ಆರೋಗ್ಯ-ಜೀವನಶೈಲಿ

ಖರ್ರ್ ಖರ್ರ್ ಕರ್ಕೆರೆ

ಗೊರಕೆ ಹೊಡೆಯುವವರಿಗಿಂತಲೂ, ಪಕ್ಕದಲ್ಲಿರುವವರು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ. ಮಹಿಳೆಯರಿಗಿಂತ ಪುರುಷರೇ ಹೆಚ್ಚು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ....

ಗೊರಕೆ ಹೊಡೆಯುವವರಿಗಿಂತಲೂ, ಪಕ್ಕದಲ್ಲಿರುವವರು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ. ಮಹಿಳೆಯರಿಗಿಂತ ಪುರುಷರೇ ಹೆಚ್ಚು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಯಸ್ಸಾದವರಲ್ಲಿ ಇದು ತುಸು ಹೆಚ್ಚು. ಮೇಲ್ಮುಖವಾಗಿ ಮಲಗಿಕೊಳ್ಳುವ ಅಭ್ಯಾಸ ಇರುವವರು ಹೆಚ್ಚು ಗೊರಕೆ ಹೊಡೆದರೆ, ಮಗ್ಗುಲಾಗಿ ಮಲಗುವವರಿಗೆ ಈ ಸಮಸ್ಯೆ ಅಷ್ಟಾಗಿ ಇರೋಲ್ಲ.
ಮೇಲ್ಮುಖ ಮಾಡಿಕೊಂಡು ಮಲಗಿದಾಗ ವ್ಯಕ್ತಿಯ ಬಾಯೊಳಗೆ ಕುತ್ತಿಗೆ ಭಾಗದ ಚರ್ಮ ಜೋತು ಬೀಳುತ್ತದೆ. ಹೀಗೆ ಜೋತು ಬಿದ್ದ ಚರ್ಮದ ಮೂಲಕ ಉಸಿರು ಒತ್ತಡದಿಂದ ಹೊರಬೀಳುವಾಗ ಕಂಪನ ಆರಂಭವಾಗುತ್ತದೆ. ಆಗ ವ್ಯಕ್ತಿಯ ಬಾಯಿಂದ ಗರ್ರ್...ಗರ್ರ್... ಅಥವಾ ಖರ್ರ್...ಖರ್ರ್... ಎಂಬ ಶಬ್ದ ಕೇಳಿ ಬರುತ್ತದೆ. ಇದನ್ನೇ ಗೊರಕೆ ಎನ್ನುವುದು.  ಯಾವ ವ್ಯಕ್ತಿ ಒಂದೇ ಮುದ್ರೆಯಲ್ಲಿ ಬಹಳ ಹೊತ್ತಿನ ತನಕ ಮಲಗುವ ಅಭ್ಯಾಸ ಬೆಳೆಸಿಕೊಂಡಿರುತ್ತಾನೋ ಅವನು ಜೋರಾಗಿ ಗೊರಕೆ ಹೊಡೆಯುತ್ತಾನೆ. ಆಗಾಗ ಮಗ್ಗಲು ಬದಲಿಸುತ್ತಿದ್ದರೆ ಗೊರಕೆಯ ತೀವ್ರತೆಗೆ ಭಂಗ ಉಂಟಾಗುತ್ತದೆ.

ಹೃದಯ ವೀಕ್ ಆಗಬಹುದು!
ಗೊರಕೆ ಹೊಡೆಯುವವರಿಗೆ ಸಾಮಾನ್ಯವಾಗಿ ಹೃದ್ರೋಗದಿಂದ ಸಾವು ಬರಬಹುದು. ಗೊರಕೆ ಹೊಡೆಯುವವರ ಪಕ್ಕದಲ್ಲಿ ಮಲಗುವವರು ತಮ್ಮ ಜೀವಿತಾವಧಿಯ ಎರಡು ವರ್ಷಗಳಷ್ಟು ಕಡಿಮೆ ನಿದ್ದೆ ಮಾಡಬೇಕಾಗುತ್ತದೆ. ದಂಪತಿಯಲ್ಲಿ ಒಬ್ಬರಿಗೆ ಗೊರಕೆ ಹೊಡೆಯುವ ಅಭ್ಯಾಸವಿದ್ದರೂ ಸಾಕು ಅಂಥವರ ಸೆಕ್ಸ್ ಜೀವನ ಸುಲಲಿತವಾಗಿರಲಾರದು. ಗೊರಕೆ ಹೊಡೆಯುವವನು ಬೊಜ್ಜಿನ ಕಾಯಿಲೆಯಿಂದ ಬಳಲುವ ಸಾಧ್ಯತೆಯೂ ಜಾಸ್ತಿ. ಇವರ ಬಿಪಿಯೂ ಏರುವ ಸಾಧ್ಯತೆ ಇರುತ್ತದೆ. ಗೊರಕೆ ಹೊಡೆಯುವರ ಶ್ವಾಸಕೋಶಗಳಲ್ಲಿ ಗಾಳಿಯ ಬಲವಾದ ಒತ್ತಡದಿಂದ ನಾನಾ ತೊಂದರೆಗಳು ಕಾಣಿಸಿಕೊಳ್ಳಬಹುದು.

ಭಯಬೇಡ, ಚಿಕಿತ್ಸೆ ಇದೆ
ಪಿಜಿಐ ಚಂಡೀಗಢ 'ಸ್ನೋಲೋಪ್ಲಾಸ್ಟಿ' ಎಂಬ ಚಿಕಿತ್ಸಾ ಪದ್ಧತಿಯನ್ನು ಅಭಿವೃದ್ಧಿಗೊಳಿಸಿದೆ. ಇದರಿಂದ ದುರ್ಬಲ ವ್ಯಕ್ತಿಗಳ ಗೊರಕೆ ಕ್ರಿಯೆಯಲ್ಲಿ ಪರಿಹಾರ ಸಿಕ್ಕಿದೆ. ಈ ಪದ್ಧತಿಯಲ್ಲಿ ರೋಗಿಯ ಬಾಯಿಯ ಅಂಗಳದಲ್ಲಿ 'ಸೋಡಿಯಂ ಟೆಟ್ರಾ ಸಲ್ಫೇಟ್‌'ನ ಇಂಜೆಕ್ಷನ್ ಹಾಕಲಾಗುತ್ತದೆ. ಆಗ ದೊಡ್ಡದಾದ ಟಿಶ್ಯೂಗಳು ಮುದುಡಿಕೊಳ್ಳುತ್ತವೆ. ಶ್ವಾಸ ತೆಗೆದುಕೊಳ್ಳುವಾಗ ಉಂಟಾಗುವ ತಡೆಗೆ ವಿರಾಮ ಸಿಕ್ಕಿದಂತಾಗುತ್ತದೆ. ಇದು ಬಹಳ
ಅಗ್ಗವಾಗಿದ್ದು, ಈ ಚಿಕಿತ್ಸೆಗೆ ಕೇವಲ 250-300 ಮಾತ್ರ ತಗಲುತ್ತದೆ. ಇದು ಪಿಜಿಐ ಆಸ್ಪತ್ರೆಯ ಇಎನ್‌ಟಿ ವಿಭಾಗದ ವೈದ್ಯರಾದ ಡಾ. ಜಯಮೇಟಿ ಬಕ್ಸಿ ಮತ್ತು ಡಾ. ಅಶೋಕ್ ಕುಮಾರ್ ಗುಪ್ತಾರ ಶೋಧನೆಯ ಫಲ.

ಗೊರಕೆಗೆ ಕಾರಣಗಳೇನು?
-    ಮೂಗಿನಲ್ಲಿ ತಡೆಯುಂಟಾಗುವಿಕೆ.
-    ಬಾಯಿಯೊಳಗೆ, ಕಿವಿಯೊಳಗೆ, ಗಂಟಲೊಳಗೆ ಟಿಶ್ಯೂ ಬೆಳೆಯುವುದು.
-    ಬಾಯಿಂದ ಉಸಿರು ತೆಗೆದುಕೊಳ್ಳುವ ಅಭ್ಯಾಸ.
-    ಶ್ವಾಸ ಮಾರ್ಗದಲ್ಲಿ ಉಂಟಾಗುವ ಅಡಚಣೆ.
-    ಏರುತ್ತಿರುವ ವಯಸ್ಸು. ತೂಕ ಹೆಚ್ಚಾಗುವುದು.

- ಎಂ.ಬಿ. ನಾಯಕ, ಹಾಸನ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!