ಆರೋಗ್ಯ-ಜೀವನಶೈಲಿ

ನಾsick

ಈಗ ತಾನೆ ಚಳಿಗಾಲ ಮುಗಿದು ಬೇಸಿಗೆ ಬರುತ್ತಿದೆ. ವೆದರ್ ಬದಲಾಗುತ್ತಿದ್ದಂತೆ ಮೂಗಲ್ಲಿ ರಕ್ತ ಸೋರೋದು ಕಾಮನ್. ಪರಿಸರ ಮಾಲಿನ್ಯ ಅಥವಾ ವಾತಾವರಣದ ಉಷ್ಣತೆ ಹೆಚ್ಚಾಗುವುದು ಇದಕ್ಕೆ ಕಾರಣ.
ಹೌದು. ಮೂಗಿನ ರಕ್ತಸ್ರಾವ ಎಂಬುವುದು ಯಾವಾಗ ಬೇಕಾದರೂ, ಯಾರಿಗೆ ಬೇಕಾದರೂ ಆಗಬಹುದು. ಇದೊಂದು ವಿಚಿತ್ರ ಕಾಯಿಲೆ. ಹೆಚ್ಚು ಹೆಚ್ಚು ರಕ್ತಸ್ರಾವವಾದರೆ ದೇಹವನ್ನು ನಿಶ್ಶಕ್ತಗೊಳಿಸಿ, ದೈಹಿಕ ಮಾನಸಿಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅನೇಕ ಸಣ್ಣ ರಕ್ತನಾಳಗಳಿಂದ ಕೂಡಿರುವ ಮೂಗಿನಲ್ಲಿ ರಕ್ತಸ್ರಾವ ಈಗೀಗ ಸಾಮಾನ್ಯ. ಶೇ.60ರಷ್ಟು ಜನರಲ್ಲಿ ಈ ಸಮಸ್ಯೆ ಕಾಣಿಸುತ್ತಿದ್ದು, ಶೇ.10 ಮಂದಿ ಮಾತ್ರ ವೈದ್ಯಕೀಯ ಪರೀಕ್ಷೆಗೊಳಪಡುತ್ತಾರೆ. ಇದು ಹೆಚ್ಚು ಶೀತ ಹಾಗೂ ಒಣ ವಾತಾವರಣ ಇದ್ದಾಗ ಸಂಭವಿಸುವುದಲ್ಲದೆ ಮಕ್ಕಳಲ್ಲಿ ಪದೇ ಪದೇ ತಲೆನೋವು ತರಿಸುತ್ತದೆ.
ಎಲ್ಲಿ, ಹೇಗೆ?
ಶೀತ ಮತ್ತು ಒಣ ಹವೆ ಇದ್ದಾಗ ಹೆಚ್ಚು, ಎತ್ತರದ ಸ್ಥಳದಲ್ಲಿದ್ದಾಗ, ಮೂಗಿನಲ್ಲಿ ಗಾಯ ಮತ್ತು ಅಲರ್ಜಿಯಿಂದ, ಪದೇ ಪದೇ ಸೀನುವುದು ಹಾಗೂ ಉಜ್ಜುವುದರಿಂದ, ಕೆಮಿಕಲ್‌ನಿಂದ ಇರಿಟೇಟ್ ಆದಾಗ, ಜಿಗಣೆ ಕಚ್ಚಿದಾಗ ಹಾಗೂ ಮೂಗಿನಲ್ಲಿ ಊತ ಉಂಟಾದಾಗ, ರಕ್ತ ಹೀನತೆಯಿಂದ, ಮೂಗು ಕಟ್ಟಿಕೊಂಡಾಗ ಅತಿಯಾಗಿ ಬಳಸುವ ಔಷಧಗಳಿಂದ, ಮೂಗಿನ ಶಸ್ತ್ರಚಿಕಿತ್ಸೆ ಮಾಡಿಸಿದಾಗ, ಮದ್ಯಪಾನ ಸೇವನೆಯಿಂದ, ಗರ್ಭಧಾರಣೆಯಾದಾಗ, ಹೆಚ್ಚು ಟೆನ್ಷನ್ ಮಾಡಿಕೊಂಡಾಗ, ನರಗಳ ದೌರ್ಬಲ್ಯದಿಂದ, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಕಡಿಮೆಯಾದಾಗ, ರಕ್ತ ತೆಳುವಾದಾಗ, ಬ್ಲಡ್ ಕ್ಯಾನ್ಸರ್ ಇದ್ದರೆ, ಎದೆ ನೋವು ಕಾಣಿಸಿಕೊಂಡಾಗ, ಹೆಚ್ಚು ಒತ್ತಡಕ್ಕೊಳಗಾದಾಗ, ದೇಹ ಹೀಟ್ ಆದಾಗ.
ಪತ್ತೆ ಹೇಗೆ?
ರಕ್ತ ಪರೀಕ್ಷೆ ಮಾಡಸಿಕೊಳ್ಳಿ. ಮೂಗಿನ ಎಂಡೋಸ್ಕೋಪ್ ಮಾಡಿಸಿ, ರಕ್ತ ಹೆಪ್ಪುಗಟ್ಟಿದಾಗ ಟೆಸ್ಟ್ ಮಾಡಿಸಿ, ಪ್ರೋಥ್ರಂಜಿನ್ ಟೆಸ್ಟ್ ಹಾಗೂ ಮೂಗಿನ ಸಿಟಿ ಸ್ಕ್ಯಾನ್ ಮಾಡಿಸಿ.
ರಕ್ತಸ್ರಾವಕ್ಕೆ ಮನೆ ಮದ್ದು
ಹೆಬ್ಬೆರಳು ಮತ್ತು ತೋರುಬೆರಳುಗಳಿಂದ ಮೃದುವಾದ ಮೂಗಿನ ಭಾಗವನ್ನು ಒತ್ತಿ ಹಿಡಿಯಿರಿ, ಮೂಗಿನ ಮೃದು ಭಾಗಕ್ಕೆ ಐಸ್ ಅಥವಾ ತಣ್ಣನೆ ಬಟ್ಟೆ ಸುತ್ತಿ, ರಕ್ತಸ್ರಾವವಾಗುವಾಗ ಬೆಲ್ಲ ಅಥವ ಸಕ್ಕರೆ ತಿನ್ನಿ, 30-40 ನಿಮಿಷ ರೆಸ್ಟ್ ತೆಗೆದುಕೊಳ್ಳಿ, ಧೂಮಪಾನ ಮದ್ಯಪಾನದಿಂದ ದೂರವಿರಿ, ಕನಿಷ್ಠ 24 ಗಂಟೆ ಯಾವುದೇ ಬಿಸಿ ತಿಂಡಿಗಳನ್ನು ತಿನ್ನಬೇಡಿ, ರಕ್ತ ತೆಳ್ಳಗಾಗುವಂಥ (ಆ್ಯಸ್ಪರಿನ್, ಐಬ್ರೂಫೀನ್, ಕ್ರೊಪಿಡೋಗ್ರೇನ್) ಮಾತ್ರೆಗಳನ್ನು ಸೇವಿಸಬೇಡಿ, ಸ್ವಲ್ಪ ಸಮಯ ಬಾಯಿ ಮೂಲಕ ಉಸಿರಾಡಿ, ರಕ್ತಸ್ರಾವವನ್ನು ತಡೆಹಿಡಿಯಲು ತೇವಾಂಶ ಇರುವ ವಾಶ್‌ಕ್ಲಾತ್ ಅಥವಾ ಟಿಶ್ಯೂ ಬಳಸಿ, ಮಲಗುವಾಗ ಎತ್ತರದ ತಲೆದಿಂಬನ್ನು ಬಳಸಿ, ಹೆಚ್ಚು ಬಿಸಿನೀರಿನ ಸ್ನಾನ ಬೇಡ, ಬಿಸಿ ಅಥವಾ ಹೆಚ್ಚು ತಣ್ಣನೆಯ, ಖಾರದ ಆಹಾರವನ್ನು ತ್ಯಜಿಸಿ.

- ವಿಜಯ್.ಆರ್. ಹೊಸನಗರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ