ಆರೋಗ್ಯ-ಜೀವನಶೈಲಿ

ರೊಬೋಟ್ ನಾಟಿ

ತಲೆ ಇದ್ದವರಿಗೆ 'ಬಿಸಿ' ತಪ್ಪಿದ್ದಲ್ಲ. ಕೂದಲು ಉದುರುತ್ತಿದ್ದರಂತೂ ತಲೆ ಸಿಡಿದು ಹೋಗುವುದೊಂದೇ ಬಾಕಿ. ಮುಪ್ಪಾದರೂ ಸೌಂದರ್ಯಪ್ರಜ್ಞೆಯ ಪ್ರತೀಕವೆಂಬಂತೆ 'ಕೂದಲು ಕಸಿ' ಮಾಡಿಸಿಕೊಳ್ಳುವ ಪರಿಪಾಠ ಹೆಚ್ಚಾಗಿದ್ದರಿಂದ ಕೂದಲಿಗೆ ಭಾರಿ ಬೆಲೆ ಬಂದಿದೆ!
ಪರಿಸರದ ಮೇಲಿನ ದುಷ್ಪರಿಣಾಮ ಹಾಗೂ ಆಹಾರದಲ್ಲಿನ ವೈರುಧ್ಯದಿಂದ ಈ ಸಮಸ್ಯೆ ಉಲ್ಬಣಿಸುತ್ತಿರುವುದಿಂದ ಗಲ್ಲಿಗೊಂದರಂತೆ ಕೂದಲು ಕಸಿ ಮಾಡುವ ಸೆಂಟರ್‌ಗಳು ತಲೆ ಎತ್ತಿವೆ. ವೈಜ್ಞಾನಿಕ ಹಾಗೂ ತಾಂತ್ರಿಕ ಬೆಳವಣಿಗೆಯ ಇನ್ನೊಂದು ಮಗ್ಗುಲಾಗಿ ಈಗ ಸೆಮಿ ರೋಬೋಟಿಕ್ ಹೇರ್ ಟ್ರಾನ್ಸ್‌ಪಲಂಟ್ (ರೊಬೋಟ್ ಮೂಲಕ ಕೂದಲು ಕಸಿ) ಪದ್ಧತಿ ಪರಿಚಯಗೊಂಡಿದೆ. ಇದರ ರೂವಾರಿ ಬೆಂಗಳೂರಿನ ಹೇರ್‌ಲೈನ್ ಇಂಟರ್‌ನ್ಯಾಷನಲ್ ಕ್ಲಿನಿಕ್.

ಏನಿದು ತಂತ್ರಜ್ಞಾನ?
ಕೂದಲು ಕಸಿ ಮಾಡಲು ಇದುವರೆಗೆ ತಜ್ಞರು ಇರುತ್ತಿದ್ದರು. ಆದರೆ, 'ಸೆಮಿ ರೊಬೋಟಿಕ್ ಹೇರ್ ಟ್ರಾನ್ಸ್‌ಪ್ಲಂಟ್‌' ಪದ್ಧತಿಯಲ್ಲಿ ತಜ್ಞರು ಮಾಡುವ ಕೆಲಸವನ್ನು ರೊಬೋಟ್ ನಿರ್ವಹಿಸುತ್ತದೆ. ಅದಕ್ಕೆ ಸಲಹೆ, ಸೂಚನೆ ನೀಡುವ ಹಾಗೂ ಕಾರ್ಯನಿರ್ವಹಣೆ ಉಸ್ತುವಾರಿಗೆ ತಜ್ಞರು ಇರುತ್ತಾರೆ. ಅವರು ಹೇಳಿದ ಹಾಗೂ ಸೂಚಿಸಿದಂತೆಯೇ ರೊಬೋಟ್ ಕಾರ್ಯನಿರ್ವಹಿಸುತ್ತದೆ.

ಏನು ಉಪಯೋಗ?
ರೋಬೋಟಿಕ್ ಕಿಯೋಗ್ರಾಫ್ಟ್ ಮೂಲಕ ತುರ್ತು ಕೂದಲು ಕಸಿ ಚಿಕಿತ್ಸೆ ಆರಂಭಿಸುವ ವ್ಯವಸ್ಥೆಯಡಿ ಪಾಲಿಕ್ಯೂಲರ್ ಯುನಿಟ್ ಎಕ್ಸ್‌ಟ್ರಾಕ್ಷನ್ ಮಾಡಲಾಗುತ್ತದೆ. ಸುಲಭವಾಗಿ ಕೂದಲು ಕಸಿ ಮಾಡುವುದಕ್ಕೆ ಇದು ನೆರವಾಗುತ್ತದೆ. ಇದರ ವಿಶೇಷತೆಯೆಂದರೆ, ನಯವಾದ ಕೂದಲು ಕಸಿಗೆ ನೆರವಾಗುತ್ತದೆ. ಇದರ ಮೂಲಕ ಕಸಿ ಮಾಡಿಸಿಕೊಂಡವರಿಗೆ ಶೀಘ್ರವಾಗಿ ಕೂದಲು ಬೆಳೆಯುವುದಲ್ಲದೆ, ಸರ್ಜರಿಯೂ ಸುಲಭವಾಗಿ ಹೆಚ್ಚು ಅಡ್ಡ ಪರಿಣಾಮವಿಲ್ಲದೆ ನೆರವೇರುತ್ತದೆ. ಕೂದಲು ಕ್ಷಿಪ್ರ ಮರು ಹುಟ್ಟು ಪಡೆಯುತ್ತವೆ.
ರೊಬೋಟ್ ಮೂಲಕವೇ ಎಲ್ಲ ಕಾರ್ಯವಿಧಾನಗಳು ನಡೆಯುವುದರಿಂದ ಕೂದಲು ಜೋಡಣೆ ಸರಳ ಹಾಗೂ ಸುಲಲಿತವಾಗಿ ನೆರವೇರುತ್ತದೆ. ಕ್ಷಿಪ್ರವಾಗಿ ಶಸ್ತ್ರಚಿಕಿತ್ಸೆ ಮುಗಿಯುತ್ತದೆ. ಈ ಪದ್ಧತಿಯಲ್ಲಿ ಪ್ರತಿ ಗಂಟೆಗೆ ಗರಿಷ್ಠ 600 ಕೂದಲು ನಾಟಿ ಮಾಡಬಹುದು. ಅಲ್ಲದೆ, ಈ ಪ್ರಕ್ರಿಯೆಯಲ್ಲಿ ತಲೆಯಲ್ಲಿ ಕಲೆಗಳೂ ಉಳಿಯುವುದಿಲ್ಲ.
ಒಂದೇ ಸೀಸನ್‌ನಲ್ಲಿ 2000ದವರೆಗೂ ಕೂದಲು ನಾಟಿ ಮಾಡಬಹುದು. ಮುಂದಿನ ಬಾರಿ ಕೂದಲು ಕಸಿ ಮಾಡಿಸಿಕೊಳ್ಳಲು ಇದು ಅನುಕೂಲವಾಗುತ್ತದೆ. ಇದು ನೂತನ ತಂತ್ರಜ್ಞಾನವಾಗಿದ್ದು ವೇಗವಾಗಿ ಕೆಲಸ ನಡೆಯುತ್ತದೆ ಎನ್ನುತ್ತಾರೆ ಹೇರ್‌ಲೈನ್ ಇಂಟರ್ ನ್ಯಾಷನಲ್ ಹೆಲ್ತ್ ಕೇರ್ ಕ್ಲಿನಿಕ್‌ನ ನಿರ್ದೇಶಕಿ ಬಾನಿ. ಹೆಚ್ಚಿನ ಮಾಹಿತಿಗಾಗಿ 080-25299002, 25299003ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!