ಆರೋಗ್ಯ-ಜೀವನಶೈಲಿ

ಮಕ್ಕಳ ಭಾಗ್ಯ

ದೈವಸೃಷ್ಟಿಯಲ್ಲಿ ಎಲ್ಲವೂ ಸಾಮಾನ್ಯ ಎನ್ನುವ ಹಾಗೆ ಕೆಲವು ದಂಪತಿಗೆ ಮಕ್ಕಳಾಗುವ ಸಾಧ್ಯತೆಗಳೇ ಕಡಿಮೆ ಆಗಬಹುದು. ಪತಿ-ಪತ್ನಿಯರ ದೈಹಿಕ ಕಾರಣ, ಹುಟ್ಟಿನಿಂದಲೇ ಬಂದ ನಪುಂಸಕತೆ, ಅಪಘಾತ ಮುಂತಾದ ಕಾರಣಗಳಿಂದ ಮಕ್ಕಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಅಂಥವರೂ ಈಗ ಮಕ್ಕಳನ್ನು ಪಡೆಯಬಹುದು!
ಸಹಜವಾಗಿಯೇ ಎಲ್ಲರಂತೆ ಗರ್ಭದಲ್ಲಿ 9 ತಿಂಗಳು ಭ್ರೂಣವನ್ನು ಪೋಷಿಸಿ, ಗರ್ಭಿಣಿಗೆ ದೊರೆಯುವ ಅದಮ್ಯ ಆನಂದವನ್ನು ಅನುಭವಿಸಿ ನಂತರ ಮಗುವಿಗೆ ಜನ್ಮ ನೀಡಬಹುದು. ವೈದ್ಯ ವಿಜ್ಞಾನದ ಪ್ರಯೋಗಗಳು ನೀಡಿದ ಯಶಸ್ಸಿನ ಪರಿಣಾಮವಾಗಿ ಪ್ರತಿ ಮಹಿಳೆಯೂ ತಾನು ಹೊತ್ತು, ತಾನೇ ಹೆರಬಹುದು. ಇದರ ಸುಖವೇ ದೈವದತ್ತವಲ್ಲವೇ?

ಭರವಸೆಯ ಬೆಳಕು
ಐವಿಎಂ ತಂತ್ರಜ್ಞಾನ ಇನ್ವಿಟ್ರೊ ಫರ್ಟಿಲೈಜೇಷನ್ (ಐವಿಎಫ್) ಹಾಗೂ ಇನ್ವಿಟ್ರೋ ಮ್ಯಾಚುರೈಸೇಷನ್ (ಐವಿಎಂ) ಈಗ ವ್ಯಾಪಕವಾಗಿ ಕೇಳಿ ಬರುತ್ತಿರುವ ವೈದ್ಯಕೀಯ ಪಾರಿಭಾಷಿಕ ಶಬ್ದಗಳು. ಕೃತಕ ಗರ್ಭಧಾರಣೆ. ಇದು ಅಧಿಕೃತ ಮತ್ತು ಸರಳ. ವೈದ್ಯಕೀಯವಾಗಿ ಯಾವುದೇ ಸಮಸ್ಯೆ ಇಲ್ಲದೇ ಮಹಿಳೆಯ ಅಂಡಾಣು ಮತ್ತು ಪುರುಷನ ವೀರ್ಯಾಣುಗಳ ಮಿಲನ. ತಮ್ಮ ಸುಖ ಸಂಸಾರವನ್ನು ನಡೆಸಿಕೊಂಡೇ ಗರ್ಭವತಿ ಆಗಬಹುದು.

ಪಕ್ವವಾಗುವ ಅಂಡಾಣು
ಇನ್ನು ಐವಿಎಂ ವಿಧಾನದಲ್ಲಿ ಅಂಡಾಣುಗಳನ್ನು ದೇಹದ ಹೊರ ಭಾಗದಲ್ಲಿ ಪಕ್ವ ಮಾಡಲಾಗುತ್ತದೆ. ಅವು ಪಕ್ವಗೊಳ್ಳುವ ಮುನ್ನವೇ ಪಡೆದು ಮುಂದಿನ ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ. ಆದರೆ ಐವಿಎಫ್‌ನಲ್ಲಿ ಇದಕ್ಕೆ ತದ್ವಿರುದ್ಧ ಸಾಂಪ್ರದಾಯಿಕ ವಿಧಾನದಿಂದ ಅಂಡಾಣುಗಳನ್ನು ಪ್ರಯೋಗಿಸಲಾಗುತ್ತದೆ. ಐವಿಎಂ ಪ್ರಕ್ರಿಯೆಯಲ್ಲಿ ಅಪಕ್ವ ಅಂಡಾಣುಗಳನ್ನು 24ರಿಂದ 48 ಗಂಟೆ ಹಾರ್ಮೋನ್‌ಗಳ ಸಹಾಯದಿಂದ ಪಕ್ವಗೊಳಿಸಲಾಗುತ್ತದೆ. ಜತೆಗೆ 'ವೀರ್ಯಾಣು ಇಂಜೆಕ್ಷನ್‌' ನೀಡುವ ಮೂಲಕ ಅಂಡಾಣುಗಳನ್ನು ಪಕ್ವಗೊಳಿಸಲಾಗುತ್ತದೆ.

ಯಾರಿಗೆ ಈ ಚಿಕಿತ್ಸೆ ಸೂಕ್ತ?
ಗರ್ಭಧಾರಣೆಗೆ ಅಗತ್ಯವಾದ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸದ ಹಾಗೂ ಈ ಔಷಧಿಗಳ ಮಟ್ಟಿಗೆ ಸೂಕ್ಷ್ಮ ದೈಹಿಕ ಮತ್ತು ಮಾನಸಿಕ ಮಟ್ಟವನ್ನು ಹೊಂದಿರುವ ಮಹಿಳೆಯರಿಗೆ ಐವಿಎಂ ಮೂಲಕ ಗರ್ಭಧಾರಣೆ ಸೂಕ್ತವಾದದ್ದು. ಜತೆಗೆ ಸಣ್ಣ ವಯಸ್ಸಿನ ಮಹಿಳೆಯರಿಗೆ ಋತುಸ್ರಾವದಲ್ಲಿ ಏರುಪೇರಿಲ್ಲದೇ ಇದ್ದಾಗಲೂ ಈ ಚಿಕಿತ್ಸೆ ಸೂಕ್ತ. ಏಕೆಂದರೆ ಇದಕ್ಕೆ ತಗಲುವ ವೆಚ್ಚ ಕಡಿಮೆ. ಅಲ್ಲದೇ ಸುರಕ್ಷಿತ ಕೂಡ. ಹಾಗೆಯೇ ಕ್ಯಾನ್ಸರ್‌ನಂಥ ರೋಗಗಳಿಂದ ಬಳಲುತ್ತಿರುವವರು ಮಗು ಬೇಕೆಂದು ಬಯಸಿದರೂ ಐವಿಎಂ ಪದ್ಧತಿಯೇ ಸರಿ. ಏಕೆಂದರೆ ಮೋಥೆರಪಿ ಅಥವಾ ರೇಡಿಯೋಥೆರಪಿ ಚಿಕಿತ್ಸೆಗೆ ಐವಿಎಂ ಅಡ್ಡಿಯಾಗದು.
ಅಪಕ್ವ ಅಂಡಾಣುಗಳನ್ನು ಪಡೆದಿಟ್ಟುಕೊಂಡು ಅವುಗಳನ್ನು ಪ್ರಯೋಗಾಲಯದಲ್ಲಿ ಪಕ್ವಗೊಳಿಸಿದ ನಂತರ ಐವಿಎಫ್ ಪ್ರಕ್ರಿಯೆಗೆ ಒಳಗಾಗುವ ಅನಿವಾರ್ಯತೆ ಹೊಂದಿರುವ ಮಹಿಳೆಗೆ ಇವನ್ನು ಬಳಸಬಹುದು. ಇದೂ ಇದರ ಉಪಯೋಗಗಳಲ್ಲಿ ಒಂದು. ಸಾಮಾನ್ಯವಾಗಿ 30ರಿಂದ 35ನೇ ವಯೋವಾನದ ಮಹಿಳೆಯರಲ್ಲಿ ಅಂಡಾಣು ಉತ್ಪಾದನಾ ಪ್ರಮಾಣ ಹೆಚ್ಚಿರುತ್ತದೆ.
ಐವಿಎಂ ವೈದ್ಯ ತಂತ್ರಜ್ಞಾನದ ಸಹಕಾರದೊಂದಿಗೆ ಪಡೆದ ಮಕ್ಕಳ ಸಂಖ್ಯೆ ಇಡೀ ವಿಶ್ವದಲ್ಲಿ ಹೆಚ್ಚೆಂದರೆ 400. ಈ ತಂತ್ರಜ್ಞಾನದಿಂದ ಹುಟ್ಟಿರುವ ಮಕ್ಕಳು ಇನ್ನೂ ತುಂಬ ಸಣ್ಣ ವಯಸ್ಸಿನವರು. ಸಾಮಾನ್ಯವಾಗಿ 30-35 ದಾಟಿದ ಮಹಿಳೆಯರು ಸುರಕ್ಷಿತ ಎಂಬುದೂ ಸೇರಿದಂತೆ ಕೆಲವು ಕಾರಣಗಳಿಂದ ಐವಿಎಂ ತಂತ್ರಜ್ಞಾನಕ್ಕೆ ಮೊರೆ ಹೋದರೆ ಗರ್ಭಪಾತ ಸಾಧ್ಯತೆಗಳೇ ಹೆಚ್ಚು. ಇದು ವೈದ್ಯಕೀಯವಾಗಿ ದಂಪತಿಗಳು ಗಮನಿಸಬೇಕಾದ ಅಂಶ. ಇಂಥವರಿಗೆ ಐವಿಎಫ್ ಸೂಕ್ತ.
ಗರ್ಭಕೋಶವನ್ನು ಐವಿಎಂ ದುರ್ಬಲಗೊಳಿಸುವುದಿಲ್ಲ. ಏನೇ ಆದರೂ ಇದು ಖಚಿತ ಫಲಿತಾಂಶ ನೀಡಿಯೇ ಬಿಡುತ್ತದೆ ಎನ್ನುವುದು ಇನ್ನೂ ಅನುಮಾನಾಸ್ಪದ ಎನ್ನುತ್ತದೆ ವೈದ್ಯಲೋಕ. ಆದ್ದರಿಂದ ಗರ್ಭಧಾರಣೆಗೆ ಒಳಗಾಗಲು ಬಯಸುವ, ಮಕ್ಕಳಾಗದ ದಂಪತಿ ಒಮ್ಮೆ ಐವಿಎಫ್ ತಜ್ಞರನ್ನು ಸಂಪರ್ಕಿಸಿ, ಅವರು ಸೂಚಿಸುವ ಮಾರ್ಗವನ್ನು ಅನುಸರಿಸುವುದು ಸೂಕ್ತ. ಐವಿಎಂ ಮೇಲುನೋಟಕ್ಕೆ ಆಕರ್ಷಕ ಹಾಗೂ ಮನಸ್ಸಿಗೆ ಹೆಚ್ಚು ಕಿರಿಕಿರಿ ಮಾಡದ ಪ್ರಯೋಗಾಲಯದಿಂದ ಪಡೆದ ನೈಸರ್ಗಿಕ ಅಂಡಾಣುಗಳ ಸಮ್ಮಿಶ್ರಣ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- 080-26673585, 26673586.

ಸಾರ್ಥಕ ನೆಮ್ಮದಿ
ದಾನಿಗಳು ಯಾರೆಂಬುದನ್ನೂ ತೀರಾ ಅನಿವಾರ್ಯ ಆಗದ ಹೊರತು ಬಹಿರಂಗಪಡಿಸುವುದಿಲ್ಲ. ವೈದ್ಯಕೀಯ ಕ್ಷೇತ್ರ, ಪತಿ-ಪತ್ನಿಯನ್ನು ಹೊರತುಪಡಿಸಿದರೆ ವಿಷಯ ಬೇರೆಯವರಿಗೆ ತಿಳಿಯುವುದೂ ಇಲ್ಲ. ತಿಳಿಯಬೇಕಾದ ಅನಿವಾರ್ಯತೆಯೂ ಇಲ್ಲ. ಐವಿಎಫ್ ತಂತ್ರಜ್ಞಾನದಿಂದ ಹಲವರು ಮಗುವನ್ನು ಪಡೆದು ಸಾರ್ಥಕ ನೆಮ್ಮದಿ ಪಡೆದಿದ್ದಾರೆ.
- ಡಾ. ದೇವಿಕಾ ಗುಣಶೀಲ, ಸಂತಾನಫಲ ಚಿಕಿತ್ಸಕರು, ಗುಣಶೀಲ ಆಸ್ಪತ್ರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video