ಪಾರ್ಶ್ವವಾಯುವಿನ ಚಿಹ್ನೆಗಳು ಕಾಣಿಸಿಕೊಂಡಾಗ ಮೆದುಳು ನಿಷ್ಕ್ರಿಯದತ್ತ ಸಾಗುತ್ತದೆ. ಈ ಲಕ್ಷಣಗಳು ಒಂದೇ ಹಂತದಲ್ಲಿ ಅಥವಾ ಬೇರೆ ಬೇರೆ ಸಮಯದಲ್ಲೂ ಕಾಣಿಸಿಕೊಳ್ಳಬಹುದು. ಇದರಿಂದ ಮೆದುಳಿಗೆ ಪೆಟ್ಟಾಗಿ, ದೇಹದ ಒಂದು ಭಾಗ ನಿಷ್ಕ್ರಿಯಗೊಳ್ಳಲೂಬಹುದು.
ರಕ್ತ ಹೆಪ್ಪುಗಟ್ಟುವಿಕೆಯಿಂದ ಮೆದುಳಿಗೆ ರಕ್ತ ಸಂಚಾರದ ಕೊರತೆಯಾಗಿ ಕಾಡುವುದೇ ಇಸ್ಚೆಮಿಕ್ ಸ್ಟ್ರೋಕ್ (ಫೇಷಿಯಲ್ ಸ್ಟ್ರೋಕ್). ಈ ವೇಳೆ ಯಾವುದೇ ನೋವು ಕಾಣಿಸಿಕೊಳ್ಳದೇ ಇರಬಹುದು. ಈ ರೋಗದಿಂದಲೇ ಅಮೆರಿಕದಲ್ಲಿ ಸುಮಾರು ಲಕ್ಷ ಮಂದಿ ಪ್ರತಿವರ್ಷ ಸಾವಿನ ಹಾದಿ ಹಿಡಿಯುತ್ತಿದ್ದಾರೆ.
ಮೆದುಳಿನ ನರಗಳು ತುಂಡಾಗಿ, ರಕ್ತಸ್ರಾವವಾದರೆ 'ಬ್ರೈನ್ ಹ್ಯಾಮರೇಜ್' ಎಂದು ಕರೆಯಲಾಗುತ್ತದೆ. ಹೀಗಾದರೆ, ಸಾವು ಖಚಿತ ಅಂತಲೇ ಅರ್ಥ. ಈ ಸ್ಟ್ರೋಕ್ ತನ್ನದೇ ಲಕ್ಷಣಗಳನ್ನು ಹೊಂದಿದ್ದು, ಮೆದುಳಿನಲ್ಲಿ ರಕ್ತದೊತ್ತಡವನ್ನು ಸೃಷ್ಟಿಸುತ್ತದೆ. ಬಹುತೇಕರಿಗೆ ಲಕ್ವ ಹೊಡೆಯುವ ಸೂಚನೆಗಳು ಒಂದಲ್ಲ ಒಂದು ರೀತಿಯಲ್ಲಿ ಅನುಭವಕ್ಕೆ ಬಂದಿದ್ದರೂ, ಅದು ಅಷ್ಟು ತೀಕ್ಷ್ಣವಾಗಿರುವುದಿಲ್ಲ. ತೀವ್ರತೆ ಹೆಚ್ಚಾದಾಗಲೇ ಅದರ ನೋವು ಕಾಡುತ್ತದೆ.
FAST ಆಗಿ ಯೋಚಿಸಿದಾಗ ಲಕ್ವಕ್ಕೆ FAST ಚಿಕಿತ್ಸೆಯನ್ನು ಕೊಡಿಸಬಹುದು.
ಏನಿದು FAST
- F- ಫೇಸ್- ಮುಖ ಒಂದು ಬದಿ ವಾಲಿದಂತೆ ಎನಿಸುತ್ತಿದೆಯೇ? ರೋಗಿ ಸುಲಭವಾಗಿ ನಗುವ ಮೂಲಕ ಎಲ್ಲ ಹಲ್ಲುಗಳನ್ನೂ ತೋರಿಸಲು ಸಾಧ್ಯವಾಗುತ್ತಿದೆಯೇ?
- A- ಆರ್ಮ್ಸ್- ತೋಳುಗಳು ಸಮವಾಗಿ ಬಲವಾಗಿವೆಯೇ? ರೋಗಿ ಎರಡೂ ತೋಳುಗಳನ್ನು ಮೇಲೆತ್ತಿ ಹಿಡಿದುಕೊಳ್ಳಲು ಸಮರ್ಥನಾ?
- S- ಸ್ಪೀಚ್- ಮಾತನಾಡುವಾಗ ಬಾಯಿ ತೊದಲುತ್ತಿದೆಯೇ ಅಥವಾ ಗೋಜಲು ಗೋಜಲು ಎನಿಸುತ್ತಿದೆಯೇ?
- T- ಟೈಂ- ಈ ಮೇಲಿನ ಎಲ್ಲ ಲಕ್ಷಣಗಳು ಗೋಚರಿಸಿದಲ್ಲಿ ಅಲರ್ಟ್ ಆಗಿ. ಟೈಂ ವೇಸ್ಟ್ ಮಾಡ್ಬೇಡಿ. ತಕ್ಷಣವೇ ಹತ್ತಿರದ ವೈದ್ಯರನ್ನು ಸಂಪರ್ಕಿಸಿ.
ಇಸ್ಚೆಮಿಕ್ ಲಕ್ವದ ಲಕ್ಷಣಗಳೇನು?
- ಮುಖ, ತೋಳು ಅಥವಾ ಕಾಲುಗಳು ನಿಸ್ತೇಜಗೊಳ್ಳುವುದು. ಅದರಲ್ಲೂ ವಿಶೇಷವಾಗಿ ದೇಹದ ಒಂದು ಭಾಗ ನಿಷ್ಕ್ರಿಯಗೊಳ್ಳುವುದು.
- ದೇಹವನ್ನು ಸಂಭಾಳಿಸಲು ಕಷ್ಟವಾಗಿ, ನಡೆಯುವಾಗ ದೇಹ ವಾಲಿದಂತೆ ಎನಿಸುವುದು
- ಮಂಪರು, ಮಾತನಾಡುವಾಗ ತೊದಲುವಿಕೆ.
- ಒಂದು ಅಥವಾ ಎರಡೂ ದೃಷ್ಟಿಗಳು ಮಂದವಾಗುವುದು.
- ವಸ್ತುಗಳು ಎರಡೆರಡಾಗಿ ಕಾಣಿಸುವುದು.
ಹ್ಯಾಮರೇಜ್ ಆದರೆ ಹೇಗಾಗುತ್ತೆ?
- ಇಸ್ಚೆಮಿಕ್ ಲಕ್ವದ ಬಹುತೇಕ ಲಕ್ಷಗಳೂ ಈ ಹ್ಯಾಮರೇಜ್ ಸ್ಟ್ರೋಕ್‌ನಲ್ಲಿಯೂ ಕಂಡುಬರುತ್ತದೆ. ಅಲ್ಲದೆ,
- ರಕ್ತದೊತ್ತಡ ಹೆಚ್ಚಿ, ಅಪಧಮನಿಗಳನ್ನು ಒತ್ತಿ ಕೆಲಸ ಮಾಡುತ್ತದೆ.
- ಮೆದುಳು ಅತಿಸೂಕ್ಷ್ಮ ಅಂಗವಾದ್ದರಿಂದ ರಕ್ತಸ್ರಾವ ತಕ್ಷಣವೇ ಕಾಣಿಸಿಕೊಳ್ಳುತ್ತದೆ. ಮೆದುಳು ಊದಿಕೊಳ್ಳುತ್ತದೆ.
- ರಕ್ತಸ್ರಾವದಿಂದ ಹರಿದ ರಕ್ತ ಬುರುಡೆಯ ಇತರೆ ಅಂಗಾಂಶಗಳಿಗೂ ಸೇರುತ್ತದೆ. ಇದರಿಂದ ವಿಪರೀತ ಎನಿಸುವಷ್ಟು ಯಾವುದೇ ಮುನ್ಸೂಚನೆ ಇಲ್ಲದೆ ತಲೆನೋವು ಕಾಡಬಹುದು.
- ಕುತ್ತಿಗೆ ಬಿಗಿಯಾಗುವುದು, ಮುಖದಲ್ಲಿ ಸೆಳೆತ, ಕಣ್ಣುಗಳ ನಡುವೆ ನೋವು.
- ವಾಂತಿ ಹಾಗೂ ಪ್ರಜ್ಞೆ ತಪ್ಪುವುದು.
- ಅಲ್ಲದೆ ನಿಶ್ಯಕ್ತಿ, ಸಂವೇದನಾ ಶೂನ್ಯತೆ, ಜಡತ್ವ, ತಲೆ ಸುತ್ತುವುದು, ಮುಖ ಕಳೆಗುಂದುವಿಕೆ, ಉಗುಳು ನುಂಗಲು ಕಷ್ಟವಾಗುವುದು ಗಮನಕ್ಕೆ ಬಂದಲ್ಲಿ ವೈದ್ಯರಲ್ಲಿಗೆ ಹೋಗಿಬಿಡಿ.
ತುರ್ತಾಗಿರಲಿ ಚಿಕಿತ್ಸೆ
- ಮಂಜುನಾಥ್ ಎಲ್.ಕೆ. ಲಕ್ಷ್ಮೀಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics