ಆರೋಗ್ಯ-ಜೀವನಶೈಲಿ

ಫಲಕಾರಿ

ಎಡ್ವರ್ಡ್ ಸ್ಟ್ಯಾನ್ಲಿ ಹೇಳುವಂತೆ ಯಾರು ಅರೋಗ್ಯಕರ ಆಹಾರ ಸೇವಿಸಲು ಸಮಯವಿಲ್ಲವೆಂದು ಯೋಚಿಸುತ್ತಾರೋ, ಅವರು ನಂತರ ಕಾಯಿಲೆಗಳಿಗೆ ಸಮಯ...

Those who think they have no time for healthy eating will sooner or later have to find time for illness- Edward Stanley.

ಎಡ್ವರ್ಡ್ ಸ್ಟ್ಯಾನ್ಲಿ ಹೇಳುವಂತೆ ಯಾರು ಅರೋಗ್ಯಕರ ಆಹಾರ ಸೇವಿಸಲು ಸಮಯವಿಲ್ಲವೆಂದು ಯೋಚಿಸುತ್ತಾರೋ, ಅವರು ನಂತರ ಕಾಯಿಲೆಗಳಿಗೆ ಸಮಯ ವ್ಯಯಿಸಬೇಕಾಗುತ್ತದೆ.  ನಮ್ಮ ಆರೋಗ್ಯ ಕಾಪಾಡುವಲ್ಲಿ ಹಣ್ಣಿನ ಪಾತ್ರ ಮಹತ್ವದ್ದು. ಇದು ರುಚಿಯೊಂದಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಆರೋಗ್ಯದ ದೃಷ್ಟಿಯಿಂದ ಕೆಲವೊಂದು ಪ್ರಮುಖ ಹಣ್ಣುಗಳ ಉಪಯುಕ್ತತತೆ ಬಗ್ಗೆ ಒಂದು ಝಲಕ್...

ತೂಕ ಕಳೆದುಕೊಳ್ಳಲು ಸೇಬು
ರಿಯೋ ಡಿ ಜನೈರೋ ಸ್ಟೇಟ್ ವಿಶ್ವವಿದ್ಯಾನಿಲಯದ ಸಂಶೋಧಕರು ಅತಿ ತೂಕದ ಮಹಿಳೆಯರಲ್ಲಿ ನಡೆಸಿದ ಸಂಶೋಧನೆಯಲ್ಲಿ ಕಂಡುಬಂದ ಅಂಶವೆಂದರೆ ದಿನಕ್ಕೆ ಮೂರು ಸೇಬು ತಿಂದವರು ಸೇಬು ತಿನ್ನದೆ ಪಥ್ಯಾನ್ನ ಮಾಡುತ್ತಿರುವ ಮಹಿಳೆಯರಿಗಿಂತ ಗಣನೀಯ ಪ್ರಮಾಣದಲ್ಲಿ ತೂಕ ಕಳೆದುಕೊಂಡಿದ್ದರು. ಅಲ್ಲದೆ, ಸೇಬು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಡಯಾಬಿಟಿಸ್, ಕ್ಯಾನ್ಸರ್, ಕಿಡ್ನಿ, ಕರುಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸಲು ಸೇಬು ಸಹಕರಿಸುತ್ತದೆ. ಕೊಬ್ಬಿನಂಶವನ್ನು ಕಡಿಮೆಗೊಳಿಸುವ ಹಾಗೂ ಜೀರ್ಣಶಕ್ತಿಯನ್ನು ಹೆಚ್ಚಿಸುವ ಗುಣ ಇದಕ್ಕಿದೆ. ಇದನ್ನು ಮಕ್ಕಳಿಗೆ ಬೇಯಿಸಿ ತಿನ್ನಿಸುವುದರಿಂದ ಭೇದಿ ಕಡಿಮೆಯಾಗುತ್ತದೆ.

ದ್ರಾಕ್ಷಿ ಹುಳಿ ಎನ್ನಬೇಡಿ!
ಹುಳಿತೇಗು ಮತ್ತು ಮಲಬದ್ಧತೆ ಸಮಸ್ಯೆಗಳನ್ನು ದ್ರಾಕ್ಷಿ ಹೋಗಲಾಡಿಸುತ್ತದೆ. ಒಣದ್ರಾಕ್ಷಿಯಿಂದ  ಪಿತ್ತ ವಾಸಿಯಾಗುತ್ತದೆ ಹಾಗೂ ಮೂಳೆ ಕೀಲುಗಳ ಆರೋಗ್ಯ ಸುಧಾರಿಸುತ್ತದೆ. ಚರ್ಮ ಹಾಗೂ ಕ್ಯಾನ್ಸರ್ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ದ್ರಾಕ್ಷಿ ಸಹಕರಿಸುತ್ತದೆ. ಸ್ವಾಭಾವಿಕವಾಗಿ ಕ್ಯಾನ್ಸರ್ ಕಣಗಳು ತಾವೇ ನಾಶವಾಗುವಂತೆ ಮಾಡುವ ಸಾಮರ್ಥ್ಯ ದ್ರಾಕ್ಷಿ ಬೀಜಕ್ಕಿದೆ. ಕಪ್ಪು ದ್ರಾಕ್ಷಿಯ ಬೀಜಗಳಿಗೆ ಅಧಿಕವಾಗಿರುವ ಕೊಬ್ಬಿನಂಶ ಕರಗಿಸಿ, ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸುವ ಶಕ್ತಿಯಿದೆ.

ಮಾಂಸಖಂಡಕ್ಕೆ ಬಾಳೆಹಣ್ಣು
ಬಾಳೆಹಣ್ಣನ್ನು ತಿನ್ನುವುದರಿಂದ ಮಾಂಸಖಂಡದ ಬೆಳವಣಿಗೆ ಹೆಚ್ಚುತ್ತದೆ ಹಾಗೂ ಮಲಬದ್ಧತೆ ಸಮಸ್ಯೆಯೂ ಪರಿಹಾರವಾಗುತ್ತದೆ. ಬಾಳೆದಿಂಡು ತುರಿದು ಮೊಸರಿಗೆ ಹಾಕಿ ತಿಂದರೆ ಕಿಡ್ನಿ ಕಲ್ಲುಗಳ ಸಮಸ್ಯೆಯಿಂದ ದೂರವಿರಬಹುದು ಹಾಗೂ ಬಾಳೆಹೂವನ್ನು ಬೇಯಿಸಿ ಮೊಸರು ಮತ್ತು ಉಪ್ಪು ಹಾಕಿ ತಿನ್ನುವುದರಿಂದ ಮಹಿಳೆಯರಿಗೆ ಮುಟ್ಟಿನ ಅವಧಿ ಬಳಿಕ ಉಂಟಾಗುವ ಅಧಿಕ ರಕ್ತಸ್ರಾವವನ್ನು ತಡೆಗಟ್ಟಬಹುದು.

ದಾಳಿ ನಡೆಸುವ ದಾಳಿಂಬೆ
ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಮೂತ್ರಪಿಂಡ, ಕಿಡ್ನಿ, ರಕ್ತದೊತ್ತಡ, ಹೃದಯ ಸಂಬಂಧಿ ಹಾಗೂ ಅಲ್‌ಜಿಮರ್ಸ್‌ನಂಥ ಕಾಯಿಲೆಗಳ ನಿಯಂತ್ರಣಕ್ಕೆ ದಾಳಿಂಬೆ ಸಹಕರಿಸುತ್ತದೆ. ದಾಳಿಂಬೆ ರಸಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ಕುಡಿಯುವುದರಿಂದ ತಲೆನೋವು ಮತ್ತು ಅರ್ಧ ತಲೆನೋವುಗಳನ್ನು ಕಡಿಮೆ ಮಾಡಬಹುದು. ಇಸ್ರೇಲ್ ವಿಜ್ಞಾನಿಗಳು ನಡೆಸಿದ ಸಂಶೋಧನೆ ಪ್ರಕಾರ, ದಾಳಿಂಬೆ ರಸ ಸ್ತನ ಕ್ಯಾನ್ಸರ್ ಕಣಗಳನ್ನು ನಾಶಪಡಿಸುತ್ತದಂತೆ.

ಮಾದಕ ಈ ನಿಂಬೆ
ಮಧುಮೇಹ ರೋಗಿಗಳಿಗೆ ನೇರಳೆ ಹಣ್ಣು ಉತ್ತಮ. ಇದರಿಂದ ದೇಹದ ಇನ್ಸುಲಿನ್ ಪ್ರಮಾಣ ಹೆಚ್ಚುತ್ತದೆ. ಇದರ ಬೀಜವನ್ನು ಪುಡಿಮಾಡಿ ನೀರಿನಲ್ಲಿ ಹಾಕಿ ಕುಡಿಯುವುದರಿಂದ ಡಯಾಬಿಟೀಸ್ ರೋಗಿಗಳ ರಕ್ತ ಹಾಗೂ ಮೂತ್ರದ ಸಕ್ಕರೆ ಪ್ರಮಾಣವನ್ನು ಹತೋಟಿಗೆ ತರಬಹುದು. ಇನ್‌ಸ್ಟ್ಯೂಟ್ ಆಫ್ ಹೆಲ್ತ್ ಸೈನ್ಸ್ ಬಾಲ್ಟಿಮೋರ್ ಪ್ರಕಾರ, ನಿಂಬೆ ಒಂದು ವಿಸ್ಮಯಕಾರಿ ವಸ್ತು. ಇದು ಕ್ಯಾನ್ಸರ್ ಕೋಶವನ್ನು ನಾಶಪಡಿಸುವುದರಿಂದ ಎಲ್ಲ ಕ್ಯಾನ್ಸರ್‌ಗೂ ಪರಿಹಾರ. ನಿಂಬೆಗೆ ನಮ್ಮ ದೇಹಕ್ಕೆ ರೋಗ ಬಾರದಂತೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವಿದೆ. ನಿಂಬೆರಸಕ್ಕೆ ಜೇನು, ಸೋಡಾ, ಉಪ್ಪು ಸೇರಿಸಿ ಕುಡಿದರೆ ಹೊಟ್ಟೆಯಲ್ಲಿ ಉರಿ, ನೋವು, ಪಿತ್ತ, ತಲೆ ಸುತ್ತುವಿಕೆ ಮತ್ತು ವಾಕರಿಕೆ ಕಡಿಮೆಯಾಗುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಅನ್ನ ತಿನ್ನಲು ಸೇರುವುದಿಲ್ಲವೆನ್ನುವ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ದೊಡ್ಡ ನಿಂಬೆಗಳನ್ನು ಕತ್ತರಿಸಿ ಉಪ್ಪು ಹಾಕಿ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ನೀರಿಗೆ ಹಾಕಿ ಪ್ರತಿದಿನ ಕುಡಿಯುವುದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ.  ಮಾದಕ ವಸ್ತು ಮತ್ತು ಆಲ್ಕೋಹಾಲ್‌ಗಳನ್ನು ಅತಿಯಾಗಿ ಸೇವಿಸಿದಾಗ ನಿಂಬೆರಸವನ್ನು ಮಜ್ಜಿಗೆಯಲ್ಲಿ ಬೆರೆಸಿ ಸ್ವಲ್ಪ ಉಪ್ಪು, ಅಡಿಗೆಸೋಡಾ ಬೆರೆಸಿ ಕುಡಿದರೆ ನಶೆ ಇಳಿಯುತ್ತದೆ. ಮಾಂಸಾಹಾರ ಮಾಡಿದ ನಂತರ ನಿಂಬೆ ಸೋಡಾ ಕುಡಿದರೆ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ನಿಂಬೆ ತೂಕ ಕಡಿಮೆ ಮಾಡಲು, ಶ್ವಾಸಕೋಶ ಮತ್ತು ಹೃದಯ ಸಮಸ್ಯೆಗಳಿಗೂ ಒಳ್ಳೆಯದು.

ಜೀರ್ಣಕಾರಿ ಪರಂಗಿ
ಊಟದ ನಂತರ ತಿನ್ನುವುದರಿಂದ ಆಹಾರ ಜೀರ್ಣವಾಗುತ್ತದೆ. ಕ್ಯಾನ್ಸರ್ ತಡೆಗಟ್ಟಲೂ ಇದು ಸಹಕಾರಿ.

ಸುಲಭ ಹೆರಿಗೆಗೆ ಖರ್ಜೂರ
ಅಮೆರಿಕದ ಕ್ಯಾನ್ಸರ್ ಸೊಸೈಟಿ ಪ್ರಕಾರ ದಿನಕ್ಕೊಂದು ಖರ್ಜೂರ ತಿನ್ನುವುದರಿಂದ ಜೀವನ ಪರ್ಯಂತ ನಮ್ಮ ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಬಹುದು. ಉತ್ತಮ ಕ್ಯಾಲೊರಿ ಇರುವ ಇದನ್ನು ತಿನ್ನುವುದರಿಂದ ಹೆರಿಗೆ ಸುಲಭವಾಗುತ್ತದೆ. ಬಾಣಂತಿಯರು ಸೇವಿಸುವುದರಿಂದ ಎದೆಹಾಲು ಹೆಚ್ಚುತ್ತದೆ. ಇದು ಉದರದ ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಯನ್ನೂ ನಿಯಂತ್ರಿಸುತ್ತದೆ. ಸಾಮಾನ್ಯವಾಗಿ ಬೆಡೊಯನ್ ಅರಬರು ಪ್ರತಿದಿನ ಖರ್ಜೂರವನ್ನು ತಿನ್ನುವುದನ್ನು ತಮ್ಮ ಆಹಾರ ಪದ್ಧತಿಯಲ್ಲಿ ರೂಢಿಸಿಕೊಂಡಿದ್ದಾರೆ. ಅವರಲ್ಲಿ ಕ್ಯಾನ್ಸರ್ ಮತ್ತು
ಹೃದಯದ ಕಾಯಿಲೆ ಕಡಿಮೆ.


ಸ್ಕಿನ್ ಕೇರ್‌ಗೆ ಆರೆಂಜ್
ಕಿತ್ತಲೆ ಹಣ್ಣಿನ ರಸ ಸೇವನೆ ಕಣ್ಣಿಗೆ ಒಳ್ಳೆಯದು ಹಾಗೂ ಚರ್ಮವನ್ನು ಕಾಂತಿಭರಿತವಾಗಿಸುತ್ತದೆ. ಇದನ್ನು ಪ್ರತಿದಿನ ತಿನ್ನುವುದರಿಂದ ಶೀತ ಮತ್ತು ನೆಗಡಿಯನ್ನು ಹತೋಟಿಯಲ್ಲಿಡಬಹುದು. ಈ ಹಣ್ಣಿನ ರಸಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿದರೆ
ಹೃದಯಕ್ಕೆ ಒಳ್ಳೆಯದು.

ಮೂತ್ರ ಸಮಸ್ಯೆಗೆ ಅನಾನಸ್
ಗಾಯ ವಾಸಿ ಮಾಡುವ ಸಾಮರ್ಥ್ಯವಿರುವ ಅನಾನಸ್ ಮೂತ್ರ ಸಮಸ್ಯೆ, ಮೂತ್ರಪಿಂಡದಲ್ಲಿ ಕಲ್ಲು ಮತ್ತು ಅಜೀರ್ಣ ಸಮಸ್ಯೆಯನ್ನು ತಗ್ಗಿಸುತ್ತದೆ. ಮೂಳೆಗಳನ್ನು ಬಲಪಡಿಸುತ್ತದೆ.

ಕೆಮ್ಮಿಗೆ ಕಿವಿ
ಕಿವಿ ಹಣ್ಣು ಮಕ್ಕಳನ್ನು ಅಸ್ತಮಾ, ಸೀನು ಮತ್ತು ಕೆಮ್ಮಿನ ಸಮಸ್ಯೆಯಿಂದ ದೂರವಿರಬಹುದು. ಇದಲ್ಲದೆ ದೊಡ್ಡ ಕರುಳು ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕರಿಸುತ್ತದೆ.

ಒಟ್ಟಿನಲ್ಲಿ ಲುಕ್ರಿಟಿಯಸ್ ಹೇಳುವಂತೆ 'ಮನುಷ್ಯ ಏನು ತಿನ್ನುತ್ತಾನೋ ಹಾಗಿರುತ್ತಾನೆ'. ಪ್ರತಿದಿನ ಹಣ್ಣುಗಳನ್ನು ಸೇವಿಸುವುದರಿಂದ ಮುಂದೆ ಬರಬಹುದಾದ ಕಾಯಿಲೆಗಳನ್ನು ತಡೆಗಟ್ಟಬಹುದು. ಬುದ್ಧ ಹೇಳುವಂತೆ 'ದೇಹವನ್ನು ಉತ್ತಮ ಆರೋಗ್ಯದಲ್ಲಿಡುವುದು ಒಂದು ಕರ್ತವ್ಯ. ಇಲ್ಲದಿದ್ದರೆ ನಮ್ಮ ಮನಸ್ಸನ್ನು ದೃಢವಾಗಿಯೂ ಹಾಗೂ ನಿರಾಳವಾಗಿಸಲಾಗುವುದಿಲ್ಲ'.

-  ಡಾ. ಉಮಾನಾಥ ಶೆಟ್ಟಿ ವೈ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ