ಆರೋಗ್ಯ-ಜೀವನಶೈಲಿ

ಕಳ್ಳನಿದ್ದಾನೆ ಎಚ್ಚರ!

ಮನುಷ್ಯ ಭೂಮಿಯಲ್ಲಿ ಜನ್ಮ ತಾಳಿದಂದಿನಿಂದಲೂ ಮಾನಸಿಕ ರೋಗವೆಂಬುದು ಇದೆ. ಆದರೆ, ಅದೊಂದು ರೋಗ ಎಂಬ ಅರಿವು ಮೂಡಿದ್ದು ತೀರಾ ಇತ್ತಿತ್ಲಗೆ.

ಮನುಷ್ಯ ಭೂಮಿಯಲ್ಲಿ ಜನ್ಮ ತಾಳಿದಂದಿನಿಂದಲೂ ಮಾನಸಿಕ ರೋಗವೆಂಬುದು ಇದೆ. ಆದರೆ, ಅದೊಂದು ರೋಗ ಎಂಬ ಅರಿವು ಮೂಡಿದ್ದು ತೀರಾ ಇತ್ತಿತ್ಲಗೆ. ಒಬ್ಬ ಮನುಷ್ಯ ತುಸು ವಿಭಿನ್ನವಾಗಿ ವರ್ತಿಸಲು ಆರಂಭಿಸಿದ ಕೂಡಲೇ ಅದು ಆತನ ಪೂರ್ವಜನ್ಮದ ಕರ್ಮವೋ ಅಥವಾ ಮಾಟ ಮಂತ್ರಗಳ ಫಲವೆಂದೇ ತಿಳಿಯಲಾಗುತ್ತಿತ್ತು. ಅದಕ್ಕೆ ತನಗೆ ತಿಳಿದಂತೆ 'ಟ್ರೀಟ್‌ಮೆಂಟ್‌' ನೀಡಲಾಗುತ್ತಿತ್ತು.
ಅಂಥ ರೋಗಗಳಲ್ಲಿ ಕ್ಲೆಪ್ಟೋಮೇನಿಯಾನೂ ಒಂದು. ಕದೀಬೇಕು ಎನ್ನುವ ತುಡಿತ ಅಥವಾ ಒತ್ತಡ ಉಂಟಾಗೋ ರೋಗವಿದು. ನಿಮಗೆ ಆ ವಸ್ತುವಿನ ಅಗತ್ಯ ಇದೆಯೋ ಇಲ್ಲವೋ ಅಥವಾ ಅದನ್ನು ಕೊಳ್ಳಲು ನಿಮಗೆ ಆಗಲ್ಲ ಅಂತನೂ ಅಲ್ಲ. ಆದರೆ, ಕದೀಬೇಕು ಅನಿಸಿಬಿಡುತ್ತೆ!
ಈ ಕಾಯಿಲೆಯಿರುವ ವ್ಯಕ್ತಿ ತನಗೆ ಅರಿವಿಲ್ಲದಂತೆಯೇ ತಮಗೆ ಬೇಕಿಲ್ಲದ, ಅವಶ್ಯವಿಲ್ಲದ ವಸ್ತುಗಳನ್ನೂ ಕದಿಯುತ್ತಾನೆ. ಕದಿಯಬೇಕೆಂಬ ತುಮುಲ ಕಳ್ಳತನ ಮಾಡಿದ ಮೇಲೆ ತಾನಾಗಿಯೇ ಕಡಿಮೆಯಾಗಿ, ಆತ ರಿಲ್ಯಾಕ್ಸ್ ಆಗುತ್ತಾನೆ. ಆದರೆ, ನಂತರ ಆತ ಎದುರಿಸಬೇಕಾದ ಸಾಮಾಜಿಕ ಸಮಸ್ಯೆಗಳು ಮಾತ್ರ ಒಂದೆರಡಲ್ಲ. ಅದೂ ಅಲ್ಲದೇ ಈ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡದೆ ಹೋದರೆ ಎದುರಿಸುವ ಅವಮಾನ, ನೋವು ಹೇಳತೀರದು.

ಕಳ್ಳರೆಲ್ಲ ಈ ರೋಗಿಗಳಲ್ಲ
ಈ ಕಾಯಿಲೆಯಿಂದ ಬಳಲುವವರು ಕದಿಯುವ ಮಾನಸಿಕ ಒತ್ತಡದೊಂದಿಗೆ ಇನ್ನು ಕೆಲವು ಮಾನಸಿಕ ಕಾಯಿಲೆಗಳನ್ನು ಹೊಂದಿರುವ ಸಾಧ್ಯತೆಗಳೂ ಇರುತ್ತವೆ. ವ್ಯಕ್ತಿತ್ವ ದೋಷ, ಆತಂಕ, ಕುಡಿತ, ಮಾದಕದ್ರವ್ಯ ವ್ಯಸನ, ಅತಿಯಾಗಿ ತಿನ್ನುವ ಹಂಬಲ ಹಾಗೂ ಆಬ್ಸೆಸ್ಸಿವ್ ಕಂಪಲ್ಸೀವ್ ಡಿಸಾರ್ಡರ್ ಸಹ ಸೇರಿರಬಹುದು.
ಹಾಗಂತ ಕಳ್ಳತನ ಮಾಡುವವರಿಗೆಲ್ಲ ಈ ಕ್ಲೆಪ್ಟೋಮೇನಿಯಾ ರೋಗವಿರುತ್ತದೆ ಎಂಬ ತೀರ್ಮಾನಕ್ಕೆ ಬರುವ ಅಗತ್ಯವಿಲ್ಲ. ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡವರು ತುಂಬಾ ಪ್ಲ್ಯಾನ್ ಮಾಡಿ, ಸಮಯ ನೋಡಿಕೊಂಡು ತಮ್ಮ ಕಾಯಕ ಮಾಡುತ್ತಾರೆ. ಕದಿಯುವ ವಸ್ತು ಬೆಲೆ ಬಾಳುವಂಥದ್ದಾಗಿದ್ದು, ಅದರಿಂದ ಅವರು ಉಪಯೋಗ ಪಡೆಯುತ್ತಾರೆ.
ಆದರೆ ಕ್ಲೆಪ್ಟೋಮೇನಿಯಾ ಇರುವವರು ಹಿಂದೆಮುಂದೆ ನೋಡದೇ ತಮಗೇನು ಕದೀಬೇಕು ಅನಿಸುತ್ತೋ ಅದನ್ನು ಕದ್ದೇಬಿಡುತ್ತಾರೆ. ಯಾರು ನೋಡ್ತಿದ್ದಾರೆ, ಕದ್ದ ವಸ್ತುಗಳನ್ನು ಹೇಗೆ ಯಾರಿಗೂ ಗೊತ್ತಾಗದ ಹಾಗೆ ಮುಚ್ಚಿಡಬೇಕು, ಅದರಿಂದ ತಮಗೇನು ಉಪಯೋಗ ಮುಂತಾದವುಗಳ ಬಗ್ಗೆ ಯಾವ ಪೂರ್ವಾಪರಗಳೂ ಇಲ್ಲದೇ ಕದಿಯಬೇಕೆಂಬ ಒತ್ತಡವನ್ನು ಕದ್ದು ಕಡಿಮೆ ಮಾಡಿಕೊಳ್ಳುತ್ತಾರೆ. ಇವರು ಕದಿಯುವಂಥ ವಸ್ತುಗಳು ಚಿನ್ನವೂ ಆಗಿರಬಹುದು ಅಥವಾ ಒಂದು ಸಣ್ಣ ಪಿನ್ ಆಗಿರಬಹುದು. ಒಟ್ಟಿನಲ್ಲಿ ಕಳ್ಳತನ ಮಾಡಿ ಸುಲಭವಾಗಿ ಸಿಕ್ಕಿ ಬೀಳುತ್ತಾರೆ.

ಖಿನ್ನತೆಯೊಂದಿಗೆ ನಂಟು
1816ರಲ್ಲಿ ಗುರುತಿಸಿದ ಈ ಕಾಯಿಲೆಗೆ ಖಿನ್ನತೆಯೊಂದಿಗೆ ಸಂಬಂಧವಿದೆ ಎಂಬುದನ್ನು 1911ರಲ್ಲಿ ಕೆಲವು ಸಂಶೋಧನೆಗಳು ದೃಢಪಡಿಸಿದವು. ಖಿನ್ನತೆಯೊಂದಿಗೆ ಕ್ಲೆಪ್ಟೋಮೇನಿಯಾ ಇರುವವರು ಕದ್ದ ನಂತರ ತುಸು ರಿಲ್ಯಾಕ್ಸ್ ಆಗೋದು ಗಮನಕ್ಕೆ ಬಂದಿದೆ. ಮಧ್ಯ ಅಥವಾ ಇಳಿ ವಯಸ್ಸಿನಲ್ಲಿ ಹೆಚ್ಚಾಗಿ ಕಂಡುಬರುವ ಈ ರೋಗ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು. ವಿಶೇಷವಾಗಿ ಮೆನೋಪಾಸ್ (ಮುಟ್ಟು ನಿಲ್ಲುವ ಹಂತ) ಸಮಯದಲ್ಲಿ ಇದು ಹೆಚ್ಚು ಕಾಡುತ್ತದೆ. ಇದಕ್ಕೆ ಮೆದುಳಿನಲ್ಲಿರುವ ಸೆರೆಟೋನಿನ್ ಹಾಗೂ ಡೋಪಾಮಿನ್ ಎಂಬ ಅಂಶಗಳಲ್ಲಿನ ತೊಂದರೆಯೂ ಕಾರಣವಾಗಬಲ್ಲದು.

ಚಿಂತೆ ಬೇಡ, ಮದ್ದಿದೆ!
ಮನಸ್ಸು ಪ್ರತಿಯೊಂದೂ ಮಾನಸಿಕ ರೋಗಗಳಿಗೂ ಮದ್ದು ಕಂಡು ಕೊಳ್ಳಬಲ್ಲದು. ಇನ್ನೊಬ್ಬರ ಸಹಾಯ ಪಡೆಯುವ ಮುಂಚೆ ತಾನು ತೆಗೆದುಕೊಳ್ಳುವ ಮನೋ ನಿರ್ಧಾರ ಅನೇಕ ಮಾನಸಿಕ ಒತ್ತಡಗಳನ್ನು ನಿವಾರಿಸಬಲ್ಲದು. ನಿಮ್ಮ ಕೈಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗದಿದ್ದರೆ, ಆ ರೀತಿಯ ತುಮುಲಗಳನ್ನು ಮುಚ್ಚಿಡುವ ಅಗತ್ಯವಿಲ್ಲ. ಅದಕ್ಕೂ ಸೂಕ್ತ ಚಿಕಿತ್ಸೆ ಇದೆ. ಸಂಜ್ಞಾತ್ಮಕ ವರ್ತನಾ ಚಿಕಿತ್ಸೆ, ಅವರ್ಷನ್ ಥೆರಪಿ, ಮನೋ ಚಿಕಿತ್ಸೆ, ಕೆಲವು ಔಷಧಿಗಳು, ಪ್ರಾಣಾಯಾಮ, ಯೋಗ ಹಾಗೂ ಆಪ್ತ ಸಲಹೆಯಿಂದಲೂ ಕದಿಯುವ ತುಡಿತವನ್ನು ಸರಿಪಡಿಸಿಕೊಳ್ಳಬಹುದು. ಸಮಸ್ಯೆ ಎಂದ ಮೇಲೆ ಪರಿಹಾರ ಇದ್ದೇ ಇರುತ್ತದೆ. ಆ ನಿಟ್ಟಿನಲ್ಲಿ ಸರಿಯಾಗಿ ಯೋಚಿಸಬೇಕಷ್ಟೇ.

-  ಸದಾನಂದ್ ರಾವ್, ಕೆ.ಸಿ
(ಮೊ. 9880441703)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!