ಆರೋಗ್ಯ-ಜೀವನಶೈಲಿ

ಲೈಫ್ ಆಫ್ ಪೈಲ್ಸ್

ಬಹಳ ಹೊತ್ತು ಕೂತು ಕೆಲಸ ಮಾಡುವವರಿಗೆ, ದಿನವೂ ಹೆಚ್ಚು ಪ್ರಯಾಣ ಮಾಡುವವರಿಗೆ ಸಾಮಾನ್ಯವಾಗಿ ಕಾಡುವ ತೊಂದರೆ ಮೂಲವ್ಯಾಧಿ (ಮೊಳಕೆ ರೋಗ). ಇದಕ್ಕೆ ಸಾಕಷ್ಟು ಔಷಧಿ ಮಾತ್ರೆಗಳಿವೆ. ಅತ್ಯಾಧುನಿಕ ಶಸ್ತ್ರಚಿಕಿತ್ಸೆಯೂ ಲಭ್ಯ. ಆದರೂ, ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳೋದು ಕಷ್ಟ.

ಆದರೆ, ಮನೆಯಲ್ಲಿ ಸಿಗುವ ಸರಳ ಔಷಧಿಗಳಿಂದ ಈ ರೋಗವನ್ನು ಸಾಕಷ್ಟು ನಿಯಂತ್ರಣಕ್ಕೆ ತರಬಹುದು. ಈ ರೋಗಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು ಇಲ್ಲಿವೆ...

ಮನೆಯಲ್ಲಿಯೇ ಇದೆ ಮದ್ದು

  • ಒಂದು ದೊಡ್ಡ ಟಬ್‌ನಲ್ಲಿ ಉಗುರು ಬೆಚ್ಚಗಿನ ನೀರನ್ನು ತುಂಬಿಸಿ ಅದರಲ್ಲಿ ರೋಗಿಯು ಕುಳಿತುಕೊಳ್ಳಬೇಕು. ಮಲವಿಸರ್ಜನೆಯ ನಂತರ ದಿನಕ್ಕೆ 2-3 ಬಾರಿ ಕುಳಿತುಕೊಂಡರೆ ಒಳಿತು.
  • ಮೂಲಂಗಿಯನ್ನು ಜಜ್ಜಿ ರಸ ತೆಗೆದು ಬೆಳಗ್ಗೆ ಹಾಗೂ ರಾತ್ರಿ ಖಾಲಿ ಹೊಟ್ಟೆಯಲ್ಲಿ 5-6 ಚಮಚ ಸೇವಿಸಬೇಕು.
  • ಮೂಲಂಗಿ ರಸದೊಂದಿಗೆ ಗೋಪಿಚಂದನವನ್ನು ಅರೆದು ಮೊಳಕೆಗೆ ಲೇಪ ಮಾಡಬೇಕು.
  • ಮೂಲಂಗಿಯನ್ನು ಹೆಚ್ಚಿ, ಅದರ ಸೊಪ್ಪಿನೊಂದಿಗೆ ತಿನ್ನಲು ದಿನಕ್ಕೆರಡು ಸಾರಿಯಂತೆ ಕೊಡಬೇಕು.
  • ಮುಟ್ಟಿದರೆ ಮುನಿ ಸೊಪ್ಪನ್ನು ಅರೆದು ಕಲ್ಕವನ್ನು ಬಟ್ಟೆಯ ಮೇಲೆ ಲೇಪಿಸಿ ಗುದದ್ವಾರದಲ್ಲಿ ಕಟ್ಟಬೇಕು.
  • ಶತಾವರಿ ಬೇರು ಒಂದು ತೊಲದಷ್ಟು (12 ಗ್ರಾಂ) ಜಜ್ಜಿ ಒಂದು ಲೋಟದಷ್ಟು ಮಜ್ಜಿಗೆ ಬೆರೆಸಿ ದಿನಕ್ಕೊಂದು ಬಾರಿಯಂತೆ 3 ದಿವಸ ನೀಡಬೇಕು.
  • ಲೋಳೆಸರದ ಎಲೆಯ ತಿರುಳನ್ನು 1 ಚಮಚದಷ್ಟು ದಿನಕ್ಕೆ 3 ಬಾರಿಯಂತೆ 15 ದಿವಸದವರೆಗೆ ಕೊಡಬೇಕು.
  • ಊಟದಲ್ಲಿ ಸುವರ್ಣಗೆಡ್ಡೆ, ವಿವಿಧ ಗೆಡ್ಡೆ ಗೆಣಸು, ಸೊಪ್ಪು ತರಕಾರಿಗಳನ್ನು ಯಥೇಚ್ಛವಾಗಿ
  • ಬಳಸಿ.
  • ಯಥೇಚ್ಛವಾಗಿ ನೀರು, ಎಳನೀರು, ಮಜ್ಜಿಗೆ, ಬಾಳೆಹಣ್ಣುಗಳನ್ನು ಸೇವಿಸಿ.
  • ನಿಯಮಿತ ವ್ಯಾಯಾಮ, ನಡಿಗೆ ಮತ್ತು ಮಲವಿಸರ್ಜನೆ.
  • ನಾರಿನಾಂಶವುಳ್ಳ ತರಕಾರಿಗಳನ್ನು ಸೇವಿಸಿ
ಗಟ್ಟಿ ಪದಾರ್ಥ ಬೇಡ
  • ಗಟ್ಟಿ ಪದಾರ್ಥಗಳು, ಅತಿಯಾದ ಮಾಂಸಹಾರ, ಆಲೂಗಡ್ಡೆ, ಬಟಾಣಿ, ಹಸಿಮೆಣಸು ತಿನ್ನಬಾರದು.
  • ಧೂಮಪಾನ, ಮದ್ಯಪಾನ, ಮಸಾಲೆ ಹಾಗೂ ಎಣ್ಣೆ ಪದಾರ್ಥಗಳು, ಕೋಕಾಕೋಲಾದಂಥ ಪಾನೀಯಗಳನ್ನು ವರ್ಜಿಸಿ.
ವ್ಯಾಧಿಗೆ ಕಾರಣವೇನು?
  •     ಅತಿ ಖಾರ, ಮಸಾಲೆ ಪದಾರ್ಥಗಳ ಸೇವನೆ.
  •     ದೀರ್ಘಕಾಲದ ಮಲಬದ್ಧತೆ.
  •     ತಂಬಾಕು, ಮದ್ಯಪಾನ ಇತ್ಯಾದಿ ಚಟಗಳು.
  •     ಒಂದೇ ಜಾಗದಲ್ಲಿ ಜಾಸ್ತಿ ಹೊತ್ತು ಕುಳಿತು ಕೆಲಸ ಮಾಡುವುದು.
ಲಕ್ಷಣಗಳೇನು?
  •     ತೀವ್ರವಾದ ಮಲಬದ್ಧತೆ
  •     ಗುದದ್ವಾರದ ಒಳಗೆ ಹಾಗೂ ಹೊರಗೆ ಮೊಳಕೆ ಕಾಣಿಸಿಕೊಳ್ಳುತ್ತದೆ.
  •     ರಕ್ತಸ್ರಾವ ಸಹಿತ ಅಥವಾ ರಕ್ತಸ್ರಾವ ರಹಿತ ಮೊಳಕೆಗಳು
  •     ಗುದದ್ವಾರದ ಹತ್ತಿರ ನವೆ ಕಾಣಿಸಿಕೊಳ್ಳುವುದು.
  •     ಗುದಭಾಗದಲ್ಲಿ ನೋವೂ ಕಾಣಿಸಿಕೊಳ್ಳಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!