ಯಾವುದೇ ದುಷ್ಪರಿಣಾಮ ಇಲ್ಲದೆ, ಹೆಚ್ಚಿನ ಖರ್ಚಿಲ್ಲದೆ ರೋಗಗಳಿಂದ ಗುಣಮುಖರಾನ್ನಾಗಿಸುವ ಚಿಕಿತ್ಸೆಯೂ ಒಂದಿದೆ. ಅದುವೇ 'ಸಂಗೀತ ಚಿಕಿತ್ಸೆ'!
ಸಂಗೀತ ಚಿಕಿತ್ಸೆ ಎಂದರೆ ಸುಮ್ಮನೆ ಸಂಗೀತ ಕೇಳಿಸಿಕೊಳ್ಳುವುದಲ್ಲ. ಸಮಯಕ್ಕೆ ತಕ್ಕಂತೆ ಬೇಸರ, ನೋವು, ಭಯ, ಖುಷಿ ಹೀಗೆ ನವರಸಗಳನ್ನು ನಿಯಂತ್ರಿಸಲು ಸಂಗೀತದ ರಾಗಗಳು ಪ್ರಮುಖ ಪಾತ್ರ ವಹಿಸುವ ಜತೆಗೆ ಸಂಗೀತದಿಂದ ಮನಸ್ಸು ಪ್ರಫುಲ್ಲಗೊಂಡು ಬೌದ್ಧಿಕ ವಿಕಸನವಾಗುತ್ತದೆ.
ಧ್ಯಾನವೂ ಹೌದು
ಭಾವನಾತ್ಮಕ, ದೈಹಿಕ ಹಾಗೂ ಮಾನಸಿಕ ಮತ್ತು ಸಾಮಾಜಿಕವಾಗಿ ರೋಗಿಯ ಮನಸ್ಸಿನ ಮೇಲಾಗುವ ದುಷ್ಪರಿಣಾಮಗಳನ್ನು ನಿವಾರಿಸಲು ಬಳಸುವ ಒಂದು ವಿಶೇಷ ಚಿಕಿತ್ಸಾ ಪದ್ಧತಿ ಇದು. ರೋಗಿಗಳಿಗೆ ಔಷಧಿ, ಮಾತ್ರೆಗಳ ಬದಲು ಮನಸಿಗೆ ಹಿತನೀಡುವ ಸಂಗೀತ, ಭಜನೆ, ಶ್ಲೋಕ, ವಾದ್ಯ ಸೇರಿದಂತೆ ಭಾವ, ಭಕ್ತಿ, ಸಿನೆಮಾ, ದೇವರನಾಮ ಮತ್ತಿತರ ಸಂಗೀತ ಪ್ರಕಾರಗಳನ್ನು ಕೇಳಿಸುವ ಮೂಲಕ ರೋಗ ವಾಸಿ ಮಾಡುವ ವಿಧಾನವಿದು.
ಇತ್ತೀಚೆಗೆ ಭಾರತೀಯ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಂಗೀತ ಚಿಕಿತ್ಸೆ ಹೆಚ್ಚು ಜನಪ್ರಿಯವಾಗುತ್ತಿದ್ದು ಸಂಗೀತ ಚಿಕಿತ್ಸೆಗಾಗಿ ವಿಶೇಷ ಪಠ್ಯಕ್ರಮವನ್ನೇ ರೂಪಿಸಲಾಗಿದೆ. ಒಂದು ರಾಗವನ್ನು ಪದೇಪದೇ ಕೇಳುವುದರಿಂದ ನಿರ್ದಿಷ್ಟವಾದ ತರಂಗಗಳು ಉತ್ಪತ್ತಿಗೊಂಡು ಕುಗ್ಗಿದ ಸ್ನಾಯು, ನರಗಳಿಗೆ ವಿಶೇಷ ಸಂವೇದನೆ ನೀಡಿ ಹೆಚ್ಚಿನ ರಕ್ತ ಪರಿಚಲನೆ ಮತ್ತು ಶಕ್ತಿ ಉಂಟುಮಾಡುತ್ತದೆ. ಇದರಿಂದ ರೋಗಿ ಗುಣಮುಖನಾಗುತ್ತಾನೆ.
ವಿವಿಧ ಕಾಯಿಲೆಗಳಿಗೆ ಒಳಗಾದವರಿಗೆ ಸಂಗೀತದ ಮೂಲಕ ಚಿಕಿತ್ಸೆ ನೀಡಬಹುದು. ಆದರೆ, ಅದು ವರ್ಷಗಟ್ಟಲೆ ನಡೆಯುವ ಪ್ರಕ್ರಿಯೆ. ಇಂಥ ಕಾಯಿಲೆಗೆ ಇದೇ ರಾಗ ಮದ್ದು ಎನ್ನುವಂತಿಲ್ಲ. ಸರಿಗಮಪ ಎಂಬ ಶಬ್ದ ಕಿವಿಗೆ ಬಿದ್ದಾಗ ಮೆದುಳಲ್ಲಿಯ ಆಡಿಟರಿ ಸೆಂಟರ್ ಪ್ರವೇಶಿಸುತ್ತದೆ. ಆಗ ರೋಗಿ ಪ್ರತಿಕ್ರಿಯಿಸುತ್ತಾನೆ.
ಸಂಗೀತ ಎಲ್ಲ ವಯೋವಾನದವರಿಗೂ ಸಂತೋಷ ನೀಡುವ ಜತೆಗೆ ಮಾನಸಿಕ ಒತ್ತಡವನ್ನೂ ದೂರಮಾಡುತ್ತದೆ. ಹಾಗಾಗಿ ಸಂಗೀತ ಒಂದು ರೀತಿಯಲ್ಲಿ ಧ್ಯಾನವೂ ಹೌದು. ಅದು ಜ್ಞಾಪಕಶಕ್ತಿ ವೃದ್ಧಿ, ಏಕಾಗ್ರತೆ, ನೋಟ, ಆಲಿಸುವ ಕೌಶಲ್ಯ ಹೆಚ್ಚಿಸುತ್ತದೆ.
ಬುದ್ಧಿಮಾಂದ್ಯರಿಗೂ ಸಂಗೀತ ಚಿಕಿತ್ಸೆ
ಸಂಗೀತ ಚಿಕಿತ್ಸೆ ಈಗ ಎಲ್ಲೆಡೆ ಲಭ್ಯವಿದ್ದು, ಬುದ್ಧಿಮಾಂದ್ಯರಿಗಾಗಿ ಬೆಂಗಳೂರಿನ ಮಲ್ಲೇಶ್ವರಂ 'ಹಂಸ ಕುಟೀರ'ವೆಂಬ ಸಂಗೀತ ಶಾಲೆಯಿದೆ. ಅಲ್ಲಿ ಬುದ್ಧಿಮಾಂದ್ಯರಿಗೆ ಸಂಗೀತದ ಮೂಲಕ ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ನಡೆಸಲಾಗುತ್ತಿದೆ.
ಪ್ರಸವ ವೇದನೆಯಿಂದ ಬಳಲುವ ಮಹಿಳೆಯರಿಗೂ ಸಂಗೀತದ ಮೂಲಕ ನೋವು ಮರೆಸುವ ಚಿಕಿತ್ಸಾ ಪದ್ಧತಿಯನ್ನು ದೆಹಲಿಯ ಅಪೋಲೋ, ಬೆಂಗಳೂರಿನ ವಾಣಿವಿಲಾಸ ಸೇರಿದಂತೆ ಅನೇಕ ಆಸ್ಪತ್ರೆಗಳು ಹೊಂದಿದ್ದು, ಅದಕ್ಕಾಗಿ ಆಸ್ಪತ್ರೆಗಳಲ್ಲಿಯೇ 'ಸಂಗೀತ ಚಿಕಿತ್ಸಾ ಘಟಕ'ವನ್ನು ಆರಂಭಿಸಿವೆ.
ಪಶು, ಮರಗಳನ್ನೂ ಬಿಟ್ಟಿಲ್ಲ
ಪ್ರಾಣಿಗಳಿಗೂ ಸಂಗೀತ ಚಿಕಿತ್ಸೆ ನೀಡುವ ಮೂಲಕ ಅವುಗಳ ಆರೋಗ್ಯವೃದ್ಧಿಯಾಗುತ್ತದೆ. ಹಸುವಿಗೆ ದಿನನಿತ್ಯ ಬೆಳಗ್ಗೆ ಸತತ ಮೂರು ಗಂಟೆಗಳ ಕಾಲ ಸಂಗೀತ ಕೇಳಿಸಿದರೆ ಹಿಂದಿನ ದಿನಗಳಿಗಿಂತ ಹೆಚ್ಚಿನ ಹಾಲನ್ನು ನೀಡುತ್ತದೆ ಎಂಬುದು ಸಾಬೀತು ಪಡಿಸಿದ್ದಾರೆ ಮೈಸೂರಿನ ನರರೋಗ ತಜ್ಞ ಡಾ.ಶ್ರೀಪಾದ ಸಾಂಗ್ಲಿ.
ಅಲ್ಲದೇ ಸಸ್ಯಗಳು ಮತ್ತು ಬೆಳೆಗಳಿಗೆ ನಿರಂತರ ಸಂಗೀತ ಕೇಳಿಸುವುದರಿಂದ ಸಸ್ಯ ಸೊಂಪಾಗಿ ಬೆಳೆಯುವ ಜತೆಗೆ ಅಧಿಕ ಇಳುವರಿಯನ್ನೂ ನೀಡುತ್ತದೆ ಎನ್ನಲಾಗಿದೆ. ಇಂದಿಗೂ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಸೇರಿದಂತೆ ಮತ್ತಿತರ ಭಾಗಗಳಲ್ಲಿಕೆಲವು ರೈತರು ಹೊಲಗಳಲ್ಲಿ ಸಣ್ಣಗಾತ್ರದ ಧ್ವನಿವರ್ಧಕದಲ್ಲಿ ಸಂಗೀತವನ್ನು ಬಿತ್ತರಿಸುವ ಮೂಲಕ ರಾಗಿ, ಜೋಳ, ಬತ್ತ, ಸೂರ್ಯಕಾಂತಿ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಪಡೆದಿದ್ದಾರೆ.
ಸಂಗೀತದ ರಾಗ, ತಾಳ, ಗತಿ, ನಡೆ, ಸ್ಥಾಯಿಯೂ ಜ್ಞಾಪಕಶಕ್ತಿ ಹೆಚ್ಚಿಸುವ ಜತೆಗೆ ಪ್ರತಿ ಮುಂಜಾನೆ ಉತ್ತಮ ಸಂಗೀತ ಆಲಿಸಿದರೆ, ದಿನವಿಡಿ ಉಲ್ಲಾಸದಿಂದಿರಲು ಸಾಧ್ಯ. ಸಂಜೆ ರಾಗಗಳು ದಿನದ ಬಳಲಿಕೆ ನಿವಾರಿಸಿ ಮನಸನ್ನು ಹಗುರಾಗಿಸುತ್ತವೆ.ಟಿ
ಯಾವ ರೋಗ ನಿಯಂತ್ರಣಕ್ಕೆ ಯಾವ ರಾಗ?