ಆರೋಗ್ಯ-ಜೀವನಶೈಲಿ

ಆಡಿ ಆಡಿ ಬೆಳೆಸಿ ಆರೋಗ್ಯ

ಬಿಡುವಿಲ್ಲದ ಕೆಲಸದಲ್ಲಿ ಕೆಲವೊಮ್ಮೆ ನಮ್ಮ ಪರ್ಸನಲ್ ಕೆಲಸಗಳನ್ನೂ ಮರೆತು ಬಿಡುತ್ತೇವೆ. ಇದಕ್ಕೆ ಆರೋಗ್ಯವೂ ಹೊರತಾಗಿಲ್ಲ. ಎಸಿ ಕಚೇರಿಯಲ್ಲಿ ಕೆಲಸ....

ಬಿಡುವಿಲ್ಲದ ಕೆಲಸದಲ್ಲಿ ಕೆಲವೊಮ್ಮೆ ನಮ್ಮ ಪರ್ಸನಲ್ ಕೆಲಸಗಳನ್ನೂ ಮರೆತು ಬಿಡುತ್ತೇವೆ. ಇದಕ್ಕೆ ಆರೋಗ್ಯವೂ ಹೊರತಾಗಿಲ್ಲ. ಎಸಿ ಕಚೇರಿಯಲ್ಲಿ ಕೆಲಸ. ಕುಳಿತಲ್ಲೇ ಕಾರ್ಯನಿರ್ವಹಣೆ ಮಾಡಬೇಕಾಗಿರುವುದರಿಂದ ನಾವು ಓಡಾಡುವುದಕ್ಕೂ ಸೋಮಾರಿತನ ತೋರಿಸುತ್ತಿರುತ್ತೇವೆ. ಆದರೆ ಇದೇ ಆರೋಗ್ಯ ಸಮಸ್ಯೆಗೆ ಮೂಲ ಕಾರಣವಾಗುತ್ತದೆ.
ಹೀಗೆ ಕುಳಿತು ಕೆಲಸ ಮಾಡುವುದರಿಂದ ಕೇವಲ ದೈಹಿಕ ಮಾತ್ರವಲ್ಲ, ಮಾನಸಿಕ ಫಿಟ್ನೆಸ್ ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರ. ಬಹಳ ಹೊತ್ತು ಕುಳಿತೇ ಇರುವುದರಿಂದ ಬೊಜ್ಜು ಬೆಳೆಯುತ್ತದೆ. ಅನವಶ್ಯಕ ತೂಕ ಹೆಚ್ಚಾಗುತ್ತದೆ. ಸಣ್ಣಗೆ ಬೆನ್ನು, ಸೊಂಟ, ತಲೆ ನೋವು ಶುರುವಾಗುತ್ತದೆ. ಹೀಗಾಗಿ ಇವುಗಳ ನಿವಾರಣೆಗೆ ಇಂದು ನಗರ ಪ್ರದೇಶಗಳ ಜನ ಜಿಮ್, ಮೆಡಿಟೇಶನ್ ಕ್ಲಾಸ್, ಯೋಗ ಮುಂತಾದವುಗಳ ಮೊರೆ ಹೋಗುತ್ತಾರೆ. ದುಡ್ಡು ಕೊಟ್ಟು ಹೊಟ್ಟೆ ಕರಗಿಸಲು ಹೋಗುತ್ತಾರೆ. ಆದರೆ, ಇಷ್ಟೆಲ್ಲ ಮಾಡುವುದಕ್ಕಿಂತ ಸುಮ್ಮನೆ ಆಟವಾಡಿ! ಕ್ರೀಡೆಯೇ ಇದಕ್ಕೆಲ್ಲ ಮದ್ದು. ನೀವು ಎಷ್ಟು ಕ್ರಿಯಾಶೀಲರಾಗಿರುತ್ತೀರೋ ಅಷ್ಟು ದಿನ ರೋಗಗಳು ನಿಮ್ಮತ್ತ ಸುಳಿಯುವುದಿಲ್ಲ. ಹಾಗಂತ ಎಲ್ಲ ಆಟವೂ ಫಿಟ್ನೆಸ್ ಹಾಗೂ ಆರೋಗ್ಯ ತಂದುಕೊಡುತ್ತದೆ ಎಂದಲ್ಲ. ಕೆಲವಷ್ಟು ಮೈ ಕರಗಿಸುವುದಲ್ಲದೇ ಬಾಡಿ ಫಿಟ್ನೆಸ್‌ಗೆ ಸಹಾಯಕವಾಗುತ್ತದೆ.

ಷಟಲ್
ಷಟಲ್ ಬ್ಯಾಡ್ಮಿಂಟನ್ ಫಿಟ್ನೆಸ್‌ಗೆ ಹೇಳಿ ಮಾಡಿಸಿದ ಆಟ. ಇದರಲ್ಲಿ ಇಬ್ಬರೇ ಆಡಲಿ ಅಥವಾ ನಾಲ್ಕು ಜನ ಆಡಲಿ ಬೆವರು ಹರಿಯುವುದಂತೂ ನಿಶ್ಚಿತ. ಏಕೆಂದರೆ ನೀವಿದ್ದಲ್ಲಿಗೆ ಕಾಕ್ ಬರುವುದಿಲ್ಲ. ಕಾಕ್ ಬಂದಲ್ಲಿಗೆ ನೀವು ಓಡಬೇಕು. ಹೀಗಾಗಿ ರಕ್ತ ಸಂಚಲನೆ ವೇಗವಾಗಿ ಆಗುತ್ತದೆ. ಕಾಲ ಸ್ನಾಯುಗಳೂ ಫಿಟ್ ಆಗಿರುತ್ತದೆ. ಹೊಟ್ಟೆಯೂ ಕರಗುತ್ತದೆ. ನಿಮ್ಮನ್ನು ಅಷ್ಟೇ ಕ್ರಿಯಾಶೀಲರನ್ನಾಗಿಸುತ್ತದೆ. ಆಫೀಸ್‌ನಲ್ಲಿ ಕೆಲಸ ಮಾಡಲೂ ಅಷ್ಟೇ ಫ್ರೆಷ್ ಆಗಿರುತ್ತೀರಿ. ಆರೋಗ್ಯದಿಂದಿರಲು ಮತ್ತಿನ್ನೇನು ಬೇಕು?

ಫುಟ್ಬಾಲ್
ಫುಟ್ಬಾಲ್ ಆಟಕ್ಕೆ ಎರಡೂ ಕಡೆಯ ಟೀಂ ಮೆಂಬರ್ಸ್ ಸೇರಿದರೆ 32 ಮಂದಿ ಆಗುತ್ತಾರೆ. ಆದರೆ ಇಲ್ಲಿ ನೀವು 32 ಮಂದಿ ಸೇರಿಯೇ ಇದನ್ನು ಆಡಬೇಕಿಂದಿಲ್ಲ. 10 ಜನವಿದ್ದರೂ ಸಾಕು. ಒಂದೇ ಕಡೆ ಗೋಲ್ ರೆಡಿ ಮಾಡಿ ಆಟ ಶುರು ಮಾಡಬಹುದು. ಸಮಾನ ಮನಸ್ಕರು ಒಂದೇ ಪ್ರದೇಶದಲ್ಲಿದ್ದರೆ ಅಥವಾ ಒಂದೆಡೆ ಸೇರಿ ಆಡುವುದಿದ್ದರೆ ಫುಟ್ಬಾಲ್ ಅನ್ನು ಸಹ ಆರಿಸಿಕೊಳ್ಳಬಹುದು. ಇದಕ್ಕೆ ಮಾತ್ರ ಚಂಡಿನ ಹಿಂದೆ ನೀವು ಓಡುತ್ತಿರಲೇಬೇಕು.

ಸ್ಕಿಪ್ಪಿಂಗ್
ಇನ್ನು ಮನೆಯಲ್ಲೇ ಆಡ ಬಯಸುವವರಿಗೆ ಸ್ಕಿಪ್ಪಿಂಗ್ ಉತ್ತಮ ಸಾಧನ. ಪ್ರತಿದಿನ 100 ಅಥವಾ ಅದಕ್ಕಿಂತಲೂ ಹೆಚ್ಚು ಬಾರಿ ಸ್ಕಿಪ್ ಮಾಡಿದರೆ ಸಾಕು. ನಿಮ್ಮ ದೇಹದ ಸಾಕಷ್ಟು ಕ್ಯಾಲೋರಿಗಳು ಕಡಿಮೆಯಾಗುತ್ತದೆ. ನಿಮ್ಮ ತೂಕ ಇಳಿಸಿಕೊಳ್ಳುವುದರ ಜತೆಗೆ ಕಾಲ ಸ್ನಾಯುಗಳನ್ನು ಬಲಗೊಳಿಸಿಕೊಳ್ಳಬಹುದು.

ಸ್ವಿಮ್ಮಿಂಗ್

ಇದೂ ಮೈ ಮನ ಗಟ್ಟಿಗೊಳಿಸಲು ಉತ್ತಮ ಮಾರ್ಗ. ಪ್ರತಿದಿನ ಈಜಾಡುವುದರಿಂದ ಸ್ಲಿಮ್ ಆಗುವುದು, ಎತ್ತರವಾಗಬಹುದು, ದೈಹಿಕ ಸದೃಢತೆ, ಬಾಹುಗಳ ಬಲಗೊಳ್ಳುವಿಕೆಯ ಜತೆಗೆ ಮಾನಸಿಕ ಪ್ರಫುಲ್ಲತೆ ಲಭಿಸುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ.

ಕ್ರಿಕೆಟ್
ಕ್ರಿಕೆಟ್ ಅನ್ನು ಸೋಮಾರಿಗಳ ಆಟ ಎಂದೆಲ್ಲಾ ಕರೆಯುತ್ತಾರೆ. ಆದರೆ ಇಲ್ಲೂ ದೇಹವನ್ನು ಫಿಟ್ ಆಗಿಟ್ಟುಕೊಳ್ಳಬಹುದು. ಆದರೆ ಆಟದಲ್ಲಿ ನೀವು ಕ್ರಿಯಾಶೀಲರಾಗಿರಬೇಕು. ಆಟ ದಲ್ಲಿ ಇನ್‌ವಾಲ್ಮೆಂಟ್ ಇದ್ರೆ ಅಲ್ಲೂ ಕ್ರಿಯಾಶೀಲರಾಗಿರಬಹುದು. ದೇಹ ದಂಡಿಸಬಹುದು.

ವಾಲಿಬಾಲ್
ಇಲ್ಲಿ ತಲಾ 7 ಆಟಗಾರರು ಬೇಕೆಂಬುದು ನಿಯಮ. ಆದರೆ ಮಜಕ್ಕೆ ಆಡುವಾಗ ಇಷ್ಟು ಜನ ಇರಬೇಕೇಂದೇನೂ ಇಲ್ಲ. ಇಲ್ಲಿ ಮುಖ್ಯವಾಗಿ ನಿಮಗೆ ಬೇಕಾಗಿದ್ದು ಮನೋರಂಜನೆ. ಅಷ್ಟು ಸಿಕ್ಕರೆ ಸಾಕು. ಈ ಆಟ ಆಡುವುದರಿಂದ ವ್ಯಾಯಾಮವೂ ಆದಂತಾಗುತ್ತದೆ. ಇದೂ ನಿಮ್ಮನ್ನು ಆ್ಯಕ್ಟೀವ್‌ರನ್ನಾಗಿಸುತ್ತದೆ. ಮೇಲಾಗಿ ಮೈಂಡ್ ಗೇಮ್ ಕೂಡಾ ಹೌದು.

ಟೆನ್ನಿಸ್
ಇಲ್ಲೂ ಇಬ್ಬರು ಅಥವಾ ನಾಲ್ಕೇ ಜನ ಆಡುವುದರಿಂದ ಟೆನ್ನಿಸ್ ಕೋರ್ಟ್ ತುಂಬಾ ನೀವೇ ತುಂಬಿರುತ್ತೀರಿ. ಎಲ್ಲೆಡೆ ಓಡಬೇಕಾಗಿ ಬರುವುದರಿಂದ ಸಾಕಷ್ಟು ವ್ಯಾಯಾಮವಾಗುತ್ತದೆ. ಮೈ ಬೆವರುತ್ತದೆ, ಹೊಟ್ಟೆ ಇಳಿಯುತ್ತದೆ. ಆಟವಾಡಿ ಹೊರಬಂದ ಮೇಲೆ ದೇಹ ಹಗುರವಾದ ಫೀಲ್ ಆಗುತ್ತದೆ.

ಸಾಕು ಇನ್ನೇನು ಬೇಕು. ಬನ್ನಿ ಆಟ ಆಡಿ....

- ಆದರ್ಶ ಎಸ್. ಅಂಚೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ