚಿರಯವ್ವನ
ನಗು ಚಿರಯವ್ವನದ ರಹಸ್ಯ ಇದ್ದಹಾಗೆ. ನಾವು ನಕ್ಕಾಗ ಮುಖಕ್ಕೆ ರಕ್ತದ ಹರಿವು ಹೆಚ್ಚುವುದರಿಂದ ಕಣ್ಣುಗಳಲ್ಲಿ ಹೊಳಪು ಬರುತ್ತದೆ. ಇದರಿಂದ ನಮ್ಮ ಮನಸ್ಸಿನಲ್ಲಿನ ಒತ್ತಡ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಚರ್ಮ ಸುಕ್ಕುಗಟ್ಟುವುದು ನಿಲ್ಲುತ್ತದೆ.

- ಶ್ರೀನಿವಾಸ್ ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ಹಣದುಬ್ಬರ ಶೇ.5.2; ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಆಹಾರ, ಇಂಧನ ಬೆಲೆ ಏರಿಕೆ!

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ