ಸ್ವಲ್ಪ ಹುಳಿ ಪದಾರ್ಥವನ್ನು ತಿಂದ ಕೂಡಲೇ ತಲೆನೋವು. ವಾಮಿಟಿಂಗ್ ಸೆನ್ಷೇಷನ್. ಬೆಳಗಿನ ತಿಂಡಿ ತುಸು ತಿಂದ್ರೂ ಕಷ್ಟ. ಬಿಟ್ರಂತೂ ಮತ್ತೂ ಕಷ್ಟ. ಇದಕ್ಕೆ ಆಮ್ಲ ಪಿತ್ತವೇ ಕಾರಣ. ಈ ಸಮಸ್ಯೆಗಳ ಸುತ್ತ ಒಂದು ನೋಟ.
ಪ್ಲಾಬ್ಲಂಗೆ ಕಾರಣಗಳೇನು?
* ಮಸಾಲೆ ಪದಾರ್ಥಗಳ ಅತಿಯಾದ ಸೇವನೆ.
* ಜೀರ್ಣಿಸಲು ಕಷ್ಟವಾಗುವ ಆಹಾರ ಸೇವನೆ.
* ಮದ್ಯಪಾನ ಮತ್ತು ತಂಬಾಕು ಸೇವನೆ.
* ಅನಿಯಮಿತವಾಗಿ ಊಟ ಮಾಡುವುದು.
* ಮಾನಸಿಕ ಒತ್ತಡ.
* ಸಾಸಿವೆ ಎಣ್ಣೆ ಹಾಗೂ ಹುರುಳಿ ಸೇವನೆ.
* ತಂಗಳು ಆಹಾರ ಸೇವನೆ.
* ಚಾಟ್ಸ್, ಕೃತಕ ತಂಪು ಪಾನೀಯಗಳ ಬಳಕೆ.
* ಖಾರ, ಹುಳಿ ಪದಾರ್ಥಗಳ ಅತಿಯಾದ ಸೇವನೆ.
* ಅತಿಯಾಗಿ ಕಾಫಿ/ ಟೀ ಸೇವನೆ.
ಪಿತ್ತ ಲಕ್ಷಣಗಳೇನು?
* ಹುಳಿ ತೇಗು
* ಅಜೀರ್ಣ
* ಹೊಟ್ಟೆನೋವು
* ತಲೆನೋವು
* ಹೊಟ್ಟೆ ಹಾಗೂ ತಲೆ ಉರಿ
* ವಾಕರಿಕೆ
* ಮಲಬದ್ಧತೆ
* ತಲೆ ಸುತ್ತುವುದು
ಏನು ಮಾಡಬಹುದು?
* ಭತ್ತದ ಅರಳನ್ನು ಸಕ್ಕರೆ ಮತ್ತು ಹಾಲು ಬೆರೆಸಿ ಸೇವಿಸುವುದು.
* ಶುಂಠಿ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯುವುದು.
* ಪುದೀನಾ ರಸಕ್ಕೆ ಸಮ ಪ್ರಮಾಣದ ಜೇನುತುಪ್ಪ ಸೇರಿಸಿ ತಿನ್ನುವುದು.
* ಜೀರಿಗೆ ಕಷಾಯ ಕುಡಿಯುವುದು.
* ಅಜವಾನ ಬೀಜವನ್ನು ನಿಂಬೆಯ ರಸದಲ್ಲಿ 24 ಗಂಟೆ ನೆನೆಸಿ ನಂತರ ಒಣಗಿಸಿ, ಅದರ ಪುಡಿಯನ್ನು ಸೇವಿಸಿದರೆ ಒಳ್ಳೆಯದು.
* ಕೊತ್ತಂಬರಿ ಸೊಪ್ಪಿನ ರಸಕ್ಕೆ ಕಲ್ಲು ಸಕ್ಕರೆ ಅಥವಾ ಜೀರಿಗೆ ಸೇರಿಸಿ ಕುಡಿಯುವುದು.
ಏನು ಮಾಡಿದರೆ ಒಳಿತು?
ಬಾರ್ಲಿ, ಗೋದಿ ಅಥವಾ ಲಾಜ (ಬತ್ತದ ಅರಳು) ನೀರಿನ ಜತೆ ಸೇರಿಸಿ ಕುದಿಸಿ ಸಕ್ಕರೆ ಮತ್ತು ಜೇನಿನ ಜತೆ ಸೇವಿಸುವುದು. ಹೆಸರುಕಾಳು, ಹೆಸರುಬೇಳೆ, ಪಡವಲಕಾಯಿ, ಸೌತೆಕಾಯಿ, ಗೋರಿಕಾರಿ, ಬಸಳೆಸೊಪ್ಪು, ಹೊನಗೊನೆಸೊಪ್ಪು.
ಏನನ್ನು ತ್ಯಜಿಸಬೇಕು?
ಉದ್ದು, ಹುರುಳಿ, ಹುಳಿ ಪದಾರ್ಥ, ಅತಿಯಾದ ಉಪ್ಪು, ಹುಳಿ, ಖಾರ, ಮಸಾಲೆ ಪದಾರ್ಥಗಳು, ಮದ್ಯಪಾನ,ಬೀಡಿ, ಸಿಗರೇಟು, ತಂಬಾಕು.