ಆರೋಗ್ಯ-ಜೀವನಶೈಲಿ

ಒಂದಿಷ್ಟು ಸನ್ನಡತೆಗಳು

ಸನ್ನಡತೆಗಳು (ಮ್ಯಾನರ್ಸ್) ಒಂದು ದೇಶದ, ಕುಟುಂಬದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ನಾವು ಎಲ್ಲೇ ಇರಲಿ, ಹೇಗೇ ಇರಲಿ ಕೆಲವು ನಡತೆಗಳು ಸದಾ ನಮ್ಮ ವ್ಯಕ್ತಿತ್ವದ ಒಂದು ಭಾಗವಾಗಿರಲಿ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಕೆಲವು ನಡತೆಗಳನ್ನು ಹೇಳಿ ಕೊಡಿ ಮತ್ತು ನೀವೂ ಅನುಸರಿಸಿ ಮಾದರಿಯಾಗಿ.

*    ಹಿರಿಯರ ಎದುರು ನಿಂತು ಮಾತನಾಡುವಾಗ ಬೆನ್ನಿನಿಂದ ತಲೆಯ ಭಾಗದವರೆಗೆ ಸ್ವಲ್ಪ ಬಗ್ಗಿರಲಿ.
*    ಪುಟಾಣಿ ಮಕ್ಕಳಲ್ಲಿ ಮಾತನಾಡುವಾಗ ಕಣ್ಣಿನಲ್ಲಿ ಹೊಳಪು ಇದ್ದು ಮುಗ್ಧತೆಯಿಂದ ಮಾತು ಬರಲಿ.
*    ಅನಾರೋಗ್ಯದವರನ್ನು ನೋಡಲು ಹೋಗುವಾಗ ಕೈಯಲ್ಲಿ ಹಣ್ಣುಗಳ ಪೊಟ್ಟಣವಿದ್ದು ಕಣ್ಣಿನಲ್ಲಿ ಹೃದಯಸ್ಪರ್ಶಿ ನೋವಿದ್ದು, ಮಾತು ಅಭಯ ನೀಡುವಂತಿರಲಿ.
*    ಸಭೆಯಲ್ಲಿ ಭಾಷಣ ಮಾಡುವಾಗ ಗಂಭೀರತೆಯಿದ್ದು, ಸಭಿಕರಿಗೆ ಹೃದಯದಲ್ಲಿ ಸಂತಸ ಬರುವಂಥ ವದನ ವಿರಲಿ.
*    ನೆಂಟರ ಮನೆಯಿಂದ ಹೊರಡುವಾಗ ಹಿರಿಯರಿದ್ದಲ್ಲಿ ಅವರಿಗೆ ಕಾಲು ಮುಟ್ಟಿ ನಮಸ್ಕರಿಸಿ.
*    ಒಂದೇ ವಯಸ್ಸಿನವರಲ್ಲಿ ಬೆರೆವಾಗ ಇನ್ನೂ ಸಮಯವನ್ನು ಕಳೆಯಬೇಕಿತ್ತಲ್ಲ ಅವರೊಂದಿಗೆ ಎನ್ನುವ ನಡತೆಯಿರಲಿ.
*    ಯಾವುದೇ ವಸ್ತುವು ನಮ್ಮ ಅಗತ್ಯಗಳಿಗೆ ಬೇಕಾದಲ್ಲಿ ಆದಷ್ಟು ಮುಂಚಿತವಾಗಿ ತಿಳಿಸಿ ಪಡೆದು ಹೇಳಿದ ಸಮಯಕ್ಕೆ ಹಿಂತಿರುಗಿಸಿ ಜೊತೆಯಲ್ಲಿ ಜಾಗೃತೆ ವಹಿಸುವುದನ್ನು ಮರೆಯದಿರಿ.
*    ಇನ್ನೊಬ್ಬರ ಒಳ್ಳೆಯ ಗುಣಗಳನ್ನು, ಅವರು ತೊಟ್ಟ ಉಡುಗೆ, ಆಭರಣಗಳು ಸೊಗಸಾಗಿದ್ದಲ್ಲಿ ಮುಕ್ತವಾಗಿ ಪ್ರಶಂಶಿಸಿ.
*    ಮನೆಗೆ ಬಂದ ಅಥಿತಿಗಳಿಗೆ ಒಳ್ಳೆಯ ಸತ್ಕಾರದೊಂದಿಗೆ, ಮನೆಯಲ್ಲಿ ಮಾಡಿದ ಸಿಹಿ ತಿಂಡಿಯನ್ನು ಕೊಟ್ಟು ಕಳುಹಿಸಿ.
*    ನೆಂಟರ ಮನೆಗೆ ಹೋದಾಗ ನಮ್ಮ ಮಕ್ಕಳು ಇಲ್ಲವೇ ನಾವು ತೆಗೆದ ವಸ್ತುವನ್ನು ಎಲ್ಲಿತ್ತೋ ಅದೇ ಜಾಗದಲ್ಲಿ ಇಟ್ಟು ಬಿಡುವುದು ಸೂಕ್ತ.
*    ಮನೆಯೊಡತಿ ಒಬ್ಬಳೇ ಇದ್ದಾಗ ಬಡಿಸಲು ಸಹಕರಿಸಿ. ಅನಂತರ ಅವರ ಜೊತೆ ಊಟ ಮಾಡಿ. ಆ ಊಟದ ಸೊಗಸೇ ಬೇರೆ.
*    ಯಾವುದೇ ಸಮಾರಂಭಗಳಲ್ಲಿ ಪರಿಚಯವಿದ್ದ ಎಲ್ಲ ಬಾಂಧವರಲ್ಲಿ ಆದಷ್ಟು ಮಾತನಾಡಲು ಪ್ರಯತ್ನಿಸಿ. ಸಾಧ್ಯವಾಗದಿದ್ದಲ್ಲಿ ಮುಖದಲ್ಲಿ ನಗು ಇರಲಿ. ಇಲ್ಲಾ ಕೈ ಎತ್ತಿ ವಿಶ್ ಮಾಡಿದರೂ ಖುಷಿ ಎನಿಸುತ್ತದೆ.
*    ಇತರರು ಮಾತನಾಡುವಾಗ ಮಧ್ಯ ಬಾಯಿ ಹಾಕಬೇಡಿ. ಅವರು ಹೇಳುವುದನ್ನು ಆಸಕ್ತಿಯಿಂದ ಕೇಳಿಸಿಕೊಂಡು ಪ್ರತಿಕ್ರಿಯಿಸಿ.
*    ಇಬ್ಬರಿಗೂ ನೋವುಂಟಾಗುವ ಅನಗತ್ಯ ವಿಷಯಗಳನ್ನು ಹಂಚಿಕೊಳ್ಳುವುದನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ.
*    ಕಸವನ್ನು ಪಕ್ಕದ ಮನೆಯೆಡೆ ಗುಡಿಸುವುದನ್ನು ಬಿಟ್ಟು ಕಸದ ಬುಟ್ಟಿಗೇ(ತೊಟ್ಟಿ) ಹಾಕಿ.

- ಕೃಷ್ಣವೇಣಿ ಪ್ರಸಾದ್ ಮುಳಿಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್: ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'; Video ವೈರಲ್!