ಆರೋಗ್ಯ-ಜೀವನಶೈಲಿ

ಕೆಮ್ಮಿದರೆ ಹುಷಾರ್!

ಅಯ್ಯೋ, ಸದಾ ಕೆಮ್ಮು. ಕೆಲವರಿಗೆ ಒಣ ಕೆಮ್ಮು ಬಾಧಿಸುತ್ತಿದ್ದರೆ, ಮತ್ತೆ ಕೆಲವರಿಗೆ ಕಫದೊಂದಿಗೆ ಕೆಮ್ಮು ಕಾಣಿಸಿಕೊಳ್ಳುತ್ತದೆ. ಕಸಕಸ ಶಬ್ದದೊಂದಿಗೆ, ಗಂಟಲು ಕೆರೆತ, ಎದೆಗೂಡು, ಪಕ್ಕೆಗಳಲ್ಲಿ ನೋವು ಹಾಗೂ ಜಿಗುಟಾದ ಕಫದಿಂದ ಕೆಮ್ಮು ಬಹಳ ಕಿರಿಕಿರಿ ತರುತ್ತದೆ. ಧೂಳು, ಹೊಗೆ, ಮಂಜು, ಮಾಲಿನ್ಯದಲ್ಲಿ ವಿಹಾರ, ಅತಿಶೀತ, ಜಿಡ್ಡು, ಟಾನ್ಸಿಲ್ ಹಾಗೂ ಕಿರುನಾಲಿಗೆಯ ಉರಿಯೂತ ಕೆಮ್ಮಿಗೆ ಕಾರಣಗಳು.

ಮನೆ ಮದ್ದೇನು?
-    ಅಳಲೆಕಾಯಿ ಸಿಪ್ಪೆಯನ್ನು ಸಾಣೆಕಲ್ಲಿನಲ್ಲಿ ತೇಯ್ದು 1/4 ಭಾಗವನ್ನು ಜೇನು ತುಪ್ಪದೊಂದಿಗೆ ಬೆಳಗ್ಗೆ ಮತ್ತು ರಾತ್ರಿ ನೆಕ್ಕಬೇಕು. ಮಕ್ಕಳಿಗೆ 1/4 ಕಾಯಿಗಿಂತ ಕಡಿಮೆ ಭಾಗದಿಂದ ಸಿಪ್ಪೆ ತೇಯಬೇಕು.
-     ಕಫ ಬರುವ ಕೆಮ್ಮಿಗೆ 15-20 ಕಾಳು ಮೆಣಸನ್ನು ಒಂದು ಲೋಟ ನೀರಲ್ಲಿ ಸ್ವಲ್ಪ ಬೆಲ್ಲದೊಂದಿಗೆ ಸೇರಿಸಿ 1/2ದಷ್ಟು ಆಗುವವರೆಗೆ ಕುದಿಸಿ ಕಷಾಯ ಮಾಡಿ 2 ಚಮಚದಷ್ಟು ದಿನಕ್ಕೆರಡು ಬಾರಿ ನೀಡಿ.
-    ಒಂದು ಹಿಡಿ ತುಳಸಿ ಎಲೆ, ಒಂದು ಹಿಡಿ ಆಡುಸೋಗೆ ಎಲೆ ಹಾಗೂ ಒಂದು ಚಮಚ ಒಣಶುಂಠಿ ಪುಡಿಯನ್ನು, ಎರಡು ಲೋಟ ನೀರಿನಲ್ಲಿ ಹಾಕಿ, ಒಂದು ಲೋಟ ಆಗುವವರೆಗೆ ಕುದಿಸಿ, ಪ್ರತಿಸಲ 1/4 ಲೋಟದಂತೆ ದಿನಕ್ಕೆ 4 ಬಾರಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
    ಹಸಿ ಈರುಳ್ಳಿಯ ಒಂದು ಚಮಚ ರಸಕ್ಕೆ ಒಂದು ಚಮಚ ಬೆಲ್ಲ ಸೇರಿಸಿ ಸೇವಿಸಿ.
-     4-5 ಲವಂಗವನ್ನು ಹುರಿದು ಒಂದು ಚೂರು ಬೆಲ್ಲದೊಂದಿಗೆ ತಿನ್ನಿ.
-     ತುಳಿಸಿ ರಸ 5 ಮಿ.ಲೀ. ಅಥವಾ 5 ಮಿ.ಲೀ. ಆಡುಸೋಗೆ ರಸದೊಂದಿಗೆ 5.ಮಿ.ಲೀ. ಜೇನುತುಪ್ಪ ಸೇರಿಸಿ ತೆಗೆದುಕೊಳ್ಳಿ.

ಏನು ಬೇಕು? ಬೇಡ?
ಅಕ್ಕಿ, ಬಾರ್ಲಿ, ಗೋದಿ, ಹೆಸರುಕಾಳು, ಹುರುಳಿ, ಉದ್ದು, ಬದನೆ, ಎಲೆಕೋಸು, ಬೆಳ್ಳುಳ್ಳಿ, ಒಣದ್ರಾಕ್ಷಿ, ಪಡವಲಕಾಯಿ, ಎಳೆ ಮೂಲಂಗಿ, ನೆಲ್ಲಿಕಾಯಿ, ಬಿಸಿನೀರು, ಶುಂಠಿಸಹಿತ ಹಾಲು, ಶುಂಠಿ ಸೇರಿಸಿದ ಮಜ್ಜಿಗೆ, ಉಪ್ಪು, ಕಾಳುಮೆಣಸು, ಜೀರಿಗೆ, ಕೊತ್ತಂಬರಿ ಬೀಜ, ಅರಿಶಿನ, ಬಿಸಿ ಆಹಾರವನ್ನು ಬಳಸಿದರೆ ಕೆಮ್ಮು ಬೇಗ ಶಮನವಾಗುತ್ತದೆ.
ಸಾಸಿವೆ, ಬಸಳೆ, ಸೋರೆಕಾಯಿ, ಹುಳ್ಳಿ ಹಣ್ಣು, ಬಾಳೆಹಣ್ಣು, ಕಲ್ಲಂಗಡಿ, ಸೀತಾಫಲ, ಹುಳಿ ಮಜ್ಜಿಗೆ, ಮೊಸರು, ತಂಪು ಪಾನೀಯ, ಹಾಲು ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಮೇಲೆ ಹರಿದ ಟ್ರಕ್; 23 ಕುರಿ, 2 ಮೇಕೆ ಸಾವು, ಭೀಕರ ವಿಡಿಯೋ ಸಿಸಿಟಿವಿಯಲ್ಲಿ ಸೆರೆ!

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!