ಹಲ್ಲುನೋವು ಅಥವಾ ವಸಡಿನಲ್ಲಿ ರಕ್ತಸ್ರಾವವಾದಾಗ ಹಲ್ಲಿನ ವೈದ್ಯರ ಬಳಿ ಹೋಗುತ್ತೇವೆ. ಆದರೆ, ಹಲ್ಲಿನ ಹುಳುಕು, ಬಾಯಿಯ ದುರ್ನಾತ, ವಸಡು ಊತ ಬಂದಾಗಲೂ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಹಲ್ಲಿನ ರೋಗ ಬಾರದಂತೆ ಎಚ್ಚರ ವಹಿಸಲು ಡೆಂಟಿಸ್ಟ್ ಸಲಹೆ, ಸಹಕಾರ ಅಗತ್ಯ. ಜಾಹಿರಾತುಗಳಲ್ಲಿ ತೋರಿಸುವಂತೆ ಕೇವಲ ಉತ್ತಮ ಪೇಸ್ಟ್ ಅಥವಾ ಬ್ರಷ್ ಬಳಕೆಯಿಂದ ಹಲ್ಲಿನ ಆರೋಗ್ಯ ಕಾಪಾಡಲು ಸಾಧ್ಯವಿಲ್ಲ. ದಂತ ಆರೋಗ್ಯಕ್ಕಾಗಿ ಆಗಾಗ ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ, ಸಹಕಾರಗಳನ್ನು ಪಡೆಯುವುದು ಅಗತ್ಯ.