ಹೆಣ್ಣು ಮಕ್ಕಳಿಗೆ ಕೆಲವು ವಿಶೇಷ ಅಂಗಗಳಿವೆ. ಅವುಗಳಿಂದಲೇ ಆಕೆಗೆ ಹೆಣ್ತನವನ್ನು ಅನುಭವಿಸಲು ಸಾಧ್ಯವಾಗುವುದು. ದುರಂತವೆಂದರೆ ಜೀವನದ ಕಷ್ಟದ ಕ್ಷಣಗಳನ್ನೂ ಆಕೆ ಈ ಅಂಗಾಂಗಗಳಿಗೆ ಕಾಡುವ ಸಮಸ್ಯೆಯಿಂದಲೇ ಅನುಭವಿಸುತ್ತಾಳೆ.
ಅವುಗಳಲ್ಲಿ ಅಂಡಾಶಯದ ಬೊಕ್ಕೆ (ಒವರಿಯನ್ ಸಿಸ್ಟ್) ಗಳೂ ಪ್ರಮುಖವಾದದ್ದು. ಹರೆಯದ ನಾರಿಯರನ್ನು ಕಾಡುವ ಈ ಸಿಸ್ಟ್ ಅನ್ನು ನಿಯಮಿತ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, ಎಂಆರ್‌ಐ, ಸಿಟಿ ಸ್ಕ್ಯಾನ್, ಗರ್ಭಧಾರಣೆ ಅಥವಾ ಕ್ಯಾನ್ಸರ್ ಪತ್ತೆ ಹಚ್ಚುವ ರಕ್ತಪರೀಕ್ಷೆ ಕಂಡುಹಿಡಿಯಬಹುದು.
ಅಂಡಾಶಯದಲ್ಲಿ ದ್ರವದಿಂದ ತುಂಬಿದ ಚೀಲದಂತೆ ಈ ಸಿಸ್ಟ್ ಬೆಳೆಯುತ್ತದೆ. ಹೆಚ್ಚಿನ ಬೊಕ್ಕೆಗಳು ಹೆಚ್ಚು ಹಾನಿಕಾರಕವೂ ಅಲ್ಲ, ಯಾವುದೇ ಲಕ್ಷಣಗಳನ್ನೂ ತೋರುವುದಿಲ್ಲ. ಆದರೆ, ನೋವು ಮತ್ತು ಅನಿಯಮಿತ ರಕ್ತಸ್ರಾವದಂಥ ತೊಂದರೆಗಳನ್ನು ಉಂಟುಮಾಡುತ್ತವೆ. ತಮ್ಮಷ್ಟಕ್ಕೆ ತಾವೇ ಕೆಲವು ಸಿಸ್ಟ್‌ಗಳು ಗುಣವಾಗುತ್ತವೆ. ಮತ್ತೆ ಕೆಲವಕ್ಕೆ ಶಸ್ತ್ರ ಚಿಕಿತ್ಸೆಯ ಅಗತ್ಯವಿರುತ್ತದೆ. ಬಂಜೆತನಕ್ಕೊಳಗಾದ ಮಹಿಳೆಯರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಸಿಸ್ಟ್ ಇದ್ದರೆ ಏನಾಗುತ್ತದೆ?