ಆರೋಗ್ಯ-ಜೀವನಶೈಲಿ

ನೆಗಡಿಗೆ ಮನೆ ಮದ್ದು

ಈ ಹಾಳಾದ್ದು ಶೀತ, ಮೂಗನ್ನೇ ಕಟ್ ಮಾಡಿ ಎಸೆಯಬೇಕು ಎನಿಸುವಂತೆ ಮಾಡುತ್ತಿದೆಯೇ? ಇನ್ನಂತೂ ಮಳೆಗಾಲ. ಈ ಸಮಸ್ಯೆ ಎಲ್ಲರನ್ನೂ ಕಾಡುವುದು ಸಹಜ. ಜೊತೆಗೆ ಗಂಟಲು ಕೆರೆತ, ನೋವು, ಕಣ್ಣುರಿ ನಿಮ್ಮನ್ನು ಬಾಧಿಸುತ್ತಿದೆಯೇ? ತಲೆ ಕೆಡಿಸಿಕೊಳ್ಳಬೇಡಿ. ಇಲ್ಲಿದೆ ಮನೆ ಔಷಧಿ...

  • ಅರ್ಧ ಲೋಟ ನೀರು, ಅರ್ಧ ಲೋಟ ಹಾಲಿಗೆ ಒಂದು ಬೆಳ್ಳುಳ್ಳಿ ಎಸಳು, ಒಂದು ಲವಂಗ, ಎರಡು ಚಿಟಕಿ ಅರಿಶಿಣ, ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ, 2-3 ನಿಮಿಷ ಕುದಿಸಿ. ಶೋಧಿಸಿ. ಬಿಸಿ ಕಷಾಯ ಕುಡಿದು ಬಿಡಿ. ದಿನಕ್ಕೆ 2 ರಿಂದ 4 ಬಾರಿ ಸೇವಿಸಿದರೆ ಶೀತದಿಂದ ಬೇಗ ಮುಕ್ತರಾಗುವಿರಿ.
  • ಸಿಪ್ಪೆ ತೆಗೆದ ಅರ್ಧ ಅಂಗುಲ ಹಸಿ ಶುಂಠಿಯನ್ನು ಜಜ್ಜಿದ ರಸ, ಓಮದ ಕಾಳು ಮತ್ತು ಬೆಲ್ಲವನ್ನು ಬೆರೆಸಿ, ಒಟ್ಟಾಗಿ ಕುದಿಸಿದ ಕಷಾಯವನ್ನು ದಿನಕ್ಕೆರಡು ಬಾರಿಯಂತೆ ನಾಲ್ಕು ದಿನಗಳ ಕಾಲ ಕುಡಿಯಿರಿ.
  • ತಲಾ 5 ಗ್ರಾಂ ಧನಿಯಾ, ಜೀರಿಗೆ, ಶುಂಠಿ, ಹಿಪ್ಪಲಿ, ಕಾಳುಮೆಣಸುಗಳನ್ನು ಪುಡಿಮಾಡಿ ಅರಿಶಿಣ 2 ಚಮಚ, ತುಳಸಿ ಎಲೆಗಳನ್ನು ಸೇರಿಸಿ ಒಂದು ಲೋಟ ನೀರಿನೊಂದಿಗೆ ಕುದಿಸಿ ಶೋಧಿಸಿ. ರುಚಿಗೆ ತಕ್ಕಷ್ಟು ಬೆಲ್ಲ ಹಾಗೂ ಹಾಲನ್ನು ಸೇವಿಸಿ. ಈ ಕಷಾಯವನ್ನು ದಿನಕ್ಕೆರಡು ಬಾರಿ ಊಟಕ್ಕಿಂತ ಮುಂಚೆ, ಅರ್ಧ ಲೋಟ ಸೇವಿಸಿ.
  • ಬಿಸಿ ನೀರಿನಲ್ಲಿ ನೀಲಗಿರಿ ಎಣ್ಣೆ ಹಾಕಿ ಹಬೆಯನ್ನು ಸೇವಿಸಿದರೆ ಮೂಗು ಕಟ್ಟುವುದು ನಿವಾರಣೆಯಾಗುತ್ತದೆ.
  • ಒಣಶುಂಠಿ ಬಿಲ್ಲೆಯನ್ನು ನೀರಿನೊಂದಿಗೆ ಸಾಣೆಕಲ್ಲಿನಲ್ಲಿ ತೇಯ್ದ ಲೇಪವನ್ನು ಹಣೆ ಮೇಲೆ, ಬದಿಗೆ ಸವರಿ ನಿದ್ರಿಸಿದರೆ ಶೀತದಿಂದ ಕಾಡುವ ತಲೆನೋವು, ತಲೆಭಾರ ಕಡಿಮೆಯಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video