ಆರೋಗ್ಯ-ಜೀವನಶೈಲಿ

ಗರ್ಭಗುಡಿ

ಮಗುವಿಗೆ ಜನ್ಮ ನೀಡುವುದೆಂದರೆ ಹೆಣ್ಣಿನ ಪಾಲಿಗೆ ಮರುಜನ್ಮ. ಒಂದು ಜೀವಕ್ಕೆ ಜೀವ ಕೊಡುವ ಕ್ಷಣ ಅದ್ಭುತ. ವಿಜ್ಞಾನ ಈ ಪ್ರಕ್ರಿಯೆಯನ್ನು ಹೇಗೆಲ್ಲ ವಿವರಿಸಿದರೂ ಅದನ್ನು...

ಮಗುವಿಗೆ ಜನ್ಮ ನೀಡುವುದೆಂದರೆ ಹೆಣ್ಣಿನ ಪಾಲಿಗೆ ಮರುಜನ್ಮ. ಒಂದು ಜೀವಕ್ಕೆ ಜೀವ ಕೊಡುವ ಕ್ಷಣ ಅದ್ಭುತ. ವಿಜ್ಞಾನ ಈ ಪ್ರಕ್ರಿಯೆಯನ್ನು ಹೇಗೆಲ್ಲ ವಿವರಿಸಿದರೂ ಅದನ್ನು ಅನುಭವಿಸಿದವರಿಗೇ ಅದರ ಗಮ್ಮತ್ತು ಗೊತ್ತಾಗೋದು.
ಮಣ್ಣಂಗಟ್ಟಿ! ತಾಯ್ತನ, ಅದ್ಭುತ ಎಲ್ಲವೂ ಬರೀ ಓಳು ಎನ್ನುವ ತಾಯಂದಿರೂ ಇದ್ದಾರೆ. ಕಾರಣ ಅವರು ಗರ್ಭಾವಸ್ಥೆಯಲ್ಲಿ ಹಾಗೂ ಪ್ರಸವದ ನಂತರ ಅನಭವಿಸುವ ಸಮಸ್ಯೆಗಳು. ಮಹಿಳೆ ಪೂರ್ವ ಬಾಧಿತ ರೋಗಗಳಿಂದ ಬಳಲುತ್ತಿದರೆ ಅದು ಒಮ್ಮೆಲೆ ಉಲ್ಬಣಗೊಂಡು ತಾಯಿ ಅಥವಾ ಮಗುವಿನ ಮೇಲೆ ಅಪಾಯನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಅಂಥ ಪರಿಸ್ಥಿತಿಯನ್ನು ಅತ್ಯಂತ ಅಪಾಯಕಾರಿ ಎಂದು ಗುರುತಿಸಲಾಗುತ್ತದೆ. ಇಂಥ ಪ್ರಕರಣಗಳಲ್ಲಿ ಧನಾತ್ಮಕ ಪರಿಣಾಮ ಬೀರಲು ನಿರಂತರ ಮೇಲ್ವಿಚಾರಣೆ ಹಾಗೂ ತಜ್ಞರ ಸಹಾಯ ಅತ್ಯಗತ್ಯ. ಅಲ್ಲದೇ ಉತ್ತಮ ಆರೈಕೆ ಕೇಂದ್ರದಲ್ಲಿ ತಾಯಿಯ ಆರೋಗ್ಯ ಹಾಗೂ ಭ್ರೂಣವನ್ನು ಎಚ್ಚರಿಕೆಯಿಂದ ಗಮನಿಸುವುದೂ ಅಗತ್ಯ.

ಅಪಾಯಕ್ಕೆ ಕಾರಣ
ರೋಗನಿರೋಧಕ ಸಮಸ್ಯೆ, ಮಧುಮೇಹ, ಕಾರ್ಡಿಯೋವುಯೋಪಥಿ (ಹೃದಯ ಸ್ನಾಯುವಿಗೆ ಸಂಬಂಧಪಟ್ಟ ಸಮಸ್ಯೆ), ಸ್ಥೂಲಕಾಯ ಅಥವಾ ಅಪಸ್ಮಾರ ಮುಂತಾದ ಕಾಯಿಲೆಗಳಿಂದ ಇಂಥ ಆಪಾಯ ಎದುರಾಗಬಹುದು. ಪ್ರಾಣಕ್ಕೆ ಎರವಾಗುವ ಪರಿಸ್ಥಿತಿ ಇದ್ದರೂ ಮಗುವನ್ನು ಹೆರುವ ನಿರ್ಧಾರವನ್ನು ಹೆಣ್ಣು ತೆಗೆದುಕೊಂಡು ಬಿಡುತ್ತಾಳೆ. ಅಂಥ ಕೆಲವು ಪೂರ್ವಬಾಧಿತ ರೋಗಗಳನ್ನು ಹೊಂದಿರುವ ಅತ್ಯಂತ ಹೆಚ್ಚಿನ ಅಪಾಯಕಾರಿ ಗರ್ಭಿಣಿಯರಿಗೂ ಯಶಸ್ವಿ ಚಿಕಿತ್ಸೆಗೊಳಪಡಿಸಬಹುದು.
ಕೊಲಾಜೆನ್ ವ್ಯಾಸ್ಕ್ಯುಲರ್ ಡಿಸೀಸ್ ಎಂಬುದು ಎಲುಬು, ಅಂಗಾಂಶ ಹಾಗೂ ಸಂಬಂಧಿಸಿದ ನಾಳಗಳನ್ನು ವ್ಯವಸ್ಥಾಪಿಸಲು ಅಗತ್ಯವಾದ ಕೊಲಾಜೆನ್ ಎನ್ನುವ ಪ್ರೊಟೀನನ್ನು ಬಾಧಿಸುವ ಸ್ವಯಂ ಪ್ರತಿರಕ್ಷಕ ಕಾಯಿಲೆಗಳಲ್ಲೊಂದು. ರ್ಹುಮಟಾಯ್ಡ್ ಅರ್ಥರೈಟಿಸ್, ಆ್ಯಂಕಿಲೊಸಿಂಗ್ ಸ್ಪಾಂಡಿಲಿಟಿಸ್, ಡರ್ಮಿಟೊಮಿಯೊಸಿಟಿಸ್ ಮುಂತಾದ ಸಮಸ್ಯೆಗಳನ್ನು ಇದು ಒಳಗೊಂಡಿರುತ್ತದೆ. ಕೆಲವು ಪ್ರಕರಣಗಳಲ್ಲಿ ಹಲವು ಅಂಗಗಳು ಒಂದಕ್ಕೊಂದು ಪೂರಕವಾಗಿ ಪಾಲ್ಗೊಳ್ಳುವುದರಿಂದ ತಾಯಿಯ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳುತ್ತದೆ. ಆಗ ರಕ್ತ ಹೆಪ್ಪುಗಟ್ಟದಿರುವ ಪರಿಸ್ಥಿತಿಯೂ ಕಾಣಿಸಿಕೊಳ್ಳಬಹುದು. ಭ್ರೂಣಕ್ಕೆ ಯಾವುದೇ ಅಪಾಯವಾಗದಂತೆ ಇಂಥ ಸಮಸ್ಯೆಗಳನ್ನು ನಿಭಾಯಿಸಬೇಕಾಗುತ್ತದೆ. ನರಕ್ಕೆ ಸಂಬಂಧಿಸಿದ ಸಮಸ್ಯೆಗಳಾದ ಅಪಸ್ಮಾರ, ಬಹುವಿಧ ಪಾರ್ಶ್ವವಾಯು ಮುಂತಾದ ರೋಗಗಳಿಂದ ಬಳಲುತ್ತಿರುವ ಮಹಿಳೆ ಗರ್ಭಿಣಿಯಾದರೆ, ಅವರು ಆ ರೋಗಗಳಿಗೆ ಔಷಧೋಪಚಾರ ಪಡೆಯುತ್ತಿರುವುದರಿಂದ ಈ ಸ್ಥಿತಿಯನ್ನು ಅತಿ ಹೆಚ್ಚಿನ ಅಪಾಯಕಾರಿ ಗರ್ಭಾವಸ್ಥೆ ಎಂದು ಪರಿಗಣಿಸಲಾಗುತ್ತದೆ.

ಹೃದಯದ ಪಿಸುಮಾತಿದು...
ಶೇ.1ರಷ್ಟು ಗರ್ಭಿಣಿಯರು ಹೃದ್ರೋಗಗಳಿಂದ ಬಳಲುತ್ತಿರುತ್ತಾರೆ. ಇಂಥವರು ಆಧುನಿಕ ವೈದ್ಯಕೀಯ ಪರಿಕರಗಳಿರುವ ಪರಿಸರದಲ್ಲಿ, ಎಚ್ಚರಿಕೆಯಿಂದ ಕೂಡಿದ ಪ್ರಸವಪೂರ್ವ, ಇಂಟ್ರಾ-ಪಾರ್ಟಮ್ ಹಾಗೂ ಪ್ರಸವ ನಂತರದ ಆರೈಕೆಗಳ ಮೂಲಕ ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಬಹುದು. ಜೀವಕ್ಕೇ ಅಪಾಯ ಒದಗುವ ಪರಿಸ್ಥಿತಿಯಿದ್ದಾಗಲೂ ಅವರಿಗಿರುವ ಸಮಸ್ಯೆ ಬಗ್ಗೆ ಉತ್ತಮ ತಿಳಿವಳಿಕೆ ಹಾಗೂ ಉತ್ತಮ ಆರೈಕೆ ಮಾಡಿದಲ್ಲಿ ಮಹಿಳೆಯರು ಮಗುವನ್ನು ಹೇರಲು ತೊಂದರೆಯಾಗದಂತೆ ವೈದ್ಯಕೀಯ ನೆರವು  ನೀಡಬಹುದು.

ಒಬೆಸಿಟಿ ಒದ್ದೋಡಿಸಿ
ಸ್ಥೂಲಕಾಯವುಳ್ಳ ಮಹಿಳೆ ಗರ್ಭಾವಸ್ಥೆಯ ಪೂರ್ವ ಅಥವಾ ನಂತರ ತೂಕ ಇಳಿಸಿಕೊಳ್ಳಬೇಕು. ಗರ್ಭ ಧರಿಸಿದ ಸಮಯದಲ್ಲಿ ಆಹಾರ ಕ್ರಮದ ಬದಲಾವಣೆಯನ್ನು ಸೂಚಿಸಲಾಗುವುದಿಲ್ಲ. ಸ್ಥೂಲಕಾಯದ ಮಹಿಳೆಯರಿಗೆ ಕರಾರುವಾಕ್ಕಾಗಿ ಸ್ಕ್ಯಾನಿಂಗ್ ಮಾಡಲೂ ತೊಂದರೆಯಾಗುತ್ತದೆ. ಗೆಸ್ಟೇಷನಲ್ ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಅತಿಗಾತ್ರದ ಮಗು ಜನಿಸುವ ಸಂಭವನೀಯತೆ, ಪ್ರಸವ ಕಾಲದಲ್ಲಿ ಅಡೆತಡೆಗಳು ಮುಂತಾದ ತೊಂದರೆಗಳು ಇಂಥ ಮಹಿಳೆಯರಲ್ಲಿ ಸಂಭವಿಸಬಹುದು.

ವಯಸ್ಸಾದ್ಮೇಲೆ ಮಗು ಬೇಡ
ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ರೋಗಗಳು ವಿವಿಧ ಹಂತಗಳಲ್ಲಿ ವಿಭಿನ್ನ ರೂಪಗಳನ್ನು ಪಡೆಯುತ್ತವೆ. ಇವು ತಾಯಿ-ಮಗು ಇಬ್ಬರಿಗೂ ಅಪಾಯ ತಂದೊಡ್ಡುತ್ತವೆ. ಗೆಸ್ಟೇಷನಲ್ ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಪ್ಲೆಸೆಂಟಾ ಪ್ರಿವಿಯಾ ಮುಂತಾದವುಗಳು ಈ ಪಟ್ಟಿಗೆ ಸೇರುತ್ತವೆ. 35 ಹಾಗೂ ಅದಕ್ಕೂ ಹೆಚ್ಚು ವಯಸ್ಸಿನ ನಂತರ ಮಹಿಳೆ ಗರ್ಭಧಾರಣೆಗೆ ಮುಂದಾದಲ್ಲಿ ಅಪಾಯಗಳು ಹೆಚ್ಚು.  
ಮಗುವಿಗೆ ರಕ್ಷಣೆ ಒದಗಿಸುವ ಕಸ (placenta) ಕಡಿಮೆಯಾಗಿ, ಭಾಗಶಃ ಅಥವಾ ಸಂಪೂರ್ಣ ತಾಯಿಯ ಗರ್ಭಕೋಶದ ಕೆಳ ತುದಿಯನ್ನು ಆವರಿಸುವುದರಿಂದ ಪ್ಲೆಸೆಂಟಾ ಪ್ರೆವಿಯಾ ಎಂಬ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಹೆರಿಗೆಯ ಪೂರ್ವದಲ್ಲಿ ಅಥವಾ ಪ್ರಸವದ ವೇಳೆ ತೀವ್ರ ರಕ್ತಸ್ರಾವಕ್ಕೆ ಕಾರಣವಾಗಬಹುದು. ಪರಿಸ್ಥಿತಿಗೆ ತಕ್ಕಂತೆ ಇದನ್ನು ನಿಭಾಯಿಸಬೇಕಾಗುತ್ತದೆ. ಸಾಮಾನ್ಯವಾಗಿ ಗರ್ಭಿಣಿ ಪ್ರಸವದ ಸಂಕೀರ್ಣತೆಗಳನ್ನು ತಪ್ಪಿಸುವ ಸಲುವಾಗಿ ಸಂಪೂರ್ಣ ಬೆಡ್‌ರೆಸ್ಟ್ ತೆಗೆದುಕೊಳ್ಳಬೇಕಾಗುತ್ತದೆ.

ಮತ್ತೆ ಮತ್ತೆ ಗರ್ಭಪಾತ
ಸುಮಾರು ಶೇ.1ರಷ್ಟು ಗರ್ಭಿಣಿಯರನ್ನು ಈ ಸಮಸ್ಯೆ ಕಾಡುತ್ತದೆ. ಮೂರು ಅಥವಾ ಅದಕ್ಕೂ ಹೆಚ್ಚು ಸಾರಿ ಗರ್ಭಪಾತವಾದರೆ ಅದನ್ನು ಪುನರಾವರ್ತಿತ ಗರ್ಭಪಾತಗಳು ಎನ್ನಬಹುದು. ಗರ್ಭಧಾರಣೆಯಾದ 12 ವಾರಗಳೊಳಗೆ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಕಾರಣಗಳಿಂದ ಗರ್ಭಪಾತವಾಗುತ್ತದೆ. ಎರಡನೇ ತ್ರೈಮಾಸಿಕ ಅವಧಿಯಲ್ಲಿ ಪೂರ್ಣಗೊಂಡ 13ರಿಂದ 23ನೇ ವಾರದ ಅವಧಿಯಲ್ಲಿ ಸಂಭವಿಸುವ ಗರ್ಭಪಾತಗಳ ಪ್ರಮಾಣ ಶೇ.2. ಅವುಗಳಲ್ಲಿ ಕೆಲವು ವಿವರಣೆಗೂ ನಿಲುಕುವುದಿಲ್ಲ. ಇನ್ನೇನು ಮಗುವನ್ನು ಹೇರಬೇಕು ಎನ್ನುವಾಗಲೂ ಗರ್ಭಪಾತವಾಗುವ ಪ್ರಕರಣಗಳೂ ಇರುತ್ತವೆ. ಇವ್ನು ಗಳಿಗೂ ಸೂಕ್ತ ಚಿಕಿತ್ಸೆ ಕೊಡಿಸಲು ಸಾಧ್ಯ.

ಹೈ ರಿಸ್ಕ್ ಪ್ರೆಗ್ನೆನ್ಸಿ ಮತ್ಯಾರನ್ನು ಕಾಡುತ್ತದೆ?
* ನಿರಂತರ ಧೂಮಪಾನ ಮಾಡುವ ಮಹಿಳೆಯರು.
* ಜನ್ಮಜಾತ ಸಮಸ್ಯೆ ಇರುವ ಹಿಂದಿನ ಮಗುವನ್ನು ಹೊಂದಿರುವ ಮಹಿಳೆಯರು.
* ಬಹುಸಂಖ್ಯೆಯ ಗರ್ಭಧಾರಣೆಗೆ ಒಳಗಾದ ಮಹಿಳೆಯರು.
* ಗರ್ಭದ ಒಳಗವಚದ ದ್ರವದ ವೈಪರೀತ್ಯಕ್ಕೆ ಒಳಗಾದ ಮಹಿಳೆಯರು.
* ಪೂರ್ವಬಾಧಿತ ರಕ್ತಹೀನತೆ, ಡಿಸ್ಕ್ರೇಷಿಯಾ, ಹಿಮೊಗ್ಲೊಬಿನೊಪಥಿ ಹಾಗೂ ರಕ್ತಕಣಗಳ ಕಾಯಿಲೆ ಇರುವವರಿಗೆ.
* ಥ್ರೊಬೆಎಂಬೋಲಿಸಂ ಹಾಗೂ ಪಾರ್ಶ್ವವಾಯುವಿನಿಂದ ಬಾಧಿತರಾದವರಿಗೆ.
* ಪಿತ್ತಕೋಶದ ತೊಂದರೆ ಹಾಗೂ ಹಿಂದಿನ ಗರ್ಭಾವಸ್ಥೆಯಲ್ಲಿ ಪಿತ್ತಕೋಶದ ಕಾಯಿಲೆಯಿಂದ ಬಾಧಿತರಾದವರು.
* ಮೂತ್ರನಾಳದ ಸೋಂಕಿಗೆ ಪದೇಪದೇ ಒಳಗಾಗುವವರಿಗೆ.
* ರೆಂಟಲ್ ಟ್ರಾನ್ಸ್‌ಪ್ಲಾಂಟೇಷನ್‌ನಿಂದ ಗರ್ಭ ಧರಿಸುವವರಿಗೆ.
* ಮಾನಸಿಕ ಕಾಯಿಲೆಯುಳ್ಳವರಿಗೆ.
* ಅವಧಿಪೂರ್ವ ಪ್ರಸವದ ಇತಿಹಾಸ ಹೊಂದಿರುವವರಿಗೆ.
(ಲೇಖಕರು: ಫೊರ್ಟೀಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು)

- ಡಾ. ಗಾಯತ್ರಿ ಕಾಮತ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್